ಬಿಜೆಪಿ ಪರ ಪ್ರಚಾರ ನಡೆಸಲು ಬಂದಿದೆ ಐದು ರಾಜ್ಯಗಳಿಂದ 40 ಮಂದಿಯ ತಂಡ

ಬೆಂಗಳೂರು, ಬುಧವಾರ, 10 ಜನವರಿ 2018 (14:12 IST)

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಲು ಐದು ರಾಜ್ಯಗಳಿಂದ 40 ಮಂದಿ ಪ್ರಧಾನ ಕಾರ್ಯದರ್ಶಿಗಳ ತಂಡ ರಾಜ್ಯದಲ್ಲಿ ಠಿಕಾಣಿ ಹೂಡಿದೆ.
 
ಬಿಜೆಪಿ ಪರವಾಗಿ ಸದ್ದಿಲ್ಲದೇ ಮಾಡುವ ಈ ತಂಡ ಚುನಾವಣೆ ಮುಗಿಯುವವರೆಗೆ ರಾಜ್ಯದಲ್ಲೇ ಇರಲಿದೆ. ಉತ್ತರಪ್ರದೇಶ, ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಪ್ರಚಾರ ನಡೆಸಿದ ವೃತ್ತಿಪರ ತಂಡವನ್ನೇ ರಾಜ್ಯಕ್ಕೆ ಅಮಿತ್ ಶಾ ಕಳುಹಿಸಿದ್ದಾರೆ.
 
ಒಂದು ವಾರದ ಹಿಂದೆಯೇ ರಾಜ್ಯಕ್ಕೆ ಬಂದಿರುವ ಈ ತಂಡ ಉತ್ತರ, ದಕ್ಷಿಣ , ಮಧ್ಯ ಕರಾವಳಿ ಭಾಗಗಳಲ್ಲಿ ಹತ್ತು ಮಂದಿಯಂತೆ ನಾಲ್ಕು ತಂಡಗಳಾಗಿ ವಿಭಜನೆಗೊಂಡು ಕಾರ್ಯನಿರ್ವಹಿಸುತ್ತಿದೆ. ಅಮಿತ್ ಶಾ ಜೊತೆಗೆ ನಿಕಟ ಸಂಪರ್ಕದಲ್ಲಿರುವ ಈ ತಂಡ ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ವಿಧಾನ ಸೇರಿದಂತೆ ಹಲವು ವಿಷಯಗಳಲ್ಲಿ ಮಾರ್ಗದರ್ಶನ ಮಾಡಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಜ್ಯದಲ್ಲಿ ಕಾಂಗ್ರೆಸ್‌ನ್ನು ಬಿಜೆಪಿ ಕಿತ್ತು ಬಿಸಾಡಲಿದೆ– ಅಮಿತ್ ಶಾ

ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಕಿತ್ತಿ ಬಿಸಾಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ...

news

ಕಾಂಗ್ರೆಸ್ ಜೊತೆ ಮೈತ್ರಿ ಮಾತು, ವೇಸ್ಟ್ ಆಫ್ ಟೈಂ– ಅಖಿಲೇಶಯಾದವ್

ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾತುಕತೆ ನಡೆಸುವುದು ವೇಸ್ಟ್‌ ಆಫ್ ಟೈಂ ಎಂದು ಉತ್ತರ ಪ್ರದೇಶದ ಮಾಜಿ ...

news

ಬಜರಂಗದಳ, ಆರ್‌ಎಸ್‌ಎಸ್ ನಿಷೇಧಿಸಬೇಕು– ದಿನೇಶ ಗುಂಡೂರಾವ್

ಬಜರಂಗದಳ ಹಾಗೂ ಆರ್‌ಎಸ್‌ಎಸ್‌ ಸಂಘಟನೆಗಳನ್ನು ಮೊದಲು ನಿಷೇಧರ ಮಾಡಬೇಕು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ...

news

ವಾಟ್ಸಾಪ್ ಗ್ರೂಪ್ ವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಚಿಂಪಾಜಿಗೆ ಹೋಲಿಸಿದವರು ಯಾರು...?

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರನ್ನು ವಾಟ್ಸಾಪ್ ಗ್ರೂಪ್ ವೊಂದರಲ್ಲಿ ಚಿಂಪಾಜಿಗೆ ಹೋಲಿಸಿ ವಿಡಿಯೋ ...

Widgets Magazine
Widgets Magazine