ಮೈತ್ರಿಗೆ ದ್ರೋಹ ಮಾಡಿದ್ರೆ ತಂದೆ- ತಾಯಿಗೆ ದ್ರೋಹ ಮಾಡಿದಂತೆ ಎಂದ ಸಚಿವ

ಮೈಸೂರು, ಶನಿವಾರ, 16 ಮಾರ್ಚ್ 2019 (20:33 IST)

ಕಾಂಗ್ರೆಸ್ ಮುಖಂಡರು ಕಾರ್ಯಕರ್ತರಿಗೆ ಖಡಕ್ ಸೂಚನೆ ನೀಡಬೇಕು. ರಾಷ್ಟ್ರ, ರಾಜ್ಯ ನಾಯಕರ ತೀರ್ಮಾನದಂತೆ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು. ಮೈತ್ರಿಗೆ ದ್ರೋಹ ಮಾಡೋದು ಅಂದರೆ ತಂದೆ ತಾಯಿಗೆ ದ್ರೋಹ ಮಾಡಿದಂತೆ. ಹೀಗಂತ ಸಚಿವರೊಬ್ಬರು ಖಡಕ್ ಮಾತು ಹೇಳಿದ್ದಾರೆ.

ನಮ್ಮ ನಾಯಕರು, ಕಾಂಗ್ರೆಸ್ ನಾಯಕರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಅಧಿಕಾರದಿಂದ ಬಿಜೆಪಿಯನ್ನು  ದೂರವಿಡುವ ಪ್ರಯತ್ನ‌ ಆಗಬೇಕಿದೆ. ನಮ್ಮ ಗುಂಪುಗಾರಿಕೆ, ವೈಯಕ್ತಿಕ, ಇಚ್ಛಾಶಕ್ತಿ, ಭಿನ್ನಾಭಿಪ್ರಾಯ ಬಿಡಬೇಕು ಎಂದು
ಮೈಸೂರಿನಲ್ಲಿ ಸಾ.ರಾ ಮಹೇಶ್ ಹೇಳಿಕೆ ನೀಡಿದ್ದಾರೆ.

ಎರಡು ಪಕ್ಷದ ನಾಯಕರು ಒಮ್ಮತದಿಂದ ಕೆಲಸ ಮಾಡಬೇಕು ಎಂದ್ರು. ಎರಡು ಪಕ್ಷದವರು ಬದಲಾಗಬೇಕು.
ಹಿಂದಿನ ಉಪ ಚುನಾವಣೆ ಕಹಿ ಘಟನೆಯಿಂದ ಈ ಹೇಳಿಕೆ ನೀಡಿದ್ದಾಗಿ ತಿಳಿಸಿದ್ರು. ಇದು ತಗೋ ಕೊಡು ಪಾಲಿಸಿ.
ಯಾರನ್ನು ಬಲವಂತವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ನೀವು ಎಷ್ಟು ಪ್ರೀತಿಸುತ್ತಿರೋ ಗೌರವಿಸುತ್ತಿರೋ ನಾವು ಅಷ್ಟೇ ಪ್ರೀತಿಸುತ್ತೀವಿ ಅಂತ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಸಾ.ರಾ ಮಹೇಶ್ ಹೇಳಿದ್ರು.




ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಿಳೆಯ ಸಾವಿಗೆ ಏನು ಕಾರಣ ಆಯ್ತು?

ಮಹಿಳೆಯೊಬ್ಬರ ಮೈ ಮೇಲೆ ಟಿಪ್ಪರ್ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಕೂಟರ್ ಸವಾರನೊಬ್ಬ ...

news

ದೇವೇಗೌಡ್ರ ಕುಟುಂಬದ ವಿರುದ್ಧ ಫೈಟ್ ಮಾಡೋಕೆ ಜನರ ಒಲವಿದೆ ಎಂದ ಕಾಂಗ್ರೆಸ್ ನಾಯಕ

ಹೆಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಹೋರಾಡಲು ಜನರ ಒಲವಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

news

ಜೆಡಿಎಸ್ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ ಕಾಂಗ್ರೆಸ್

ಚುನಾವಣೆ ಕಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಹತ್ವದ ಕ್ಷೇತ್ರದಲ್ಲಿ ಜೆಡಿಎಸ್ ವಿರುದ್ಧ ...

news

ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಹೊಣೆ ಡಿಕೆ ಶಿವಕುಮಾರ್ ಹೆಗಲಿಗೆ..?

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಸಾಧಿಸಲೇಬೇಕು ಎಂದು ಕಾಂಗ್ರೆಸ್ - ಜೆಡಿಎಸ್ ಪಣ ...

Widgets Magazine