ಚಿಕ್ಕಮಗಳೂರು: ದತ್ತಜಯಂತಿಯ ಸಂದರ್ಭದಲ್ಲಿ ಕೋಮುಗಲಭೆ ಸೃಷ್ಟಿಸಲು ರೂಪಿಸಿರುವ ಸಂಚು ದಕ್ಷ ಪೊಲೀಸ್ ಇಲಾಖೆಯಿಂದ ಬಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.