ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಕಾಡಾನೆಗಳು ಮತ್ತೆ ಪ್ರತ್ಯಕ್ಷವಾಗಿವೆ. ಇದರಿಂದ ಗ್ರಾಮಸ್ಥರು ಮತ್ತೆ ಜೀವ ಭಯದಲ್ಲಿ ಬದುಕುವಂತಾಗಿದೆ.ಆನೇಕಲ್ ತಾಲ್ಲೂಕಿನ ದೊಡ್ಡಹಾಗಡೆಯಲ್ಲಿ ಕಾಣಿಸಿಕೊಂಡಿವೆ ಆನೆಗಳು. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳು ಹಿಂಡಿನಲ್ಲಿ ಸಂಚಾರ ಮಾಡುತ್ತಿವೆ. ಕಾಡಾನೆಗಳನ್ನು ನೋಡಲು ತಂಡೋಪತಂಡವಾಗಿ ಆಗಮಿಸಿದ ಗ್ರಾಮಸ್ಥರು ಅವುಗಳ ಅಟಾಟೋಪ ನೋಡಿ ಬೆಚ್ಚಿ ಬೀಳುತ್ತಿದ್ದಾರೆ.ರಾತ್ರಿ ಕಾಡಿನಿಂದ ಗ್ರಾಮಕ್ಕೆ ಆಗಮಿಸಿ ತೋಪಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು, ಗ್ರಾಮದ ನಡುವಿನ ನೀಲಗಿರಿ ತೋಪಿನಲ್ಲಿ ಮೂರು ಕಾಡಾನೆಗಳು ಕಂಡುಬಂದಿವೆ.