2018ರ ಚುನಾವಣೆ ಸೋಲಿನ ಭಯದಿಂದ ಬಿಜೆಪಿಯಿಂದ ಡಿನೋಟಿಫೈ ಆರೋಪ

ಬೆಂಗಳೂರು, ಬುಧವಾರ, 11 ಅಕ್ಟೋಬರ್ 2017 (17:53 IST)

2018ರ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯವಾಗಿದ್ದರಿಂದ ನನ್ನ ವಿರುದ್ಧ ಡಿನೋಟಿಫೈ ಆರೋಪ ಮಾಡುತ್ತಿದೆ. ನನ್ನ ವಿರುದ್ಧ ಇದು ರಾಜಕೀಯ ಪ್ರೇರಿತ ಆರೋಪವಾಗಿದೆ ಎಂದು ಹೇಳಿದ್ದಾರೆ.
ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಅರ್ಜಿ ಸಲ್ಲಿಸಿದರೂ ಪರಿಶೀಲಿಸಿ ಎಂದು ಬರೆಯುತ್ತೇನೆ. ಪರಿಶೀಲಿಸಿ ಎಂದು ಬರೆದರೆ ಆದೇಶ ನೀಡಿದಂತೆಯೇ? ಪುಟ್ಟಸ್ವಾಮಿ ಸಚಿವರಾಗಿದ್ದವರು. ಅವರಿಗೆ ಅಷ್ಟು ಬುದ್ದಿ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ನನಗೆ ಡಿನೋಟಿಫೈ ಮಾಡುವ ಅಧಿಕಾರವಿದ್ದರೂ ನಾನೇ ಒಂದು ಇಂಚು ಭೂಮಿಯನ್ನು ಇಲ್ಲಿಯವರೆಗೆ ಡಿನೋಟಿಫೈ ಮಾಡಿಲ್ಲ.
ಡಿನೋಟಿಫಿಕೇಶನ್ ಮಾಡಲು ಕೆಲವು ನಿಯಮಾವಳಿಗಳಿದ್ದು ಅದಕ್ಕೊಂದು ಸಮಿತಿ ಇರುತ್ತದೆ ಎಂದು ತಿಳಿಸಿದ್ದಾರೆ.
 
ಶಾಂತಾ ಇಂಡಸ್ಟ್ರೀಸ್‌ಗೂ ನನ್ನ ಪುತ್ರ ಯತೀಂದ್ರನಿಗೂ ಯಾವುದೇ ಸಂಬಂಧವಿಲ್ಲ. ಮ್ಯಾಟ್ರಿಕ್ಸ್ ಸಲ್ಯೂಷನ್ಸ್ ಕಂಪೆನಿಯ ಮೇಲೆ ಆರೋಪ ಬಂದಾಗ ನನ್ನ ಮಗನಿಗೆ ರಾಜೀನಾಮೆ ನೀಡುವಂತೆ ನಾನೇ ಸೂಚಿಸಿದ್ದೆ ಎಂದು ಸಿಎಂ ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಾಹನ ಸವಾರರಿಗೆ ಗುಡ್ ನ್ಯೂಸ್: ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ ವಾಪಸ್

ಬೆಂಗಳೂರು: ವಾಹನ ಸವಾರರಿಗೆ ಪೆಟ್ರೋಲ್ ಬಂಕ್ ಮಾಲೀಕರು ಸಿಹಿ ಸುದ್ದಿ ನೀಡಿದ್ದಾರೆ. ನಾಳೆಯಿಂದ ಮುಷ್ಕರ ...

news

ಉಗ್ರರಿಗೆ ವೆಪನ್ ಸಾಗಾಟ: ಇಬ್ಬರು ಪೇದೆಗಳು ಸೇರಿ ಮೂವರ ಬಂಧನ

ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉಗ್ರರಿಗೆ ಮದ್ದುಗುಂಡು ಸರಬರಾಜು ಮಾಡುತ್ತಿದ್ದ ಮೂವರನ್ನು ...

news

ದಂಪತಿಗಳ ಬೆಡ್‌ರೂಮ್‌ಗೆ ಕ್ಯಾಮರಾ ಇಟ್ಟ ಭೂಪನ ಬಂಧನ

ಬೆಂಗಳೂರು: ದಂಪತಿಗಳ ಬೆಡ್‌ರೂಮ್‌ಗೆ ಕ್ಯಾಮರಾ ಅಳವಡಿಸಿ ಅವರ ಖಾಸಗಿ ದೃಶ್ಯಗಳನ್ನು ಇಂಟರ್‌ನೆಟ್‌ನಲ್ಲಿ ...

news

ಅಪ್ರಾಪ್ತೆಯ ಮೇಲೆ 30 ಕ್ಕೂ ಹೆಚ್ಚು ಬಾರಿ ಅತ್ಯಾಚಾರ ಮಾಡಿದ ಕಾಮುಕ ಅರೆಸ್ಟ್

ಬೆಂಗಳೂರು: ಅಪ್ರಾಪ್ತಳ ಮೇಲೆ 30ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿದ ನೀಚ ಕಾಮುಕನನ್ನು ಪೊಲೀಸರು ...

Widgets Magazine
Widgets Magazine