ರಾಡ್ ಗಳಿಂದ ಸಾಮೂಹಿಕ ಹಲ್ಲೆ ನಡೆಸಿದ ವಿದ್ಯಾರ್ಥಿಗಳು!

ಕುಂದಾಪುರ, ಮಂಗಳವಾರ, 29 ಜನವರಿ 2019 (17:58 IST)

ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾದ ತಂಡವೊಂದು ಇಬ್ಬರ ಮೇಲೆ ಸಾಮೂಹಿಕವಾಗಿ ರಾಡುಗಳಿಂದ ಹಲ್ಲೆ ನಡೆಸಿದ ಘಟನೆ ನಡೆಸಿದೆ.

ಜನನಿಬಿಡವಾದ ಕಾಲೇಜು ರಸ್ತೆಯಲ್ಲೆ ಹಲ್ಲೆ ನಡೆದಿದ್ದು ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ. ಮಾರಾಮಾರಿಯ ವಿಡಿಯೊ ಕ್ಲಿಪಿಂಗ್ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಹಾಡಹಗಲೇ ಹಳೇ ದ್ವೇಷದ ಹಿನ್ನೆಲೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕುಂದಾಪುರ ಪಟ್ಟಣದ ಭಂಡಾರ್ಕಾರ್ಸ್ ಕಾಲೇಜು ನುಗ್ಗಿ, ಅಲ್ಲಿನ ವಿದ್ಯಾರ್ಥಿಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಭಂಡಾರ್ಕಾರ್ಸ್  ಕಾಲೇಜಿನಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿ ಮಿಥುನ್ ಹಾಗೂ ದ್ವಿತೀಯ ಬಿಬಿಎಂ ವಿದ್ಯಾರ್ಥಿ ಅಕ್ಷಯ್ ಮೇಲೆ ಹಲ್ಲೆ ಮಾಡಿದ್ದಾರೆ. ಹೊಡೆದಾಟ ತಪ್ಪಿಸಲು ಮುಂದಾದ ಕೆಲ ವಿದ್ಯಾರ್ಥಿಗಳ ಮೇಲೂ ಹಲ್ಲೆ ನಡೆಸಿ ವಿದ್ಯಾರ್ಥಿಗಳು ಗಾಯಗೊಳಿಸಿದ್ದಾರೆ.

ಸ್ಥಳೀಯರು ಒಟ್ಟಾಗುತ್ತಿದ್ದಂತೆ ಪುಂಡ ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ವಿದ್ಯಾರ್ಥಿಗಳು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಂಬಂಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವೆಂಟಿಲೇಟರ್ ಮೂಲಕ ನುಗ್ಗಿ ಕಳ್ಳತನ ಮಾಡಿದ ಖದೀಮರು

ಗೋಡೆ ಮೇಲೆ ಅಳವಡಿಸಿದ್ದ ವೆಂಟಿಲೀಟರ್ ಮೂಲಕ ಒಳ ನುಗ್ಗಿದ ಕಳ್ಳರು ಬೆಲೆ ಬಾಳುವ ವಸ್ತುಗಳನ್ನು ದೋಚಿ ...

news

ಲಿಂಗಾಯತ ಎನ್ನುವ ಕಾರಣಕ್ಕೆ ಶ್ರೀಗಳಿಗೆ ಭಾರತ ರತ್ನ ನೀಡಿಲ್ಲ ಎಂದ ಮಾಜಿ ಸಚಿವ!

ಲಿಂಗೈಕ್ಯರಾದ ಸಿದ್ದಗಂಗಾ ಶ್ರೀಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ, ...

news

ದೆಹಲಿ ವಿಶೇಷ ಪ್ರತಿನಿಧಿಯಾಗಿ ಡಾ. ಅಜಯ್ ಅಧಿಕಾರ ಸ್ವೀಕಾರ

ರಾಜ್ಯ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿಯಾಗಿ ಶಾಸಕ ಡಾ. ಅಜಯ್‌ಸಿಂಗ್ ಇಂದು ಕಾರ್ಯಭಾರ ...

news

ಪತ್ನಿ ಅಂದ್ರೆ ಹೀಗಿರಬೇಕು: ಪತಿ ಅಂಬರೀಶ್‌ಗೆ ವಿಸ್ಕಿ ಬಾಟಲ್ ಇಟ್ಟು ಪೂಜಿಸಿದ ಸುಮಲತಾ

ದಿವಂಗತರಾದವರಿಗೆ ಇಷ್ಟವಾದ ವಸ್ತು, ಆಹಾರವಿಟ್ಟು ಪೂಜಿಸುವುದು ವಾಡಿಕೆ. ಆದರೆ, ಜನಸಾಮಾನ್ಯರು ಇಹಲೋಕ ...