ಧುಮ್ಮಿಕ್ಕಿ ಹರಿಯುತ್ತಿರುವ ಭದ್ರಾ ನದಿ: ಬದುಕು ಅತಂತ್ರ

ಚಿಕ್ಕಮಗಳೂರು, ಸೋಮವಾರ, 16 ಜುಲೈ 2018 (11:19 IST)

ಭದ್ರಾನದಿ ಧುಮ್ಮಿಕ್ಕಿ ಹರಿಯುತ್ತಿರುವ ಜನರ ಬದುಕು ಅತಂತ್ರಕ್ಕೆ ಸಿಲುಕಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಸಂಚಾರ ವ್ಯತ್ಯಯವಾಗುತ್ತಿದೆ. ಏತನ್ಮಧ್ಯೆ ಭದ್ರ ನದಿ ದಾಟಲಾಗದೆ ಜನರು ಪರದಾಟವನ್ನು ನಡೆಸುತ್ತಿದ್ದಾರೆ.
 
ಭದ್ರಾವತಿ ನದಿ ತುಂಬಿ ತುಳುಕುತ್ತಿರುವುದರಿಂದ ಹಲವಾರು ಕುಟುಂಬಗಳು ಅತಂತ್ರಗೊಂಡಿವೆ.  ನದಿ ದಾಟಲಾಗದೆ ಪರದಾಟ ನಡೆಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಳೆಕುಡಿಗೆ ಹಾಗೂ ಸುತ್ತಲಿನ ಗ್ರಾಮಗಳ ಜನರು ತೊಂದರೆ ಅನುಭವಿಸುವಂತಾಗಿದೆ.

40 ವರ್ಷಗಳಿಂದ ತೆಪ್ಪದಲ್ಲೇ ನದಿ ದಾಟ್ತಿದ್ದ ಕೆಲವು ಕುಟುಂಬಗಳು ಈಗ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿವೆ. ಎಂಟು ದಿನಗಳಿಂದ ಮನೆ ಬಿಟ್ಟು ಹೊರಬಾರದ ಜನರು ನದಿ ಪ್ರವಾಹಕ್ಕೆ ಹೆದರಿದ್ದಾರೆ. ದಿನನಿತ್ಯದ ಬಳಕೆ ಸಾಮಗ್ರಿಯನ್ನೂ ತರಲಾಗದೆ ಕಂಗಾಲಾಗಿರೋ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ತೆಪ್ಪ ಬಿಟ್ರೆ ಇವರಿಗೆ ಬದುಕೇ ಇಲ್ಲ.
ನಗರಕ್ಕೆ ಬರೋದಕ್ಕೆ ಬೇರೆ ಮಾರ್ಗವೂ ಇಲ್ಲ. ನದಿ ನೀರು ಕಡಿಮೆಯಾಗೋವರ್ಗೂ ಮನೆಯಲ್ಲೇ ಇರಬೇಕಾದ ಸ್ಥಿತಿ ಬಂದೊದಗಿದೆ. ದಿನದಿಂದ ದಿನಕ್ಕೆ ಭದ್ರೆಯ ಒಡಲು ಕೂಡ ಜೋರಾಗ್ತಿದೆ.
 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದಿರಾ ಕ್ಯಾಂಟೀನ್ ನಿಜವಾಗಿಯೂ ಯಶಸ್ವಿಯಾಗಿದೆಯಾ? ಸಚಿವ ಯುಟಿ ಖಾದರ್ ಹೇಳಿದ್ದೇನು?

ಮಂಗಳೂರು: ರಾಜ್ಯ ವಿಧಾನಸಭೆ ಕಲಾಪದಲ್ಲಿ ಇಂದಿರಾ ಕ್ಯಾಂಟೀನ್ ಅವ್ಯವಹಾರಗಳ ಬಗ್ಗೆ ಬಿಜೆಪಿ ...

news

ಫ್ರಾನ್ಸ್ ಫುಟ್ಬಾಲ್ ವಿಶ್ವಕಪ್ ಗೆದ್ದ ಖುಷಿಯಲ್ಲಿ ಎಡವಟ್ಟು ಟ್ವೀಟ್ ಮಾಡಿದ ಕಿರಣ್ ಬೇಡಿ

ಪುದುಚೇರಿ: ಫಿಫಾ 2018 ವಿಶ್ವಕಪ್ ಫುಟ್ಬಾಲ್ ಫೈನಲ್ ನಲ್ಲಿ ಫ್ರಾನ್ಸ್ ಗೆದ್ದ ಖುಷಿಯಲ್ಲಿ ವಿಶ್ವದಾದ್ಯಂತ ...

news

ಮುಂಗಾರು ಅಧಿವೇಶನಕ್ಕೆ ಸಚಿವ ಅರುಣ್ ಜೇಟ್ಲಿ ಗೈರು: ಹೊಸ ನಾಯಕನ ಹುಡುಕಾಟದಲ್ಲಿ ಬಿಜೆಪಿ

ನವದೆಹಲಿ: ಈ ಬಾರಿ ಮುಂಗಾರು ಅಧಿವೇಶನಕ್ಕೆ ರಾಜ್ಯಸಭೆ ನಾಯಕ ಸಚಿವ ಅರುಣ್ ಜೇಟ್ಲಿ ಗೈರು ಹಾಜರಾಗಲಿದ್ದಾರೆ. ...

news

ರಾಹುಲ್ ಗಾಂಧಿ ಪ್ರಧಾನಿಯಾಗುವುದಕ್ಕೆ ನಮ್ಮ ತಕಾರಾರಿಲ್ಲ: ಎಚ್ ಡಿ ದೇವೇಗೌಡ

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದರ ಕುರಿತು ಜೆಡಿಎಸ್ ವರಿಷ್ಠ ಎಚ್ ಡಿ ...

Widgets Magazine