ಬೆಂಗಳೂರು-ಲೋಕಸಭಾ ಕ್ಷೇತ್ರದಿಂದ ಸಚಿವರು ಸಿದ್ಧಪಡಿಸಿರುವ ಸಂಭಾವ್ಯರ ಪಟ್ಟಿ ನನಗೆ ತೃಪ್ತಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂಭಾವ್ಯ ಅಭ್ಯರ್ಥಿಗಳ ಬಗ್ಗೆಗಿನ ವರದಿಗಳು ತೃಪ್ತಿಕರವಾಗಿಲ್ಲ, ನಾನು, ಎಐಸಿಸಿ, ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಮೀಕ್ಷೆ ನಡೆಸುತ್ತಿದ್ದೇವೆ ಎಂದರು. ಎಐಸಿಸಿ ನಾಯಕರು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಅಜೆಂಡಾ ನೀಡಿದ್ದಾರೆ.