Widgets Magazine
Widgets Magazine

ಆಸ್ತಿಗೆ ಸ್ವಾಮೀಜಿ ಹನಿಟ್ರ್ಯಾಪ್ ಆರೋಪ: 4 ವರ್ಷದ ಹಿಂದಿನ ವಿಡಿಯೋ ರಿಲೀಸ್..?

ಬೆಂಗಳೂರು, ಶುಕ್ರವಾರ, 27 ಅಕ್ಟೋಬರ್ 2017 (14:17 IST)

Widgets Magazine

ಬೆಂಗಳೂರು: ಹುಣಸಮಾರನಹಳ್ಳಿಯ ವೀರಶೈವ ಮಠದ ಉತ್ತರಾಧಿಕಾರಿ ದಯಾನಂದ ಸ್ವಾಮಿ ರಾಸಲೀಲೆ ಪ್ರಕರಣ ಬಯಲಾಗುತ್ತಿದ್ದಂತೆ ಭಕ್ತ ವಲಯದಲ್ಲಿ ಆಕ್ರೋಶ ಹೆಚ್ಚಿದೆ. ಕಾವಿ ಹಾಕಿಕೊಂಡಿರುವ ಕಾಮಿ ಸ್ವಾಮಿ ಪೀಠ ಬಿಟ್ಟು ತೊಲಗಬೇಕು ಎಂಬ ಆಗ್ರಹ ಕೇಳಿ ಬರ್ತಿದೆ.


ಗ್ರಾಮಸ್ಥರು, ಭಕ್ತರು ಮತ್ತು ಮಠದ ಟ್ರಸ್ಟ್‌‌ನ ಪದಾಧಿಕಾರಿಗಳು ನಿನ್ನೆಯಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ರಾಸಲೀಲೆಯಲ್ಲಿ ಭಾಗಿಯಾಗಿರುವ ದಯಾನಂದ ಸ್ವಾಮಿ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾನೆ ಅನ್ನೋ ಸಂಶಯಗಳು ವ್ಯಕ್ತವಾಗುತ್ತಿವೆ.

ಮಠದ ನೂರಾರು ಕೋಟಿ ರೂ. ಮೌಲ್ಯದ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಕೆಲವರು ದಯಾನಂದ ಸ್ವಾಮಿಯ ಲಂಪಟತನ ಕ್ಯಾಮರಾದಲ್ಲಿ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶ ಹೊಂದಿದ್ದರು ಎನ್ನಲಾಗ್ತಿದೆ. ದಯಾನಂದ ಸ್ವಾಮಿಯ ತಂದೆ ಶಿವಾಚಾರ್ಯ ಸ್ವಾಮಿ ಮೇಲೂ ಹಲವು ಅಕ್ರಮ ಸಂಬಂಧ ಹೊಂದಿರುವ ಆರೋಪಗಳಿವೆ. ಆತನ ಅಕ್ರಮ ಸಂಬಂಧಕ್ಕೆ ಹುಟ್ಟಿದ ದಯಾನಂದನನ್ನೇ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಿ ಮಠದ ಆಸ್ತಿ ಕಬಳಿಸಲು ಹುನ್ನಾರ ನಡೆಸಲಾಗಿತ್ತು ಅನ್ನೋ ಆರೋಪ ಮಠದ ಭಕ್ತರದ್ದು.

ದಯಾನಂದ ಸ್ವಾಮಿ ಕಾಮದ ವೀಕ್‌ ನೆಸ್ ತಿಳಿದಿದ್ದ ಮಠದ ಕೆಲವರು ಆತನನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದರು ಎಂದು ತಿಳಿದು ಬಂದಿದೆ. ಸುಮಾರು ನಾಲ್ಕು ವರ್ಷದ ಹಿಂದೆಯೇ ಈ ರಾಸಲೀಲೆ ವಿಡಿಯೋ ಚಿತ್ರೀಕರಿಸಿದ್ದು, ಬಿ ಗ್ರೇಡ್ ಹಸಿಬಿಸಿ ಸಿನಿಮಾಗಳಲ್ಲಿ ನಟಿಸಿದ್ದ ನಟಿಯ ಮೂಲಕ ಹನಿಟ್ರ್ಯಾಪ್ ಮಾಡಿಸಲಾಗಿದೆ. ನಾಲ್ಕು ವರ್ಷದಿಂದಲೂ ಸಿಡಿ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮಠದ ಕೆಲವರು ಕೋಟ್ಯಂತರ ರೂ. ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು ಎಂಬ ಆರೋಪವು ಕೇಳಿಬಂದಿದೆ.

ಮಠದ ಕೆಲ ಆಸ್ತಿಗಳನ್ನು ಮಾರಿ ಸಿಡಿ ಹೊರಬರದಂತೆ ಮಾಡಲು ದಯಾನಂದ ಸ್ವಾಮಿ ಹಣ ನೀಡಿ ತಡೆಯುವ ಪ್ರಯತ್ನ ಮಾಡಿದ್ದ ಎನ್ನಲಾಗಿದೆ. ಹಣಕ್ಕೆ ಪದೇ ಪದೇ ಬೇಡಿಕೆಯಿಟ್ಟು ಬ್ಲ್ಯಾಕ್‌ಮೇಲ್ ಮಾಡಲಾಗಿತ್ತು. ಕೊನೆಗೆ ಸೆಟಲ್‌ ಮೆಂಟ್ ಆಗದ ಕಾರಣಕ್ಕೆ ಸಿಡಿ ಮಾಧ್ಯಮಗಳಿಗೆ ತಲುಪಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಹುಣಸಮಾರನಹಳ್ಳಿಯ ಮಾಜಿ ಗ್ರಾ.ಪಂ. ಸದಸ್ಯ ರಾಮಯ್ಯ, ಸ್ವಾಮೀಜಿಯ ರಾಸಲೀಲೆ ಹಿಂದೆ ಗ್ರಾಮದ ಕೆಲವರ ಕೈವಾಡ ಇದೆ. ಮಠದ ಆಸ್ತಿ ಹೊಡೆಯಲು ಸ್ವಾಮೀಜಿಯ ಸಂಬಂಧಿಕರಿಂದಲೇ ಹನಿಟ್ರ್ಯಾಪ್ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ದಯಾನಂದ ಸ್ವಾಮಿ ಸೆಕ್ಸ್ ವಿಡಿಯೋದಲ್ಲಿರುವವಳು ನಾನಲ್ಲ ಎಂದ ನಟಿ

ಬೆಂಗಳೂರು: ಹುಣಸಮಾರನಹಳ್ಳಿ ಸಂಸ್ಥಾನ ಪೀಠದ ಸ್ವಾಮಿ ದಯಾನಂದ ಅವರೊಂದಿಗೆ ಪಲ್ಲಂಗ ಪುರಾಣದಲ್ಲಿ ನಟಿ ...

news

ಕೆ.ಜೆ. ಜಾರ್ಜ್ ರಾಜೀನಾಮೆ ಪಡೆಯದಿರಲು ಸಿಎಂ ನಿರ್ಧಾರ

ಬೆಂಗಳೂರು: ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದ್ದರೂ ಸಚಿವ ...

news

ಮೋದಿ ಅಲೆ ಅಂತ್ಯ, ರಾಹುಲ್‌ಗೆ ದೇಶ ಮುನ್ನಡೆಸುವ ಸಾಮರ್ಥ್ಯವಿದೆ: ಶಿವಸೇನೆ

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಶಿವಸೇನೆ ಸದಾ ತನ್ನದೇ ಮಿತ್ರಪಕ್ಷವನ್ನೇ ...

news

ಸಿಬಿಐ ಎಫ್‌ಐಆರ್ ವಿವರಗಳು ಲಭ್ಯವಾಗಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಡಿವೈಎಸ್‌ಪಿ ಎಂ.ಕೆ.ಗಣಪತಿ ಪ್ರಕರಣದ ಬಗ್ಗೆ ಸಿಬಿಐ ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ...

Widgets Magazine Widgets Magazine Widgets Magazine