ಮಂಡ್ಯ ಜಿಲ್ಲೆ ದತ್ತು ಪಡೆದವರಂತೆ ಜೆಡಿಎಸ್ ವರ್ತನೆ- ಚಲುವರಾಯಸ್ವಾಮಿ ವಾಗ್ದಾಳಿ

ಕೆಆರ್ ಪೇಟೆ, ಗುರುವಾರ, 1 ಫೆಬ್ರವರಿ 2018 (20:28 IST)

ಮಂಡ್ಯ ಜಿಲ್ಲೆಯನ್ನು ದತ್ತು ಪಡೆದವರಂತೆ ವರ್ತಿಸುತ್ತಿರುವ ಜೆಡಿಎಸ್ ನಾಯಕರಿಗೆ ತಕ್ಕ ಪಾಠ ಕಲಿಸಬೇಕು ಎಂದು ಎನ್.ಚಲುವರಾಯ ಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ತೊರೆದ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಏಳುಜನ ಬಂಡಾಯ ಶಾಸಕರು ನಾವಾಗಿಯೇ ಜೆಡಿಎಸ್ ಬಿಡಲಿಲ್ಲ. ಇಲ್ಲದ ಕಿರುಕುಳ ನೀಡಿ ಸ್ವಾಭಿಮಾನಕ್ಕೆ ಧಕ್ಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಿರುಕುಳ ನೀಡಿದ ಫಲವನ್ನು ಮುಂದಿನ ಚುನಾವಣೆಯಲ್ಲಿ ಅನುಭವಿಸಬೇಕಾಗುತ್ತದೆ ಎಂದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ದೊರಕಿಸುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶ್ರೀನಿವಾಸ ಶೆಟ್ಟಿ ವಿರುದ್ಧ ಆಕ್ರೋಶ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಕಾಂಗ್ರೆಸ್ ...

news

ಕೇಂದ್ರ ಬಜೆಟ್ ಕುರಿತು ದೇವೇಗೌಡ ಪ್ರತಿಕ್ರಿಯೆ

ಗ್ರಾಮೀಣ ಜನರ ಹಾಗೂ ರೈತರ ಸಮಸ್ಯೆ ಅಗಾಧವಾಗಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿ ...

news

ಅಣ್ಣಾ ಹಜಾರೆ ಭೇಟಿಯಾದ ಉಪೇಂದ್ರ- ರಾಜಕೀಯ ಚರ್ಚೆ

ಕೆಪಿಜೆಪಿ ಪ್ರಮುಖ ಹಾಗೂ ನಟ ಉಪೇಂದ್ರ ಅವರು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಬೆಂಗಳೂರಿನಲ್ಲಿ ...

news

ಸಚಿವರ ಆಗಮನಕ್ಕಾಗಿ ಮೂರು ಗಂಟೆಗಳ ಕಾಲ ಕಾದ ಅಂಗವಿಕಲರು

ಕೇಂದ್ರದ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಸಲುವಾಗಿ ಅಂಗವಿಕಲರನ್ನು ಮೂರು ...

Widgets Magazine
Widgets Magazine