ರಮ್ಯಾಗೆ ಬಾಗಿನ ರವಾನಿಸಿ ಟಾಂಗ್ ನೀಡಿದ ಬಿಜೆಪಿ

ಬುಧವಾರ, 12 ಸೆಪ್ಟಂಬರ್ 2018 (14:07 IST)

ಮಂಡ್ಯ ಜಿಲ್ಲೆಗೆ ಆಗಮಿಸದ ನಟಿ ಹಾಗೂ ಮಾಜಿ ಸಂಸದೆ ರಮ್ಯಾಗೆ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಟಾಂಗ್ ನೀಡಿದ್ದಾರೆ.
 
ಬಿಜೆಪಿ ಕಾರ್ಯಕರ್ತರಿಂದ ತವರು ಮರೆತ ತಂಗಿಗೆ ರವಾನೆ ಮಾಡಲಾಗಿದೆ. ಹೂ, ಬಳೆ ಹಾಗೂ ತೆಂಗಿನ ಕಾಯಿ ಒಳಗೊಂಡ ಬಾಗಿನ ರವಾನೆ ಮಾಡಲಾಗಿದೆ. ಮಾಜಿ ಸಂಸದೆ ಹಾಗೂ ಸ್ಯಾಂಡಲ್ ವುಡ್ ಕ್ವೀನ್ ನೆ ಬಾಗಿನವನ್ನು ಪೋಸ್ಟ್ ಆಫೀಸ್ ನಲ್ಲಿ ಪಾರ್ಸಲ್ ಕಳಿಸುವ ಮೂಲಕ ವ್ಯಂಗ್ಯ ಮಾಡಲಾಗಿದೆ.

ಸಹೋದರಿ ರಮ್ಯಾ ತವರು ಮರೆತಿದ್ದು, ಅವರಿಗೆ ತವರು ಮಂಡ್ಯ ನೆನಪಾಗಲಿ ಅಂತಾ ಬಾಗಿನ ರವಾನೆ ಮಾಡಲಾಗಿದೆ.
ಮಂಡ್ಯ ಬಿಜೆಪಿ ಕಾರ್ಯಕರ್ತರಿಂದ ಸಹೋದರಿಗೆ ಪ್ರೀತಿಯ ತವರಿನ ಉಡುಗೊರೆ ಇದು ಎಂದು ಬಿಜೆಪಿ ಕಾರ್ಯಕರ್ತರು ಲೇವಡಿ ಮಾಡಿದ್ದಾರೆ. ಕಳೆದ ವಿಧಾನ ಸಭೆ ಹಾಗೂ ನಗರಸಭೆ ಚುನಾವಣೆಗೂ ಮತ ಚಲಾಯಿಸದ ರಮ್ಯಾ ವಿರುದ್ಧ ಜನರಲ್ಲಿ ಆಕ್ರೋಶ ಹೆಚ್ಚುತ್ತಿದೆ.

ಗೌರಿ ಗಣೇಶನ ಹಬ್ಬಕ್ಕಾದರೂ ಮಂಡ್ಯಕ್ಕೆ ಆಗಮಿಸಿ ಎಂದು  ಬಿಜೆಪಿ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದಾರೆ.
ಇನ್ನಾದ್ರೂ ತವರಿಗೆ ಆಗಮಿಸಿ ತವರಿನ ಜನರ ಕಷ್ಟಕ್ಕೆ ಸ್ಪಂದಿಸಬೇಕು. ಕಳೆದ ಎರಡು ವರ್ಷದಿಂದ ಮಂಡ್ಯದಿಂದ ಕಣ್ಮರೆಯಾಗಿರೋ ರಮ್ಯಾ ಈಗಲಾದ್ರೂ ಮಂಡ್ಯಕ್ಕೆ ಆಗಮಿಸದಿದ್ರೆ ಮುಂದಿನ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ರೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.


 

ಅಂಗನವಾಡಿ ಕಾರ್ಯಕರ್ತರೊಂದಿಗೆ ಪಿಎಂ ಸಂವಾದ

ರಾಷ್ಟ್ರೀಯ ಪೋಷಣೆ ಅಭಿಯಾನ ಮಾಸಾಚರಣೆ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಅಂಗನವಾಡಿ ಮತ್ತು ಆಶಾ ...

ತನ್ನ ರೂಮ್ ಮೇಟ್ ನ್ನು ಚೂರಿಯಿಂದ ಇರಿದು ಕೊಂದ ವ್ಯಕ್ತಿ. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ?

ದುಬೈ : ತನ್ನ ರೂಮ್ ಮೇಟ್ ಮೊಬೈಲ್ ಫೋನಿನಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡಿದ ಎಂಬ ಕ್ಷುಲ್ಲಕ ಕಾರಣದಿಂದ ...

ಏಳು ವರ್ಷದ ಹಿಂದೆ ನಾಪತ್ತೆಯಾದ ಬಾಲಕನನ್ನು ಹುಡುಕಿಕೊಟ್ಟ ಫೇಸ್ ಬುಕ್!

ಮುಂಬೈ : ಹೈದರಾಬಾದ್‌ನಲ್ಲಿ 2011ರಲ್ಲಿ ನಾಪತ್ತೆಯಾಗಿದ್ದ 15ವರ್ಷದ ಬಾಲಕ ಮತ್ತೆ ತನ್ನ ಮನೆಯವರನ್ನು ...

ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳುತ್ತೇವೆ: ರಮೇಶ್ ಜಾರಕಿಹೊಳಿ

ಬೆಳಗಾವಿ: ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ತಮ್ಮಿಂದಾಗಿ ಕಂಟಕ ಎದುರಾಗಿದೆ ಎಂಬ ಸುದ್ದಿಗಳನ್ನು ರಮೇಶ್ ...