Widgets Magazine
Widgets Magazine

ಮಠಗಳ ನಿಯಂತ್ರಣ ವಿಷಯ ಮೇಲ್ಮನೆಯಲ್ಲಿ ಪ್ರಸ್ತಾಪ, ಬಿಜೆಪಿ– ಜೆಡಿಎಸ್ ಸಭಾತ್ಯಾಗ

ಬೆಂಗಳೂರು, ಗುರುವಾರ, 8 ಫೆಬ್ರವರಿ 2018 (15:00 IST)

Widgets Magazine

ಮಠ-ಮಂದಿರ ಧಾರ್ಮಿಕ ಸಂಸ್ಥೆಗಳನ್ನು ನಿಯಂತ್ರಣಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಮೇಲ್ಮನಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪ್ರತ್ಯೇಕವಾಗಿ ನಡೆಸಿದರು.
 
ಧಾರ್ಮಿಕ ಕೇಂದ್ರಗಳನ್ನು ಹತೋಟಿಗೆ ತರಲು ಸರ್ಕಾರ ಹೊರಡಿಸಿರುವ ಸುತ್ತೋಲೆ ಮೇಲ್ಮನೆಯಲ್ಲಿ ಪ್ರಸ್ತಾಪಕ್ಕೆ ಬಂದು ಆರೋಪ– ಪ್ರತ್ಯಾರೋಪ ನಡೆಯಿತು.
 
ನಿಲುವಳಿ ಸೂಚನೆ ಪ್ರಸ್ತಾಪದಡಿ ಮಾತನಾಡಿದ ಈಶ್ವರಪ್ಪ, ಸರ್ಕಾರ ಮಠಗಳನ್ನು ನಿಯಂತ್ರಣ ಮಾಡಲು ಹೊರಟಿರುವುದನ್ನು ಖಂಡಿಸಿ, ತೀವ್ರ ತರಾಟೆ ತೆಗೆದುಕೊಂಡರು. ಮಠಗಳು ದೇವಾಲಯಗಳು ಇದ್ದಂತೆ, ಮಠಾಧೀಶರು ದೇವರಿದ್ದಂತೆ ಸಮಾಜ ಸೇವೆಯಲ್ಲಿ ತೊಡಗಿರುವ ಮಾಡುವವರ ಮೇಲೆಯೂ ಕಣ್ಣಿಡುವ ಮೂಲಕ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮಠಗಳನ್ನು ನಿಯಂತ್ರಣ ಮಾಡುವ ಉದ್ದೇಶವಿಲ್ಲ. ಸುತ್ತೋಲೆಯನ್ನು ಹಿಂದಕ್ಕೆ ಪಡೆಯಲು ಸೂಚಿಸಲಾಗಿದೆ ಎಂದು ತಿಳಿಸಿದರು.
 
ಸರ್ಕಾರದೀ ಆದೇಶದಿಂದ ಮಠಾಧೀಶರಿಗೆ ಆಘಾತವಾಗಿದೆ ಎಂದು ಈಶ್ವರಪ್ಪ ಆತಂಕ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಸ್ವಾಮೀಜಿಗಳಿಗೆ ಆಘಾತವಾಗಿಲ್ಲ. ಬಿಜೆಪಿಯವರಿಗೆ ರಾಜಕೀಯವಾಗಿ ಆಘಾತವಾಗಿದೆ. ನೀವು ಮಾಡಿದ್ದರೆ ಹಿಂದೂಪರ, ನಾವು ಮಾಡಿದರೆ ಹಿಂದೂ ವಿರೋಧ ಎಂದು ಹೇಳಿದರು.
 
ಇದನ್ನು ಒಪ್ಪದ ಬಿಜೆಪಿ ಸದಸ್ಯರು, ಈ ಹಂತದಲ್ಲಿ ಸರ್ಕಾರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸಭಾತ್ಯಾಗ ಮಾಡಿದರು. ಮಠಾಧೀಶರಿಗೆ ಆತಂಕವಾಗಿದ್ದು, ಆತಂಕವನ್ನು ದೂರ ಮಾಡುವ ಸಲುವಾಗಿ ಸಭಾತ್ಯಾಗ ಮಾಡುವುದಾಗಿ ಜೆಡಿಎಸ್‌ನ ಶ್ರೀಕಂಠೇಗೌಡ ತಿಳಿಸಿ ಸದಸ್ಯರೊಂದಿಗೆ ಹೊರನಡೆದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನನಗೂ ಬಾಸ್ ಅವರೇ ಎಂದ ಸೋನಿಯಾ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನನಗೂ ಕೂಡ ಬಾಸ್ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ...

news

ಮಠಗಳು ನಿಯಂತ್ರಿಸುವ ಮುಂದಾದ ಸರ್ಕಾರ– ಶೆಟ್ಟರ್ ಎಚ್ಚರಿಕೆ

ಮಠಗಳನ್ನು ನಿಯಂತ್ರಿಸುವ ಸುತ್ತೋಲೆಯನ್ನು ಮುಜರಾಯಿ ತಕ್ಷಣ ಹಿಂದಕ್ಕೆ ಪಡೆಯದಿದ್ದರೆ ಬೀದಿಗಿಳಿದು ಹೋರಾಟ ...

news

ಕೇಂದ್ರದಿಂದ ಮಹತ್ವದ ನಿರ್ಧಾರ-ಜಂಕ್ ಫುಡ್, ಕೋಲಾ ಜಾಹೀರಾತು ಪ್ರಸಾರಕ್ಕೆ ನಿಷೇಧ

ನವದೆಹಲಿ: ಕೇಂದ್ರ ಎನ್ ಡಿ ಎ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಅದೇನೆಂದರೆ ಜಂಕ್ ಫುಡ್, ...

news

ರಮ್ಯಾ ಒಬ್ಬಳು ವಯ್ಯಾರಿ, ವಯ್ಯಾರ ಮಾಡುವುದು ಮಾತ್ರ ಗೊತ್ತು ರಮ್ಯಾಗೆ; ಸೊಗಡು ಶಿವಣ್ಣ ವ್ಯಂಗ್ಯ

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ ಮಾಡಿದ್ದಕ್ಕೆ ಸೊಗಡು ಶಿವಣ್ಣ ಅವರು ರಮ್ಯಾ ...

Widgets Magazine Widgets Magazine Widgets Magazine