ಬಿಜೆಪಿ ಯಾವ ಯಾತ್ರೆ ಮಾಡಿದ್ರೂ ಕಾಂಗ್ರೆಸ್‍ಗೆ ಜಯ ಖಚಿತ: ಕೆ.ಸಿ.ವೇಣುಗೋಪಾಲ್

ಉಡುಪಿ, ಸೋಮವಾರ, 6 ನವೆಂಬರ್ 2017 (19:22 IST)

 ಬಿಜೆಪಿ ಯಾವ ಯಾತ್ರೆ ಮಾಡಿದ್ರೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಜಯ ಖಚಿತ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ರಾಜಕೀಯ ಲಾಭಕ್ಕಾಗಿ ಅಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಕಾಂಗ್ರೆಸ್ ಮುಖಂಡರ ಫೋನ್‌ ಕದ್ದಾಲಿಕೆ ಮಾಡಲಾಗುತ್ತಿದೆ. ಇದೊಂದು ಗಂಭೀರವಾದ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಇಂತಹ ಕೆಟ್ಟ ನಡುವಳಿಕೆಗೆ ಉತ್ತರ ಹೇಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
 
 ಕೇಂದ್ರದ ಯಾವುದೇ ತನಿಖೆ ಸಂಸ್ಥೆ ಸ್ವತಂತ್ರವಾಗಿ ಉಳಿದಿಲ್ಲ. ಪ್ರಧಾನಿ ಮೋದಿ ನೇತೃತ್ವದ ಸರಕಾರ ಪ್ರತಿಯೊಂದು ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಹಲವಾರು ಇಲಾಖೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಂ.ಬಿ.ಪಾಟೀಲ್ ಮಾತ್ರವಲ್ಲ ಬಿಜೆಪಿ, ಪತ್ರಕರ್ತರ ಫೋನ್ ಕೂಡ ಟ್ಯಾಪ್..?

ಬೆಂಗಳೂರು: ಸಚಿವ ಎಂ.ಬಿ.ಪಾಟೀಲ್ ಅಷ್ಟೇ ಅಲ್ಲ ಹಲವು ಸಚಿವರ ಮೊಬೈಲ್ ಟ್ಯಾಪ್ ಆಗಿದ್ದು, ಬಿಜೆಪಿ ನಾಯಕರ ...

news

ಪ್ಯಾಂಟ್‌ ಜೇಬಿನಲ್ಲಿಯೇ ಸ್ಫೋಟಗೊಂಡ ಮೊಬೈಲ್: ಯುವಕನ ಗುಪ್ತಾಂಗಕ್ಕೆ ಗಂಭೀರ ಗಾಯ (ವಿಡಿಯೋ ನೋಡಿ)

ಕೊಪ್ಪಳ: ಮೊಬೈಲ್ ಫೋನ್ ಕೇವಲ ಚಾರ್ಜ್ ಮಾಡುವಾಗ ಮಾತ್ರ ಸ್ಫೋಟಗೊಳ್ಳುತ್ತದೆ ಎನ್ನುವುದು ನಮ್ಮೆಲ್ಲರಿಗೆ ...

news

ನಾನು ಬೇಕಾದಷ್ಟು ತನಿಖೆಗಳನ್ನು ನೋಡಿದ್ದೇನೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಆದಾಯ ತೆರಿಗೆ ಇಲಾಖೆಗೆ ವಿಚಾರಣೆಗಾಗಿ ಆಗಮಿಸಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ವಿಚಾರಣೆಯ ...

news

ಸಿಎಂ ಸಿದ್ದರಾಮಯ್ಯರದ್ದು ತುಘಲಕ್ ದರ್ಬಾರ್: ಬಿಎಸ್‌ವೈ

ಹಾಸನ: ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದ ಮೂಲಕ ರಾಜ್ಯದ ಹಗಲು ದರೋಡೆ ಮಾಡುತ್ತಿದೆ ಎಂದು ಬಿಜೆಪಿ ...

Widgets Magazine
Widgets Magazine