ಜೆ.ಪಿ.ನಗರದ ಪ್ಲೇ ಹೋಮ್ ಮುಂದೆ ಅನುಮಾನಾಸ್ಪದ ವಸ್ತು ಪತ್ತೆ: ಭಯಭೀತರಾದ ಸ್ಥಳೀಯರು

ಬೆಂಗಳೂರು, ಬುಧವಾರ, 20 ಸೆಪ್ಟಂಬರ್ 2017 (10:50 IST)

ಜೆ.ಪಿ.ನಗರದ 6ನೇ ಹಂತದ ಪ್ಲೇ ಹೋಮ್ ಒಂದರ ಮುಂಭಾಗ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ಕೆಲ ಸ್ಥಳೀಯರು ಈ ವಸ್ತುವನ್ನ ಕಂಡ ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಕೂಡಲೇ ಶಾಲೆಗೆ ರಜೆ ಘೋಷಿಸಲ಻ಗಿದ್ದು, ವಸ್ತುವನ್ನ ವಶಕ್ಕೆ ಪಡೆದಿರುವ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.


ಒಂದು ದೊಡ್ಡ ಬ್ಯಾಗ್ ಮೇಲೆ ಮೊಬೈಲ್ ಫೋನನ್ನಿಟ್ಟು  ಬ್ಯಾಗ್`ನೊಳಗೆ ವಸ್ತುವಿಗೆ ವೈರ್ ಸುತ್ತಿ ಅದನ್ನ ಮೊಬೈಲ್`ಗೆ ಕನೆಕ್ಟ್ ಮಾಡಲಾಗಿದೆ. ಜೊತೆಗೆ ಒಂದು ರೀತಿಯ ಪೌಡರ್ ಸಹ ಇತ್ತು ಎನ್ನಲಾಗಿದ್ದು, ಬಾಂಬ್ ಇರಬಹುದೆಂದು ಅನುಮಾನಗೊಂಡ ಯುವಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಶಾಲೆಯ ಸಿಸಿಟಿವಿ ಮುಂಭಾಗದ ಸಮೀಪದಲ್ಲೇ ಅನುಮಾನಾಸ್ಪದ ವಸ್ತು ಸಿಕ್ಕಿದ್ದು, ಸಿಸಿಟಿವಿ ವಿಡಿಯೋ ವಶಪಡಿಸಿಕೊಂಡಿರುವ ಪೊಲೀಸರಿಗೆ ಕೃತ್ಯದ ಹಿಂದಿರುವ ಕೈವಾಡದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪುಟ್ಟೇಮಹಳ್ಳಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. 

ಅನುಮಾನಾಸ್ಪದ ವಸ್ತು ಸಿಕ್ಕ ರಸ್ತೆಯ ಸಂಚಾರ ನಿರ್ಬಂಧಿಸಲಾಗಿದ್ದು, ಯಾರಾದರೂ ಕಿಡಿಗೇಡಿಗಳು ಬೇಕಂತಲೇ ಈ ಕೃತ್ಯ ಎಸಗಿದ್ದಾರಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇದೊಂದು ಹುಸಿ ಬಾಂಬ್ ಕರೆ ಎಂದು ಪೊಲೀಸರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  
ಜೆ.ಪಿ.ನಗರ ಅನುಮಾನಾಸ್ಪದ ವಸ್ತು ಹುಸಿ ಬಾಂಬ್ ಪತ್ತೆ Bengaluru Fake Bomb Suspected Item Found

ಸುದ್ದಿಗಳು

news

ಹುಡಗನೊಂದಿಗೆ ಮಾತನಾಡಿದ ತಪ್ಪಿಗೆ ಮಗಳನ್ನೇ ಕೊಂದು ಹಾಕಿದ ಅಪ್ಪ

ಹೈದರಾಬಾದ್: 13 ವರ್ಷದ ಬಾಲಕಿಯೊಬ್ಬಳು ಮರ್ಯಾದಾ ಹತ್ಯೆಗೆ ಬಲಿಯಾದ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ. ...

news

ಕಾಂಗ್ರೆಸ್ ಹುಳುಕನ್ನು ವಿದೇಶದಲ್ಲಿ ಒಪ್ಪಿಕೊಂಡ ರಾಹುಲ್ ಗಾಂಧಿ

ನ್ಯೂಯಾರ್ಕ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಮೆರಿಕಾದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ...

news

20 ರೂ.ಗೆ ತರಕಾರಿ ಬೆಳೆಯುತ್ತಿರುವ ಡೇರಾ ಬಾಬಾ!

ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಡೇರಾ ಸಚ್ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ಇದೀಗ ...

news

ತನ್ನನ್ನೇ ಅತ್ಯಾಚಾರ ಮಾಡಲು ಬಂದ ಹೆತ್ತ ಮಗನನ್ನು ಕೊಲ್ಲಿಸಿದ ತಾಯಿ!

ನವದೆಹಲಿ: ತನ್ನ ಮೇಲೆಯೇ ಅತ್ಯಾಚಾರ ನಡೆಸಿದ ಮಾದಕ ದ್ರವ್ಯ ವ್ಯಸನಿ, ಅತ್ಯಾಚಾರಿ ಮಗನನ್ನು ಹೆತ್ತ ತಾಯಿಯೇ ...

Widgets Magazine
Widgets Magazine