ಪ್ರವಾಸಕ್ಕೆ ತಂದೆ ಹಣ ನೀಡಿಲ್ಲವೆಂದು ವಿದ್ಯಾರ್ಥಿ ಆತ್ಮಹತ್ಯೆ

ಕೋಲಾರ, ಗುರುವಾರ, 7 ಡಿಸೆಂಬರ್ 2017 (15:05 IST)

ಕೋಲಾರ: ಪ್ರವಾಸಕ್ಕೆ ತಂದೆ ಹಣ ನೀಡಿಲ್ಲವೆಂದು ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು  ಕೋಲಾರದ ಕೆ.ಜಿ.ಎಫ್. ತಾಲೂಕಿನ ಕ್ಯಾಸಂಬಳ್ಳಿಯಲ್ಲಿ ನಡೆದಿದೆ.


ಕುಮಾರ್ ಎಂಬುವವರ ಮಗ ವಿನಯ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತ ಕೆ.ಜಿ.ಎಫ್. ಪಟ್ಟಣದ ಆಂಡ್ರಸನ್ ಪೇಟೆಯ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದನು. ಶಾಲೆಯ ಆಡಳಿತ ಮಂಡಳಿ ಆಯೋಜಿಸಿದ ಮೈಸೂರು ಪ್ರವಾಸಕ್ಕೆ ಬೇಕಾದ ರೂಪಾಯಿಯನ್ನು ತಂದೆ ಬಳಿ ಕೇಳಿದನು.


 ಪೋಷಕರು ಹಣ ಕೊಡಲು ನಿರಾಕರಿಸಿದ್ದಕ್ಕೆ ನೊಂದ ಬಾಲಕ ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡನು. ಕೆ.ಜಿ.ಎಫ್ ನ ಬೇತಮಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯುವತಿಯ ಮನೆ ಬಾಗಿಲಿಗೆ ಬಂದು ಲೈಂಗಿಕ ಕಿರುಕುಳ ನೀಡಿದ ಭೂಪ

ಬೆಂಗಳೂರು: ಯುವತಿಯರ ಮೇಲೆ ಲೈಂಗಿಕ ಕಿರುಕುಳ, ದೌರ್ಜನ್ಯ ನಡೆಯುತ್ತಿರುವುದನ್ನು ನಾವು ಕೇಳಿರುತ್ತೇವೆ. ...

news

ಗುಜರಾತ್ ಚುನಾವಣೆ ರಾಮರಾಜ್ಯ, ರೋಮ್‌ರಾಜ್ಯದ ನಡುವಿನ ಯುದ್ಧ: ಬಿಜೆಪಿ ಸಂಸದ

ನವದೆಹಲಿ: ಗುಜರಾತ್‌ನಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ರಾಮ ರಾಜ್ಯ ಮತ್ತು ರೋಮ್ ರಾಜ್ಯದ ನಡುವೆ ...

news

ಅಪ್ರಾಪ್ತಳ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

ಬೆಂಗಳೂರು: 13 ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಮತ್ತು ...

news

ಲವ್ ಜಿಹಾದ್: ಮುಸ್ಲಿಂ ವ್ಯಕ್ತಿಯನ್ನು ಕೊಚ್ಚಿ ಸಜೀವವಾಗಿ ದಹಿಸಿದ ಆರೋಪಿ

ರಾಜ್ಸಾಮಂದ್: ಲವ್‌ಜಿಹಾದ್‌ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬನನ್ನು ...

Widgets Magazine
Widgets Magazine