ಮುಂಬೈನಲ್ಲಿ ದಾಳಿಗೆ ಉಗ್ರರ ಸಂಚು: ಇಬ್ಬರು ಉಗ್ರರು ಅರೆಸ್ಚ್

ಮುಂಬೈ, ಸೋಮವಾರ, 7 ಆಗಸ್ಟ್ 2017 (15:26 IST)

ದೇಶದ ವಾಣಿಜ್ಯ ನಗರಿಯಾದ ಮುಂಬೈನಲ್ಲಿ ದಾಳಿ ನಡೆಸುವ ಬಗ್ಗೆ ಉಗ್ರರು ಸಂಚು ರೂಪಿಸಿರುವುದು ಬಹಿರಂಗವಾಗಿದೆ.
 
ಕೆಲ ಉಗ್ರರು ಮುಂಬೈನಲ್ಲಿ ಅಡಗಿದ್ದು ದಾಳಿಗೆ ಸಂಚು ರೂಪಿಸುತ್ತಿದ್ದಾರೆ ಎನ್ನುವ ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದ ಪೊಲೀಸರು, ನಗರದಾದ್ಯಂತ ಭಾರಿ ಪ್ರಮಾಣದ ಕಾರ್ಯಾಚರಣೆ ನಡೆಸಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
 
ಪೊಲೀಸರು ಬಂಧಿತ ಉಗ್ರರನ್ನು ವಿಚಾರಣೆಗೊಳಪಡಿಸಿದಾಗ, ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಿದ್ದತೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಉಗ್ರರಿಂದ ಮಾಹಿತಿ ಪಡೆದ ಪೊಲೀಸರು ಮತ್ತಷ್ಟು ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಆಗಸ್ಟ್ 15 ರೊಳಗೆ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಉಗ್ರರ ದಾಳಿ ನಡೆಸಲು ಜಾಗತಿಕ ಉಗ್ರಗಾಮಿ ಸಂಘಟನೆಯಾದ ಲಷ್ಕರ್-ಎ-ತೊಯಿಬಾ ಸಂಚು ನಡೆಸಿರುವುದನ್ನು ಗುಪ್ತಚರ ಇಲಾಖೆ ಪತ್ತೆ ಹಚ್ಚಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಉಗ್ರರ ದಾಳಿ ಉಗ್ರರು ಮುಂಬೈ ದಾಳಿ ಪೊಲೀಸ್ Mumbai Terrorists Arrest Terror Attack Mumbai Police

ಸುದ್ದಿಗಳು

news

ಡಿಕೆಶಿ ವಿರುದ್ಧ ಮೃದು ಧೋರಣೆ: ಬಿಜೆಪಿ ನಾಯಕರ ನಡೆಗೆ ಹೈಕಮಾಂಡ್ ಅಸಮಧಾನ

ಆದಾಯ ತೆರಿಗೆ ದಾಳಿಗೆ ಗುರಿಯಾಗಿದ್ದ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸುವಲ್ಲಿ ...

news

ಕೇಂದ್ರ ಸಚಿವರಿಂದ ಡಿಕೆಶಿ ಬಿಜೆಪಿಗೆ ಆಹ್ವಾನ: ಆರೋಪ ತಳ್ಳಿಹಾಕಿದ ಸುರೇಶ್ ಕುಮಾರ್

ಬೆಂಗಳೂರು: ಐಟಿ ದಾಳಿಗೆ ಮುನ್ನ ಕೇಂದ್ರ ಸಚಿವರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ...

news

ಡಿ.ಕೆ.ಶಿವಕುಮಾರ್‌‌ರನ್ನು ಬಿಜೆಪಿಗೆ ಆಹ್ವಾನಿಸಿದ್ರಂತೆ ಕೇಂದ್ರ ಸಚಿವ...!

ಬೆಂಗಳೂರು: ಪ್ರಭಾವಶಾಲಿ ಕೇಂದ್ರ ಸಚಿವರೊಬ್ಬರು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿಗೆ ...

news

ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಡಿ.ಕೆ. ಶಿವಕುಮಾರ್

ಆದಾಯ ತೆರಿಗೆ ಇಲಾಖೆ ದಾಳಿ ಬಳಿಕ 2 ದಿನಗಳಿಂದ ನಿರಾಳರಾಗಿದ್ದ ಸಚಿವ ಡಿ.ಕೆ. ಶಿವಕುಮಾರ್ ಇವತ್ತು ಮತ್ತೆ ...

Widgets Magazine