ವಚನ ತಿರುಚಿದ ಆರೋಪ: ಸುಪ್ರೀಂಕೋರ್ಟ್ ನಲ್ಲಿ ಮಾತೆ ಮಹಾದೇವಿಗೆ ಭಾರೀ ಹಿನ್ನಡೆ

ಬೆಂಗಳೂರು, ಬುಧವಾರ, 20 ಸೆಪ್ಟಂಬರ್ 2017 (21:24 IST)

Widgets Magazine

ಬೆಂಗಳೂರು: ವಿವಾದಿತ ಪುಸ್ತಕ `ಬಸವ ವಚನ ದೀಪ್ತಿ’ಗೆ  ಸಂಬಂಧಿಸಿದಂತೆ ಮಾತೆ ಮಹಾದೇವಿಗೆ ಭಾರೀ ಹಿನ್ನಡೆಯಾಗಿದೆ. ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.


1998ರಲ್ಲಿ `ಬಸವ ವಚನ ದೀಪ್ತಿ’ ಪುಸ್ತಕವನ್ನು ಅಂದಿನ ರಾಜ್ಯ ಸರ್ಕಾರ ನಿಷೇಧಿಸಿತ್ತು. ಈ ಪುಸ್ತಕದಲ್ಲಿ ಮಾತೆ ಮಹಾದೇವಿ ಬಸವಣ್ಣನವರ ವಚನಗಳನ್ನು ತಿರುಚಿದ್ದ ಆರೋಪ ಹೊತ್ತಿದ್ದರು. ಇದರಲ್ಲಿ ಮಾತೆ ಮಹಾದೇವಿ ವಚನಗಳಲ್ಲಿ ಕೂಡಲಸಂಗಮ ದೇವ ಬದಲು ಲಿಂಗದೇವ ಎಂಬ ಅಂಕಿತನಾಮ ಬದಲಿಸಿದ್ದರು. ಈ ಪುಸ್ತಕವನ್ನು ವಿರಶೈವ ಮಹಾಸಭಾ ಸಹ ವಿರೋಧಿಸಿತ್ತು.

ಇದೇ ಸಂದರ್ಭದಲ್ಲಿ ಪುಸ್ತಕ ನಿಷೇಧ ಕ್ರಮ ಸರಿಯಲ್ಲ ಎಂದು ಮಾತೆ ಮಹಾದೇವಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ರಾಜ್ಯ ಸರ್ಕಾರದ ನಿಷೇಧ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಬಳಿಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಾತೆ ಮಹಾದೇವಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಮೂರ್ತಿ ಎಸ್.ಎ.ಬೋಬಡೆ, ನ್ಯಾ. ಎಲ್.ನಾಗೇಶ್ವರ್ ರಾವ್ ಅವರಿದ್ದ ಪೀಠ ಮಾತೆ ಮಹಾದೇವಿ ಅರ್ಜಿಯನ್ನು ವಜಾ ಮಾಡಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಗೌರಿ ಲಂಕೇಶ್ ಹತ್ಯೆ: ಎಸ್‌ಐಟಿಯಿಂದ ಡಿಕೆಶಿ ಆಪ್ತ ಜ್ಯೋತಿಷಿ ದ್ವಾರಕನಾಥ್ ವಿಚಾರಣೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ...

news

ಕೆಆರ್‌ಎಸ್‌ಡ್ಯಾಂನಲ್ಲಿ ನೀರಿಲ್ಲ, ಕಬಿನಿ ನೀರು ಸಾಲಲ್ಲ: ಸಿಎಂ

ಮೈಸೂರು: ಕೃಷ್ಣರಾಜ ಸಾಗರ ಆಣೆಕಟ್ಟಿನಲ್ಲಿ ನೀರಿಲ್ಲ. ಕಬಿನಿ ಜಲಾಶಯದಲ್ಲಿರುವ ನೀರು ಸಾಲಲ್ಲ ಎಂದು ಸಿಎಂ ...

news

ವಿವಾಹವಾದ ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆಗೆ ಶರಣಾದ ನವದಂಪತಿಗಳು

ಪ್ರಕಾಶಂ(ಆಂಧ್ರಪ್ರದೇಶ): ಮದುವೆಗಳು ಸಾಮಾನ್ಯವಾಗಿ ಜೊತೆಯಾಗಿ ಜೀವನ ನಡೆಸುವ ಭರವಸೆಯೊಂದಿಗೆ ...

news

ರಾಜ್ಯದ ರೈತರಿಗೆ ನ್ಯಾಯ ಸಿಗುವ ವಿಶ್ವಾಸವಿದೆ: ಮೋಹನ್ ಕಾತರಕಿ

ನವದೆಹಲಿ/ಕಲಬುರ್ಗಿ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ 28 ದಿನ ಸುಪ್ರೀಂಕೋರ್ಟ್ ನಲ್ಲಿ ...

Widgets Magazine