ರಾಸಲೀಲೆ ನಡೆಸಿ ಸಿಕ್ಕಿಬಿದ್ದ ಹುಣಸಮಾರನಹಳ್ಳಿ ಮಠದ ಉತ್ತರಾಧಿಕಾರಿ?

ಬೆಂಗಳೂರು, ಗುರುವಾರ, 26 ಅಕ್ಟೋಬರ್ 2017 (12:45 IST)

ಬೆಂಗಳೂರು: ಯಲಹಂಕದಲ್ಲಿರುವ ಬೆಂಗಳೂರಿನ ಹುಣಸಮಾರನಹಳ್ಳಿ ಮಠದ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಗುರುನಂಜೇಶ್ವರ ಸ್ವಾಮೀಜಿ ನಟಿ ಜತೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಬಹಿರಂಗವಾಗಿದೆ.


ಮಠದ ಹಾಲಿ ಪೀಠಾಧಿಪತಿಯಾಗಿರುವ ಶಿವಾಚಾರ್ಯ ಸ್ವಾಮೀಜಿ ಪುತ್ರ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋಗಳು ಇಂದು ಮಾಧ್ಯಮಗಳಲ್ಲಿ ಬಿತ್ತರವಾಗಿವೆ. ಮಠದ ಕೋಣೆಯಲ್ಲೇ ರಾಸಲೀಲೆ ನಡೆಸಿದ್ದಾನೆ ಎಂದು ಹೇಳಲಾಗ್ತಿದೆ.

ವೀರಶೈವ ಪರಂಪರೆಯ ಮಠಕ್ಕೆ  ಶಿವಾಚಾರ್ಯ ಸ್ವಾಮೀಜಿ 2011ರಲ್ಲಿ ಉತ್ತರಾಧಿಕಾರಿಯನ್ನಾಗಿ ತನ್ನ ಪುತ್ರ ದಯಾನಂದನ್ನೇ ನೇಮಕಮಾಡಿಕೊಂಡಿದ್ದರು. ಕೋಟ್ಯಂತರ ರೂಪಾಯಿ ಆಸ್ತಿಯ ಮೇಲೆ ಕಣ್ಣಿಟ್ಟು ಮಗನಿಗೆ ಪಟ್ಟ ಕಟ್ಟಿದ್ದರು ಎಂದು ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.

ಇದೀಗ ದಯಾನಂದನ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿ ಹೋರಾಟಕ್ಕಿಳಿದಿದ್ದು, ಕೂಡಲೇ ಮಠ ಬಿಟ್ಟು ತೆರಳಿ ಬೇರೆ ಸಭ್ಯ ಉತ್ತರಾಧಿಕಾರಿಯನ್ನು ನೇಮಿಸಬೇಕು. ಶ್ರೀಶೈಲ ಶಾಖಾ ಪೀಠದ ಶ್ರೀಗಳು ಮಠಕ್ಕೆ ಆಗಮಿಸಿ ಮಾತುಕತೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  
ಶಿವಾಚಾರ್ಯ ಸ್ವಾಮೀಜಿ ದಯಾನಂದ ಮಹಾದೇವ ಸಂಸ್ಥಾನ ಮಠ ಉತ್ತರಾಧಿಕಾರಿ Swamiji Dayananda Shivacharya Swamiji

ಸುದ್ದಿಗಳು

news

ಬರ್ತ್ ಡೇಗೆ ತಂದ ಬಲೂನ್ ಮೇಲಿತ್ತು 'I love Pakistan'

ಉತ್ತರ ಪ್ರದೇಶ: ಮಗಳ ಹುಟ್ಟುಹಬ್ಬಕ್ಕಾಗಿ ಮಾರುಕಟ್ಟೆಯಿಂದ ತಂದ ಬಲೂನ್ಗಳ ಮೇಲೆ 'I love Pakistan' ಎಂಬ ...

news

ಮಾಜಿ ಸಂಸದೆ ರಮ್ಯಾ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು

ಬೆಂಗಳೂರು: ಮುಂಬರುವ 2019 ರಲ್ಲಿ ಪ್ರಧಾನಿ ಮೋದಿಯ ದರ್ಬಾರ್ ಅಂತ್ಯಗೊಳ್ಳಲಿದೆ ಎನ್ನುವ ಕಾಂಗ್ರೆಸ್ ಪಕ್ಷದ ...

news

ಮೈಸೂರು ಮೃಗಾಲಯದಲ್ಲಿ ಆಪರೇಷನ್ ಚೀತಾ ಸಕ್ಸಸ್

ಮೈಸೂರು: ಚಾಮುಂಡಿಬೆಟ್ಟದಿಂದ ಮೃಗಾಲಯಕ್ಕೆ ಬಂದ ಚಿರತೆಯನ್ನ ಯಶಸ್ವಿಯಾಗಿ ಸೆರೆ ಹಿಡಿಯುವಲ್ಲಿ ಮೃಗಾಲಯ ...

news

ಅಸಮಾಧಾನ ಮುಂದುವರೆಸಿದ ವಿಜಯಶಂಕರ್.. ಬಿಜೆಪಿ ರೈತ ಸಮಾವೇಶಕ್ಕೆ ಗೈರು

ಮೈಸೂರು: ಅಸಮಾಧಾನ ಮುಂದುವರಿಸಿರುವ ಮಾಚಿ ಸಚಿವ ವಿಜಯಶಂಕರ್ ರಾಜ್ಯ ರೈತ ಸಮಾವೇಶಕ್ಕೆ ಗೈರಾಗುವ ಮೂಲಕ ಪಕ್ಷದ ...

Widgets Magazine