ಆಕಸ್ಮಿಕ ಬೆಂಕಿಗೆ ಮಗು ಸಜೀವ ದಹನ

ಕೊಪ್ಪಳ, ಶನಿವಾರ, 13 ಅಕ್ಟೋಬರ್ 2018 (14:10 IST)

ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಬಿದ್ದ ಕಾರಣ 8 ತಿಂಗಳ ಮಗು ಸಜೀವವಾಗಿ ಸುಟ್ಟು ಕರುಕಲಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತರಲಕಟ್ಟಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ಗುಡಿಸಲಿನ ಜೋಳಿಗೆಯಲ್ಲಿ ಮಲಗಿದ್ದ ಎಂಟು ವರ್ಷದ ಮಹೇಶ್, ಸಜೀವವಾಗಿ ಸುಟ್ಟು ಕರುಕಲಾಗಿರುವ ದುರ್ಧೈವಿ ಮಗು. ನಿಂಗಪ್ಪಾ- ಸುನೀತಾ ದಂಪತಿಯ ಮಗು ಘಟನೆಯಲ್ಲಿ ಅಸುನೀಗಿದೆ.

ಮಗುವಿನ ತಂದೆ- ತಾಯಿ ಜೋಳಿಗೆಯಲ್ಲಿ ಮಹೇಶ್ ನನ್ನು ಮಲಗಿಸಿ ಹೊಲದಲ್ಲಿ ಕೆಲಸಕ್ಕೆಂದು ತೆರಳಿದ್ದರು. ಈ ಸಂದರ್ಭದಲ್ಲಿ ಶಾರ್ಟ್​ ಸರ್ಕ್ಯೂಟ್ ನಿಂದ ಬೆಂಕಿ‌ ತಗುಲಿದ್ದರಿಂದ, ಮನೆಯಲ್ಲಿ ಮಲಗಿದ್ದ ಮಗು ಸುಟ್ಟು ಕರಕಲಾಗಿದೆ.  

ಈ ಸಂಬಂಧ, ಬೇವೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದುರುದ್ದೇಶಪೂರಿತ ಪ್ರಕರಣ: ಪೊಲೀಸ್ ಅಧಿಕಾರಿಗಳಿಗೆ ಬಿತ್ತು ದಂಡ

ದುರುದ್ದೇಶಪೂರಿತ ಪ್ರಕರಣ ದಾಖಲಿಸಿ, ಮಾನಹಾನಿ ಮಾಡಿದ್ದ ಪೊಲೀಸ್ ಅಧಿಕಾರಿಗಳಿಗೆ 7,62,268 ರೂ.ದಂಡ ವಿಧಿಸಿ ...

news

ಫೇಸ್ ಬುಕ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್!

ನವದೆಹಲಿ: ಫೇಸ್ ಬುಕ್ ಬಳಸುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಶಾಕಿಂಗ್ ಸುದ್ದಿ! ಸ್ವತಃ ಫೇಸ್ ...

news

ಶಬರಿಮಲೆಗೆ ಭೇಟಿ ನೀಡುವ ಮಹಿಳೆಯರನ್ನು ಎರಡು ಪೀಸ್ ಮಾಡಬೇಕು ಎಂದವರು ಯಾರು ಗೊತ್ತೇ?!

ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರೂ ಭೇಟಿ ನೀಡಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ...

news

ರಾಜ್ಯ ಕಾಂಗ್ರೆಸ್ ನಾಯಕರ ತುರ್ತು ಸಭೆ ಕರೆದ ಕೆಸಿ ವೇಣುಗೋಪಾಲ್

ಬೆಂಗಳೂರು: ಬಳ್ಳಾರಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ...

Widgets Magazine