Widgets Magazine

ನಾನೂ ಸ್ಪರ್ಧೆ ಮಾಡುವೆ ಎಂದ ಜನಾರ್ಧನ

ಮಂಗಳೂರು| Jagadeesh| Last Modified ಶುಕ್ರವಾರ, 15 ಮಾರ್ಚ್ 2019 (14:13 IST)
ನಾನು ಕೂಡಾ ಕಾಂಗ್ರೆಸ್ ಪಕ್ಷ ದಿಂದ ಟಿಕೆಟ್ ಆಕಾಂಕ್ಷಿಯಾಗಿರುವೆ. ಎರಡು ದಿನದಲ್ಲಿ ದೆಹಲಿಗೆ ತೆರಳಿ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತೇನೆ
ಅಂತ ಕಾಂಗ್ರೆಸ್ ಹಿರಿಯ ಮುಖಂಡ ಹೇಳಿದ್ದಾರೆ.

ಮಂಗಳೂರುನಲ್ಲಿ
ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಪತ್ರಿಕಾ ಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ನಿಂದ
ರಾಜೇಂದ್ರಕುಮಾರ್ ಹಾಗೂ ಐವನ್ ಡಿ ಸೋಜಾಗೆ ಟಿಕೆಟ್ ನೀಡಿದರೆ ನನ್ನ ವಿರೋಧ ಇದೆ. ರಮಾನಾಥ್ ರೈ,
ವಿನಯಕುಮಾರ ಸೊರಕೆ,
ಬಿ. ಕೆ. ಹರಿಪ್ರಸಾದ್ ಗೆ
ಮಿಥುನ್ ರೈ ಗೆ ಟಿಕೆಟ್ ನೀಡಿದರೆ ಬೆಂಬಲ
ನೀಡುವೆ ಎಂದಿದ್ದಾರೆ.

ಐವನ್ ಡಿ ಸೋಜಾ, ರಾಜೇಂದ್ರ ಕುಮಾರ್ ಸ್ಪರ್ಧೆ ಮಾಡಿದರೆ ನಾನು ಅವರ ವಿರುದ್ಧ ಸ್ಪರ್ಧೆ ಮಾಡುವುದು ಖಚಿತ ಎಂದೂ ಗುಡುಗಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಉತ್ತಮ ಆಡಳಿತ ನೀಡುತ್ತಿದ್ದಾರೆ ಅಂತ ಮೋದಿ ಆಡಳಿತಕ್ಕೆ ಪೂಜಾರಿ ಶಹಬ್ಬಾಸ್
ಗಿರಿ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :