ಆಟೋ ಚಾಲಕನ ರಾಬರಿಗೆ ಯತ್ನಿಸಿದ ದುಷ್ಕರ್ಮಿಗಳು

ಆನೇಕಲ್, ಮಂಗಳವಾರ, 9 ಅಕ್ಟೋಬರ್ 2018 (13:59 IST)

ಆಟೋ ಚಾಲಕನ ಬಳಿ 500 ರೂ.ಗೆ ಬಾಡಿಗೆ ಮಾತನಾಡಿಕೊಂಡ ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಕರೆತಂದು  ರಾಬರಿ ಮಾಡಲು ಯತ್ನಿಸಿರುವಂತಹ ಘಟನೆ ನಡೆದಿದೆ.

ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಂಗಿಪುರ ಬಳಿ ಆಟೋ ಚಾಲಕನ ರಾಬರಿಗೆ ಯತ್ನ ನಡೆದಿದೆ.  ಬೆಳಂಡೂರಿನ ಆಟೋ ನಿಲ್ದಾಣದ ಬಳಿ ಬಂದ ಓರ್ವ ವ್ಯಕ್ತಿ ಬಿಂಗಿಪುರಕ್ಕೆ 500 ರೂ.ಗೆ ಆಟೋ ಬಾಡಿಗೆ ಮಾತನಾಡಿ ನಂತರ ಮಾರ್ಗ ಮಧ್ಯೆ ಇನ್ನಿಬ್ಬರು ಸ್ನೇಹಿತರಿಗೆ ಕರೆ ಮಾಡಿ ಆಟೋ ಹತ್ತಿಸಿಕೊಂಡಿದ್ದಾನೆ.

ದುಷ್ಕರ್ಮಿಗಳು ಬಿಂಗಿಪುರದ ಬಳಿಯಿರುವ ನೀಲಗಿರಿ ತೋಪಿನ ಬಳಿ ರಾಬರಿಗೆ ಯತ್ನಿಸಿದ್ದು, ಆಟೋವನ್ನು ಬಿಟ್ಟು ಪರಾರಿಯಾಗಿದ್ದಾನೆ. ನಂತರ ಹುಲ್ಲಹಳ್ಳಿ ಗೇಟ್ ನ  ಆಟೋ ನಿಲ್ದಾಣದ ಬಳಿ ಇದ್ದಂತಹ ಆಟೋ ಚಾಲಕರಿಗೆ ಘಟನೆ ವಿವರಿಸಿದ ನಂತರ ಸ್ಥಳಕ್ಕೆ ಹೋಗುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ನಂತರ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಬನ್ನೇರುಘಟ್ಟ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾರಿನಲ್ಲಿ ಗಾಂಜಾ ಸಾಗಣೆ: ಇಬ್ಬರ ಬಂಧನ

ಇಂಡಿಕಾ ಕಾರಿನಲ್ಲಿ ಆಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ...

news

ಪತ್ರಕರ್ತ ನಕ್ಕೀರನ್ ಗೋಪಾಲನ್ ಬಂಧನ

ಚೆನ್ನೈ: ಪತ್ರಕರ್ತ ನಕ್ಕೀರನ್ ಗೋಪಾಲನ್ ನನ್ನು ಇಂದು ಬೆಳಿಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸೆರೆ ...

news

ಮೋದಿ ಸರ್ಕಾರ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂತು ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದ ವಿಡಿಯೋ ನಿಜವೇ?

ನವದೆಹಲಿ: ಮೋದಿ ಸರ್ಕಾರ ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ...

news

ಮಂಡ್ಯ ಲೋಕಸಭೆ ಕ್ಷೇತ್ರದ ಟಿಕೆಟ್ ಗಾಗಿ ಜೆಡಿಎಸ್ ನಲ್ಲೇ ಪೈಪೋಟಿ

ಬೆಂಗಳೂರು: ಈ ವರ್ಷ ಅಂತ್ಯ ನಡೆಯಲಿರುವ ಲೋಕಸಭೆ ಚುನಾವಣೆಗೆ ಮೊದಲು ತೆರವಾದ ಸ್ಥಾನಗಳಿಗೆ ನಡೆಯುತ್ತಿರುವ ಉಪ ...

Widgets Magazine