ಬಿಎಸ್‌ವೈ ನಿವಾಸದಲ್ಲಿ ಮಧ್ಯರಾತ್ರಿ ತಲಾಶ್ ಸರಿಯಲ್ಲ: ಶೆಟ್ಟರ್ ಕಿಡಿ

ಬೆಂಗಳೂರು, ಸೋಮವಾರ, 17 ಜುಲೈ 2017 (12:55 IST)

Widgets Magazine

ವಿಧಾನಪರಿಷತ್ ವಿಪಕ್ಷ ನಾಯಕ ಆಪ್ತ ಸಹಾಯಕ ವಿನಯ್ ಅಪಹರಣ ಕುರಿತಂತೆ ಆರೋಪಿ ಸಂತೋಷ್‌‌ನನ್ನು ಹುಡುಕಲು ಪೊಲೀಸರು ಮಧ್ಯರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಅವರ ಮನೆಗೆ ತೆರಳಿರುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
 
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪ ಜವಾಬ್ದಾರಿಯುತ ಸ್ಥಾನದಲ್ಲಿರುವವರು. ಪೊಲೀಸರು ಬೇಕಿದ್ದರೆ ಅವರನ್ನು ಕೇಳಬೇಕಿತ್ತು. ಇಲ್ಲವಾದ್ರೆ ಹಗಲಲ್ಲಿ ಮನೆಗೆ ಹೋಗಿ ತಲಾಶ್ ನಡೆಸಬೇಕಾಗಿತ್ತು ಎಂದರು.
 
ಮಹಾಲಕ್ಷ್ಮಿ ಲೇಔಟ್ ಪೊಲೀಸರು ಮಧ್ಯ ರಾತ್ರಿ ಯಡಿಯೂರಪ್ಪ ಅವರ ಮನೆಗೆ ಹೋಗಿರುವ ಹಿಂದೆ ರಾಜಕೀಯ ದುರುದ್ದೇಶ ಅಡಗಿರುವ ಸಾಧ್ಯತೆಗಳಿವೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
 
ಮಹಾಲಕ್ಷ್ಮಿ ಪೊಲೀಸ್ ಠಾಣೆಯ ಎಸಿಪಿ ಬಡಿಗೇರ್ ನೇತೃತ್ವದ ತಂಡ ಯಡಿಯೂರಪ್ಪ ಅವರ ನಿವಾಸಕ್ಕೆ ಮಧ್ಯರಾತ್ರಿ ತೆರಳಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಯಡಿಯೂರಪ್ಪ ಜಗದೀಶ್ ಶೆಟ್ಟರ್ ಕೆ.ಎಸ್.ಈಶ್ವರಪ್ಪ Yeddyurappa Jagadish Shetter K.s.eashwarappa

Widgets Magazine

ಸುದ್ದಿಗಳು

news

ಕರ್ಮಕಾಂಡ ಬಯಲಿಗೆಳೆದ ಡಿಐಜಿ ರೂಪಾ ವಿರುದ್ಧವೇ ಪ್ರತಿಭಟನೆ ಜೋರು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳ ಬಗ್ಗೆ ಡಿಐಜಿ ರೂಪಾ ಎರಡನೇ ವರದಿ ನೀಡಿದ ಬೆನ್ನಲ್ಲೇ ಅವರ ...

news

ಫ್ರಂಟ್, ಬ್ಯಾಕ್, ರೈಟ್ ಲೆಫ್ಟ್ ಎಲ್ಲರಿಗೂ ಹುದ್ದೆ ದೊರೆತಿವೆ: ಅಂಜನೇಯ

ಬೆಂಗಳೂರು: ಕೆಪಿಸಿಸಿ ಪದಾಧಿಕಾರಿಗಳ ನೇಮಕದಲ್ಲಿ ತಾರತಮ್ಯವಾಗಿದೆ ಎನ್ನುವ ವರದಿಗಳಿಗೆ ಪ್ರತಿಕ್ರಿಯೆ ನೀಡಿದ ...

news

ಮಂಗಳೂರು, ಕಾರವಾರ ಸಮುದ್ರತಳದಲ್ಲಿ ಅಪಾರದ ಪ್ರಮಾಣ ನಿಧಿ ಪತ್ತೆ ಹಚ್ಚಿದ ವಿಜ್ಞಾನಿಗಳು..!

ಭೂಗರ್ಭ ಶಾಸ್ತ್ರದ ವಿಜ್ಞಾನಿಗಳು ಭಾರತದ ಸಾಗರ ತಳದಲ್ಲಿ ಅಪಾರ ಪ್ರಮಾಣದ ಅಮೂಲ್ಯ ಲೋಹಗಳು ಮತ್ತು ಖನಿಜಗಳು ...

news

ಯುಪಿಎಗೆ ಕೈ ಕೊಟ್ಟು ಕೊನೆ ಗಳಿಗೆಯಲ್ಲಿ ಎನ್ ಡಿಎ ಕೈ ಹಿಡಿದ ಶರದ್ ಪವಾರ್

ನವದೆಹಲಿ: ಇದುವರೆಗೆ ಕಾಂಗ್ರೆಸ್ ಪಕ್ಷದ ಪ್ರಮುಖ ಮಿತ್ರ ಪಕ್ಷವೆಂದೇ ಪರಿಗಣಿಸಲಾಗಿದ್ದ ಎನ್ ಸಿಪಿ ಪಕ್ಷದ ...

Widgets Magazine