ಚುನಾವಣೆ ಸ್ಪರ್ಧೆ ಕುರಿತು ನಿರ್ಧಾರ ಪ್ರಕಟಿಸುವುದಿಲ್ಲ ಎಂದ ಬಿಜೆಪಿ ಸಂಸದೆ

ಚಿಕ್ಕಮಗಳೂರು, ಗುರುವಾರ, 11 ಅಕ್ಟೋಬರ್ 2018 (17:00 IST)

ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಾರದು ಎಂದು ನನ್ನ ಮನಸ್ಸಿನಲ್ಲಿತ್ತು. ಆದರೆ ಸದ್ಯ ವರಿಷ್ಠರ ಸೂಚನೆ ಮೇರೆಗೆ ನಾನು ಯಾವುದೇ ನಿರ್ಧಾರ ಪ್ರಕಟಿಸುವುದಿಲ್ಲ. ಹೀಗಂತ ಬಿಜೆಪಿಯ ಮಾಜಿ ಸಚಿವೆ ಹಾಗೂ ಸಂಸದೆ ಹೇಳಿದ್ದಾರೆ.

ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಾರದು ಎಂದು ನನ್ನ ಮನಸ್ಸಿನಲ್ಲಿತ್ತು. ಆದ್ರೆ ಸದ್ಯ ವರಿಷ್ಠರ ಸೂಚನೆ ಮೇರೆಗೆ ನಾನು ಯಾವುದೇ ನಿರ್ಧಾರ ಪ್ರಕಟಿಸುವುದಿಲ್ಲ. ಪಕ್ಷದ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.
 
ಲೋಕಸಭಾ ಉಪ ಚುನಾವಣೆಯಲ್ಲಿ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಮೂರು ಕಡೆ ಬಿಜೆಪಿ ಗೆಲ್ಲುತ್ತದೆ. ಈ ಮೂಲಕ ಬಿಜೆಪಿಗೆ ಜನ ಬೆಂಬಲ ಇದೆ ಎಂಬುದು ಸಾಬೀತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸರ್ಕಾರ ಇದೆಯೇ ಎಂದು ಪ್ರಶ್ನೆ ಮಾಡಿದ ಶೋಭಾ ಕರಂದ್ಲಾಜೆ, ಮೊದಲ ದಿನದಿಂದಲೂ ಗೊಂದಲದಲ್ಲಿಯೇ ಸರ್ಕಾರ ನಡೆಯುತ್ತಿದೆ. ಕಾಂಗ್ರೆಸ್, ಜೆಡಿಎಸ್ ಒಳಗಡೆಯೇ ಸಾಕಷ್ಟು ಭಿನ್ನಾಭಿಪ್ರಾಯ ಇದೆ. ವರ್ಗಾವಣೆ ಹಾಗೂ ದೇವಸ್ಥಾನ ಸುತ್ತುವುದರಲ್ಲೇ ಕಾಲ ಕಳೆಯಲಾಗುತ್ತಿದೆ ಎಂದು ಟೀಕಿಸಿದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಿಎಲ್‌ಡಿ ಬ್ಯಾಂಕ್‌ಗಳಿಗೂ ಸಾಲಮನ್ನಾ ವಿಸ್ತರಿಸುವಂತೆ ಒತ್ತಾಯ

ರಾಜ್ಯ ಸರ್ಕಾರ ರೈತರ ಬೆಳೆಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹ. ಆದರೇ ಅದೇ ರೀತಿ ರಾಜ್ಯದ 117 ಪಿಎಲ್‌ಡಿ ...

news

ಕಾಂಗ್ರೆಸ್​ ಗೆ ಬಿಗ್ ಶಾಕ್ ; ಎಂಎಲ್​ಸಿ ಲಿಂಗಪ್ಪ ಮಗ ಚಂದ್ರಶೇಖರ್ ಬಿಜೆಪಿಗೆ ಸೇರ್ಪಡೆ

ರಾಮನಗರ : ರಾಮನಗರದ ಕಾಂಗ್ರೆಸ್​ ಎಂಎಲ್​ಸಿ ಲಿಂಗಪ್ಪ ಅವರ ಮಗ ಚಂದ್ರಶೇಖರ್ ಬುಧವಾರ ಬಿಜೆಪಿಗೆ ...

news

ಬೇಡವೆಂದರೂ ಸಮುದ್ರಕ್ಕಿಳಿದು ಅಲೆಯ ರಭಸಕ್ಕೆ ಪಂಚೆ ಜಾರಿಸಿಕೊಂಡ ಬೈಂದೂರು ಶಾಸಕ

ಬೈಂದೂರು : ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರು ಸೋಮವಾರ ಮಹಾಲಯ ಅಮಾವಾಸ್ಯೆ ದಿನದಂದು ಸಮುದ್ರಕ್ಕಿಳಿದು ...

news

ವರನಿಲ್ಲದೇ ಮದುವೆ ಮಾಡಿಕೊಂಡಿದ್ದಾಳಂತೆ ಈಕೆ

ಉಗಾಂಡ : ಉಗಾಂಡದಲ್ಲಿ ಆಕ್ಸ್‌ಫರ್ಡ್ ವಿದ್ಯಾರ್ಥಿನಿಯೊಬ್ಬಳು ವರನಿಲ್ಲದೇ ತನ್ನನ್ನು ತಾನೇ ವಿವಾಹವಾದ ...

Widgets Magazine