ಕೊಲೆಗಡುಕನಾಗಿದ್ರೆ ಯಾರ ಕೊಲೆ ಮಾಡಿದ್ದೀನಿ ಹೇಳಿ: ಈಶ್ವರಪ್ಪಗೆ ಸಚಿವ ರಮೇಶ್ ಕುಮಾರ್ ಸವಾಲ್

ಬೆಳಗಾವಿ, ಮಂಗಳವಾರ, 14 ನವೆಂಬರ್ 2017 (13:59 IST)

ಕೊಲೆಗಡುಕನಾಗಿದ್ರೆ ಯಾರ ಕೊಲೆ ಮಾಡಿದ್ದೀನಿ ಹೇಳಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ವಿರುದ್ಧ ಆರೋಗ್ಯ ಖಾತೆ ಸಚಿವ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ವಿಪಕ್ಷ ನಾಯಕ ಈಶ್ವರಪ್ಪ, ಸಚಿವ ರಮೇಶ್ ಕುಮಾರ್ ಕೊಲೆಗಡುಕ, ರಾಕ್ಷಸ ಅದಕ್ಕೆ ಮಕ್ಕಳಿಲ್ಲವೆಂದು ಟೀಕೆ ಮಾಡಿದ್ದರು.
 
ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ರಮೇಶ್ ಕುಮಾರ್, ಈಶ್ವರಪ್ಪಗೆ ಮರೆವು ಹೆಚ್ಚಾಗುತ್ತಿದೆ. ನನಗೆ ಇಬ್ಬರು ಮಕ್ಕಳಿದ್ದಾರೆ ಎನ್ನುವುದನ್ನು ಅವರು ಮರೆತಿದ್ದಾರೆ. ನಮ್ಮ ರಾಜಕೀಯದಲ್ಲಿ ಮಕ್ಕಳನ್ನು ಬೀದಿಗೆ ತರಬೇಡಿ ಎಂದು ಮನವಿ ಮಾಡಿದರು.
 
ಖಾಸಗಿ ವೈದ್ಯರನ್ನು ನಿಯಂತ್ರಣಕ್ಕೆ ತರಲು ಸರಕಾರ ಮಂಡಿಸುತ್ತಿರುವ ಮಸೂದೆ ಬಡವರ ಪರವಾಗಿದೆ. ಶ್ರೀಮಂತರ ಪರವಾಗಿಲ್ಲದಿರುವುದಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂದು ಲೇವಡಿ ಮಾಡಿದರು.
 
ನಾನು ಮಾಜಿ ಸಿಎಂ ದೇವರಾಜ ಅರಸರ ಗರಡಿಯಲ್ಲಿ ಬೆಳೆದಿದ್ದೇನೆ. ಅವರ ಕೆಲ ಆದರ್ಶಗಳನ್ನು ನಾನು ಇಲ್ಲಿಯವರೆಗೆ ಪಾಲಿಸಿಕೊಂಡು ಬಂದಿದ್ದೇನೆ ಎಂದು ಸಚಿವ ರಮೇಶ್ ಕುಮಾರ್ ಭಾವುಕರಾದ ಘಟನೆ ಸದನದಲ್ಲಿ ನಡೆಯುತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶ್ರೀರಾಮನ ಆಶೀರ್ವಾದವಿಲ್ಲದೇ ಕಾರ್ಯಸಫಲತೆ ಅಸಾಧ್ಯ: ಸಿಎಂ ಯೋಗಿ

ರಾಯ್ಪುರ್: ಭಾರದಲ್ಲಿ ಶ್ರೀರಾಮನ ಆಶೀರ್ವಾದವಿಲ್ಲದೇ ಯಾವುದೇ ಕಾರ್ಯ ಸಾಧ್ಯವಾಗದು ಎಂದು ಉತ್ತರಪ್ರದೇಶ ...

news

ಶಶಿಕಲಾ ನಿವಾಸದಲ್ಲಿ 1430 ಕೋಟಿ ಮೌಲ್ಯದ ಚಿನ್ನ, ವಜ್ರ, ನಗದು ಹಣ ಪತ್ತೆ

ಚೆನ್ನೈ: ಜೈಲಿನಲ್ಲಿರುವ ಎಐಎಡಿಎಂಕೆ ನಾಯಕ ವಿ.ಕೆ. ಶಶಿಕಲಾ ಮತ್ತು ಜಯಾ ಟಿವಿ ಕುಟುಂಬದ ಒಡೆತನದ ಆವರಣದಲ್ಲಿ ...

news

ವಿವಾಹ ಪ್ರಸ್ತಾಪ ತಿರಸ್ಕರಿಸಿದ ಯುವತಿಯನ್ನು ಸಜೀವವಾಗಿ ದಹಿಸಿದ ಯುವಕ

ಚೆನ್ನೈ: ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ 22 ವರ್ಷದ ಯುವತಿಯನ್ನು ಜೀವಂತವಾಗಿ ದಹಿಸಿದ ಆರೋಪಿ ...

news

‘ಸದ್ಯದಲ್ಲೇ ಸಚಿವ ಡಿಕೆಶಿ ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತೆ’

ಬೆಂಗಳೂರು: ಸದ್ಯದಲ್ಲೇ ಇಂಧನ ಸಚಿವ ಡಿಕೆ ಶಿವಕುಮಾರ್ ರಾಜೀನಾಮೆ ನೀಡುವ ಪರಿಸ್ಥಿತಿ ಬರುತ್ತದೆ ಎಂದು ...

Widgets Magazine
Widgets Magazine