ಬುದ್ದಿ ಹೇಳೋಕೆ ಅಂತ ಇಬ್ಬರ ಜಗಳದಲ್ಲಿ ನಡುವೆ ಬಂದ ವ್ಯಕ್ತಿಗೆ ಆಗಬಾರದ್ದು ಆಗಿ ಹೋಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ವ್ಯಕ್ತಿಗೆ ಬುದ್ದಿವಾದ ಹೇಳಲು ಬಂದವನ ಮೇಲೆ ಆತನ ಸಹಚರರು ಹಲ್ಲೆ ನಡೆಸಿದ್ದಾರೆ.ಹುಬ್ಬಳ್ಳಿಯ ಮ್ಯಾಗ್ನಿಜ್ ಪ್ಲಾಟ್ ನಲ್ಲಿ ಘಟನೆ ನಡೆದಿದೆ. ವಿಜಯ ಹರಿಜನ, ಡೇವಿಡ್ ಪರಮಾತ್ಮ, ತಿರುಮಲೆ, ಶ್ಯಾಮ ಎಂಬುವರು ಮ್ಯಾಗ್ನಿಜ್ ಪ್ಲಾಟ್ ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಆ ವೇಳೆ ದೂರುದಾರ ಬುದ್ದಿವಾದ ಹೇಳಲು ಬಂದಾಗ ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ