ಕನ್ನಡ ಚಳುವಳಿಗಾರರ ರಕ್ಷಣೆಗೆ ಸರಕಾರ ನಿಲ್ಲಲಿ: ಎಚ್ ವಿಶ್ವನಾಥ್

ಮೈಸೂರು, ಶನಿವಾರ, 22 ಜುಲೈ 2017 (15:26 IST)

ರಾಜ್ಯ ಸರಕಾರ ಕನ್ನಡ ಪರ ಚಳುವಳಿಗಾರರ ರಕ್ಷಣೆಗೆ ಮುಂದಾಗಬೇಕು ಎಂದು ಮಾಜಿ ಸಂಸದ ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
 
ಕರವೇ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಕನ್ನಡ ಭಾಷೆ, ರಾಜ್ಯಕ್ಕೆ ಅಪಮಾನವಾದಾಗ ಕನ್ನಡ ಪರ ಹೋರಾಟಗಾರರು ಹೋರಾಟ ಮಾಡುವುದು ಹಕ್ಕು ಎಂದು ತಿಳಿಸಿದ್ದಾರೆ.
 
ರಾಜ್ಯಕ್ಕಾಗಿ ಭಾಷೆಗಾಗಿ ಹೋರಾಟ ಮಾಡುವಂತಹ ಕಾರ್ಯಕರ್ತರ ಮೇಲೆಯೇ ಕೇಸ್ ಹಾಕಿದರೆ ಹೇಗೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಕರವೇ ಕಾರ್ಯಕರ್ತರ ಮೇಲೆ ದಾಖಲಾದ ಕೇಸ್‌ಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
 
ಕನ್ನಡ ಪರ ಹೋರಾಟಗಾರರ ಧ್ವನಿ ಹತ್ತಿಕ್ಕಿ ದಮನ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹೋರಾಟ ದಮನ ಮಾಡಲು ಪ್ರಯತ್ನಿಸಿದಲ್ಲಿ ಸರಕಾರ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಂಸದ ಎಚ್.ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭಾರತೀಯ ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಅಭಾವ: ಯುದ್ಧ ನಡೆದರೆ 10 ದಿನಗಳಲ್ಲಿ ಶಸ್ತ್ರಗಳು ಖಾಲಿ..

ಒಂದೆಡೆ ಪಾಕಿಸ್ತಾನ ಇನ್ನೊಂದೆಡೆ ಚೀನಾ ದೇಶಗಳು ಗಡಿಯಲ್ಲಿ ಯುದ್ಧೋತ್ಸಾಹದಲ್ಲಿದ್ದು, ಒಂದೊಮ್ಮೆ ಈ ...

news

ರಾಜ್ಯವೇ ಬೆಚ್ಚಿಬೀಳಿಸುವ ವಿಕೃತ ಕಾಮಿ ಸೆರೆ

ಹಾವೇರಿ: ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ವಿಕೃತ ಕಾಮಿಯನ್ನು ಪೊಲೀಸರು ಬಂಧಿಸುವಲ್ಲಿ ...

news

ನೀಲ್ ಆರ್ಮ್ ಸ್ಟ್ರಾಂಗ್ ತಂದಿದ್ದ ಚಂದ್ರನ ಧೂಳು ಹರಾಜು

ಮೊಟ್ಟ ಮೊದಲಬಾರಿಗೆ ಚಂದ್ರಯಾನ ಕೈಗೊಂಡಿದ್ದ ಗಗನಯಾತ್ರಿ ನೀಲ್‌ ಆರ್ಮ್ ಸ್ಟ್ರಾಂಗ್‌ ಚಂದ್ರನಿಂದ ಭೂಮಿಗೆ ...

news

ಶೋಬಾ ಕರಂದ್ಲಾಜೆ ಜವಾಬ್ದಾರಿಯಿಂದ ವರ್ತಿಸಲಿ: ಸಚಿವ ಖಾದರ್ ಕಿಡಿ

ಬೆಳಗಾವಿ: ಬಿಜೆಪಿ ನಾಯಕಿ ಮಾಜಿ ಸಚಿವ ಯಾವುದೇ ವಿಷಯದ ಬಗ್ಗೆ ಜವಾಬ್ದಾರಿಯಂದ ವರ್ತಿಸುವುದು ಸೂಕ್ತ ಎಂದು ...

Widgets Magazine