ಬಿಎಸ್‌ವೈ ಎಲ್ಲಿ ಬೇಕಾದ್ರೂ ಊಟ ಮಾಡ್ಲಿ, ದಲಿತರ ಮತಗಳು ಕಾಂಗ್ರೆಸ್‌ಗೆ

ಹಾವೇರಿ, ಶುಕ್ರವಾರ, 19 ಮೇ 2017 (19:19 IST)

Widgets Magazine

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ದಲಿತರ ಮನೆಯಲ್ಲಿ ಊಟ ಮಾಡಲಿ. ಅಥವಾ ಬೇರೆ ಕಡೆ ಊಟ ಮಾಡಲಿ. ದಲಿತರ ಮತಗಳು ಮಾತ್ರ ಕಾಂಗ್ರೆಸ್‌ಗೆ ಬರುತ್ತವೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ್ ಹೇಳಿದ್ದಾರೆ.
 
ಬಿಜೆಪಿಯವರು ದಲಿತರ ಮನೆಯಲ್ಲಿ ಊಟ ಮಾಡಿದ್ದೇವೆ ಎನ್ನುವ ಹೊಸ ಪ್ರಯೋಗ ಮಾಡಲು ಹೊರಟಿದ್ದಾರೆ. ಆದರೆ, ಬಿಜೆಪಿ ನಾಯಕರ ಆಟ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ಯಡಿಯೂರಪ್ಪನವರಿಗೆ ಅಸ್ಪಶ್ಯತೆ ಬಗ್ಗೆ ಕಾಳಜಿಯಿದ್ದರೇ ಹಾವೇರಿಗೆ ಭೇಟಿ ನೀಡಲಿ. ದಲಿತರ ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದರೆ, ದಲಿತರ ಮದುವೆಗೆ ಬಂದವರು ಹೋಟೆಲ್‌, ಅಂಗಡಿಗಳಿಗೆ ಬರುತ್ತಾರೆ ಎನ್ನುವ ಕಾರಣಕ್ಕೆ ಹೋಟೆಲ್, ಅಂಗಡಿಗಳನ್ನು ಬಂದ್ ಮಾಡಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಬಿಎಸ್‌ವೈ ನೇತೃತ್ವದ ಬರ ಅಧ್ಯಯನ ತಂಡ ದಲಿತನ ಮನೆಯಲ್ಲಿ ಕುಳಿತು ಖಾಸಗಿ ಹೋಟೆಲ್ ಉಪಹಾರ ಸೇವಿಸಿರುವ ಬಗ್ಗೆ ವರದಿಗಳು ಬರುತ್ತಿವೆ. ಒಂದು ವೇಳೆ ನಿಜವಾಗಿದ್ದಲ್ಲಿ ಇದಕ್ಕಿಂತ ವಿಷಾದದ ಸಂಗತಿ ಬೇರೊಂದಿಲ್ಲ ಎಂದು ಸಚಿವ ಅಂಜನೇಯ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಉತ್ತರಪ್ರದೇಶ ಸಿಎಂಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿ ಸಾವಿನ ಕುರಿತಂತೆ ತನಿಖೆ ನಡೆಸಿ ಎಂದು ...

news

ಕೋಮುವಾದಿಗಳಿಗೆ ಯಾವಾಗಲೂ ಕಾಮಲೆ ಕಣ್ಣು ಇರುತ್ತದೆ: ಸಿಎಂ

ಬೆಂಗಳೂರು: ಸರಕಾರ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದರೂ ವಿಪಕ್ಷಗಳು ಇಲ್ಲ ಸಲ್ಲದ ಆರೋಪಗಳನ್ನು ...

news

ಮಾಜಿ ಸಂಸದೆ ರಮ್ಯ ವಿರುದ್ಧ ಸದಾನಂದಗೌಡ ಕಿಡಿ

ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕೆಲವರು ಹರಟೆಗಾಗಿ, ಬಾಯಿಚಪಲಕ್ಕಾಗಿ ಮಾತನಾಡಿದಲ್ಲಿ ಅಂತಹ ...

news

ಎಚ್‌ಡಿಕೆ ವಿರುದ್ಧ ಸಿಡಿ ನೀಡಲು 3 ವಾರ ಕಾಲಾವಕಾಶ ಕೇಳಿದ ರೆಡ್ಡಿ

ಬೆಂಗಳೂರು: ಲಗ್ಗರೆಯಲ್ಲಿ ನಡೆದ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಜೆಡಿಎಸ್ ಕಾರ್ಪೋರೇಟರ್ ಮಂಜುಳಾ ...

Widgets Magazine