ಕೆ.ಆರ್.ಎಸ್ ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲು ಸಿಎಂ ಸೂಚನೆ

ಮಂಡ್ಯ, ಭಾನುವಾರ, 12 ಆಗಸ್ಟ್ 2018 (15:28 IST)

ವೀಕ್ಷಣೆಗೆ ಸಾರ್ವಜನಿಕರಿಗೂ ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ಸೀತಾಪುರದಲ್ಲಿ ನಾಟಿ ಕಾರ್ಯ ಮುಗಿಸಿದ ಬಳಿಕ  ಚುಂಚನಗಿರಿ ಶ್ರೀಗಳೊಂದಿಗೆ ಕೆ ಆರ್ ಎಸ್ ಗೆ ಆಗಮಿಸಿದ‌ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡ್ಯ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ ಅಣೆಕಟ್ಟೆ ವೀಕ್ಷಣೆ ಮಾಡಿದ್ರು, ಇದೇ ವೇಳೆ ಕೆ ಆರ್ ಎಸ್ ಡ್ಯಾಂ ನ ಗೇಟ್ ಗಳ ಬಳಿ ತೆರಳಿದ ಸಿಎಂ ಹೆಚ್ಡಿಕೆ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಶ್ರೀಗಳೊಂದಿಗೆ ಗೇಟ್‌ಗಳ ಬಳಿಯಿರುವ ಜಾಗದಲ್ಲಿ ಕುಳಿತು ಕೆಲಸಮಯ ಕಳೆದರು. ಆ ಬಳಿಕ ಡ್ಯಾಮ್ ವೀಕ್ಷಣೆಗೆ ಸಾರ್ವಜನಿಕರಿಗೂ ವ್ಯವಸ್ಥೆ ಕಲ್ಪಿಸುವಂತೆ ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ವೇಳೆ ಸಿಎಂ ಕುಮಾರಸ್ವಾಮಿ ಗೆ ಶಾಸಕರು‌ ಹಾಗೂ ಜಿಲ್ಲೆಯ ಸಚಿವರು ಕೂಡ ಸಾಥ್ ನೀಡಿದರು. ಸಿಎಂ ಹೇಳಿಕೆಯಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರು ಖುಷ್ ಆದರು.
 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಹಲೋಕ ತ್ಯಜಿಸಿದ ನೊಬೆಲ್ ಪ್ರಶಸ್ತಿ ವಿಜೇತ ವಿ.ಎಸ್.ನೈಪಾಲ್

ಲಂಡನ್ : ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಮತ್ತು ಕಾದಂಬರಿಕಾರ ವಿ.ಎಸ್.ನೈಪಾಲ್ (85) ಇಂದು ...

news

ಸಿಸಿಟಿವಿ ಜಖಂಗೊಳಿಸಿದ್ರು; ಸರಣಿ ಕಳ್ಳತನ ಮಾಡಿದ್ರು

ಸಿಸಿ ಟಿವಿ ಜಖಂಗೊಳಿಸಿ ಅಂಗಡಿಗಳ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ.

news

ಲೋಕಸಭೆಯ ಮಾಜಿ ಸ್ಪೀಕರ್​ ಸೋಮನಾಥ ಚಟರ್ಜಿ ಆರೋಗ್ಯ ಸ್ಥಿತಿಯಲ್ಲಿ ಏರುಪೇರು

ಕೋಲ್ಕತ್ತಾ : ಹಿರಿಯ ಕಮ್ಯೂನಿಸ್ಟ್ ಮುಖಂಡ ಮತ್ತು ಲೋಕಸಭೆಯ ಮಾಜಿ ಸ್ಪೀಕರ್​ ಸೋಮನಾಥ ಚಟರ್ಜಿ ಅವರ ಆರೋಗ್ಯ ...

news

ಬಿಜೆಪಿಯವರಂತೆ ಸದನದಲ್ಲಿ ಸಿಎಂ ಬ್ಲೂ ಫಿಲಂ ನೋಡ್ಬೇಕಾ ಎಂದ ಎಂಎಲ್ಸಿ!

ಸಿಎಂ ಕುಮಾರಸ್ವಾಮಿ ನಾಟಿ ಮಾಡಿರುವುದಕ್ಕೆ ಬಿಜೆಪಿ ಟೀಕೆ ಮಾಡಿದ ಬೆನ್ನಲ್ಲೇ ಬಿಜೆಪಿ ನಾಯಕರ ವಿರುದ್ಧ ...

Widgets Magazine