Widgets Magazine

ನರೇಂದ್ರ ಮೋದಿಜೀ ಥ್ಯಾಂಕ್ಸ್ ಎಂದ ಸುಮಲತಾ ಅಂಬರೀಶ್

ನವದೆಹಲಿ| Krishnaveni K| Last Updated: ಬುಧವಾರ, 12 ಜೂನ್ 2019 (19:22 IST)
ನವದೆಹಲಿ: ಮಂಡ್ಯ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಸುಮಲತಾ ಅಂಬರೀಶ್ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ.
 

ಕಾರಣ ನವಂಬರ್ 24 ರಂದು ಮಂಡ್ಯದಲ್ಲಿ ನಡೆದಿದ್ದ ಬಸ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಕೇಂದ್ರ ಸರ್ಕಾರ 2 ಲಕ್ಷ ಪರಿಹಾರ ಕೊಡಲು ಮುಂದಾಗಿದೆ. ಇದಕ್ಕಾಗಿ ಸುಮಲತಾ ಕೇಂದ್ರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
 
ಟ್ವೀಟ್ ಮಾಡಿರುವ ಸುಮಲತಾ ‘ಮಂಡ್ಯ ಬಸ್ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ನೆರವಾಗಲು ಮುಂದೆ ಬಂದಿರುವ ನರೇಂದ್ರ ಮೋದಿಜೀ ಮತ್ತು ಕೇಂದ್ರ ಸರ್ಕಾರಕ್ಕೆ ನನ್ನ ಧನ್ಯವಾದಗಳು. ಇದು ವೈಯಕ್ತಿಕವಾಗಿ ನನಗೂ ಪರಿಣಾಮ ಬೀರಿದ ಮತ್ತು ನೋವು ತಂದ ಘಟನೆ. ನವಂಬರ್ 24 ರ ಟ್ರಾಜಿಡಿ ಯಾರೂ ಮರೆಯಲಾಗದು’ ಎಂದು ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :