ಸಾಗುವಾನಿ ತುಂಡು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಚಿಕ್ಕಮಗಳೂರು, ಶನಿವಾರ, 12 ಜನವರಿ 2019 (16:56 IST)

ಅಕ್ರಮವಾಗಿ ಸಾಗುವಾನಿ ತುಂಡುಗಳನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನ ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಮುತ್ತಿನಕೊಪ್ಪ ಗ್ರಾಮದ ಬೇಬಿ ಬಂಧಿತ ಆರೋಪಿ. ಬಂಧಿತ ಆರೋಪಿ ಬೊಲೆರೋ ವಾಹನದಲ್ಲಿ ಅಡಿಕೆ ಸಿಪ್ಪೆ ಹಾಕಿಕೊಂಡು 9 ಸಾಗುವಾನಿ ತುಂಡುಗಳನ್ನು ಸಾಗಿಸುತ್ತಿದ್ದ.

ಈ ವೇಳೆ ಎನ್.ಆರ್.ಪುರ ಉಪಅರಣ್ಯ ವಲಯಾಧಿಕಾರಿ ಸೋಮಶೇಖರ್ ದಾಳಿ ಮಾಡಿ ವ್ಯಕ್ತಿಯನ್ನ ಬಂಧಿಸಿದ್ದಾರೆ. ಇನ್ನು ಬಂಧಿತ ಆರೋಪಿಯಿಂದ ಅರಣ್ಯಾಧಿಕಾರಿಗಳು ಒಂದು ಲಕ್ಷ ಬೆಲೆ ಬಾಳುವ 9 ಸಾಗುವಾನಿ ತುಂಡುಗಳನ್ನ ಪಡೆಸಿಕೊಂಡಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗಮನ ಸೆಳೆದ ವಿವೇಕ ಜಾಥಾ!

ದೇಶ ಕಂಡ ಮಹಾನ್ ತತ್ವಜ್ಞಾನಿ ಸ್ವಾಮಿ ವಿವೇಕಾನಂದರ 156 ನೇ ಜಯಂತಿಯನ್ನ ಸಂಭ್ರಮದಿಂದ ಆಚರಿಸಲಾಯಿತು.

news

ರಂಗಭೂಮಿ ಶಾಶ್ವತ ಕಲೆ ಎಂದ ನಟ!

ರಂಗಭೂಮಿ ಶಾಶ್ವತ ಕಲೆಯಾಗಿದೆ. ಸಿನಿಮಾ ಧಾರಾವಾಹಿಗಳ ಕಡೆ ಜನರ ಆಸಕ್ತಿ ಕಡಿಮೆಯಾಗುತ್ತಿದೆ. ಹೀಗಂ ನಟ ರಮೇಶ ...

news

ತೋಟಗಾರಿಕೆ ಸಚಿವರನ್ನು ತರಾಟೆಗೆ ತೆಗೆದುಕೊಂಡ ರೈತ!

ತೋಟಗಾರಿಕೆ ಸಚಿವರನ್ನು ರೈತರೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

news

ಬಂಜಾರರು ಪತ್ರ ಚಳುವಳಿ ನಡೆಸಿದ್ಯಾಕೆ?

ಅಖಿಲ ಕರ್ನಾಟಕ ಬಂಜಾರ ಸೇವಾಲಾಲ ಯುವ ಸೇನೆಯಿಂದ ಪತ್ರ ಚಳುವಳಿ ನಡೆಸಲಾಯಿತು.