ಮಕ್ಕಳಿಗೆ ಸೆಕ್ಸ್ ವಿಡಿಯೋ ತೋರಿಸುತ್ತಿದ್ದ ಶಿಕ್ಷಕನಿಗೆ ಧರ್ಮದೇಟು

ತುಮಕೂರು, ಮಂಗಳವಾರ, 21 ನವೆಂಬರ್ 2017 (14:19 IST)

ಮಕ್ಕಳಿಗೆ ಸೆಕ್ಸ್ ವಿಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ ಶಿಕ್ಷಕನಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ ಘಟನೆ ವರದಿಯಾಗಿದೆ.
ಜಿಲ್ಲೆಯ ವಡ್ಡರ ಕುಪ್ಪೆಯ ಶಾಲೆಯ ಮಕ್ಕಳಿಗೆ ಪಾಠ ಹೇಳಿಕೊಡುವುದು ಬಿಟ್ಟು ಸೆಕ್ಸ್ ವಿಡಿಯೋಗಳನ್ನು ತೋರಿಸುತ್ತಿದ್ದ ಎನ್ನಲಾಗಿದೆ. ವಿಡಿಯೋ ನೋಡದಿದ್ದ ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಮಾಹಿತಿ ನೀಡಿದ್ದಾರೆ.
 
ಮಕ್ಕಳಿಗೆ ಸೆಕ್ಸ್ ವಿಡಿಯೋ ತೋರಿಸುತ್ತಿರುವ ವಿಷಯ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ಶಾಲೆಗೆ ಬಂದ ಗ್ರಾಮಸ್ಥರು ಶಿಕ್ಷಕನಿಗೆ ಮನಬಂದಂತೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
 
ಶಾಲಾ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯುವತಿಗೆ ನಗ್ನ ಚಿತ್ರ ಕಳುಹಿಸಿದ್ರೆ ಜಾಬ್ ಗ್ಯಾರೆಂಟಿ ಎಂದ ಸಂದರ್ಶಕ

ಹೈದ್ರಾಬಾದ್: ಉದ್ಯೋಗ ಬೇಕಾದಲ್ಲಿ ನಗ್ನ ಚಿತ್ರಗಳನ್ನು ಕಳುಹಿಸಿ ಎಂದು ಯುವತಿಯೊಬ್ಬಳನ್ನು ಒತ್ತಾಯಿಸಿದ 32 ...

news

ದೇವಾಲಯದಲ್ಲಿ ಹೇಗೆ ಕೂರಬೇಕೆಂದೇ ರಾಹುಲ್ ಗಾಂಧಿಗೆ ಗೊತ್ತಿರಲಿಲ್ಲವಂತೆ!

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಗುಜರಾತ್ ಚುನಾವಣೆಯ ಹಿನ್ನಲೆಯಲ್ಲಿ ಕೆಲವು ...

news

ಅರ್ಧದಷ್ಟು ಸಂಪತ್ತು ದಾನ ಮಾಡಲಿದ್ದಾರೆ ನಂದನ್ ನೀಲೇಕಣಿ

ಬೆಂಗಳೂರು: ಜಗತ್ತಿನ ಅತೀ ಶ್ರೀಮಂತರಾದ ವಾರೆನ್ ಬಫೆಟ್, ಬಿಲ್ ಗೇಟ್ಸ್ ತಾವು ಸಂಪಾದಿಸಿದ ಬಹುಪಾಲನ್ನು ...

news

ಪ್ರಧಾನಿ ಮೋದಿ ವಿರುದ್ಧ ಸೋನಿಯಾ ಗಾಂಧಿ ಆರೋಪ

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿ ...

Widgets Magazine
Widgets Magazine