ತಾಯಿಯ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕರನ್ನು ತಡೆದದ್ದಕ್ಕೆ ಮಗನ ಮೇಲೆ ಮಾರಣಾಂತಿಕ ಹಲ್ಲೆ

ಚಿತ್ರದುರ್ಗ, ಶನಿವಾರ, 10 ನವೆಂಬರ್ 2018 (07:04 IST)

: ತಾಯಿ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕರನ್ನು ತಡೆದದ್ದಕ್ಕೆ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ತಾಲೂಕಿನ ಮಾಡದಕೆರೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ.


ಗೊಲ್ಲರಹಟ್ಟಿ ನಿವಾಸಿ ಚಿದಾನಂದ(26) ಹಲ್ಲೆಗೊಳಗಾದ ಯುವಕ. ಈತನ ಶೈಕ್ಷಣಿಕ ಹಾಗೂ ಆರ್ಥಿಕಾಭಿವೃದ್ಧಿ ಸಹಿಸದ ಅದೇ ಗ್ರಾಮದ ಮತ್ತೊಂದು ಕೋಮಿನ ಯುವಕರಾದ  ಶ್ರೀನಿವಾಸ, ಸುನಿಲ್, ಮಂಜ, ಪ್ರವೀಣ್ ಸೇರಿದಂತೆ ಏಳು ಜನರು ಮದ್ಯ ಸೇವನೆ ಮಾಡಿ ಚಿದಾನಂದ ಮನೆಗೆ ಬಂದು ಆತನ ತಾಯಿಯ ಜೊತೆ  ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ತಡೆಯಲು ಬಂದ ಚಿದಾನಂದನ ತಲೆಗೆ ಇಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಲ್ಲದೆ, ಇದನ್ನು ತಡೆದ ಆತನ ತಾಯಿಯ ಮೇಲೂ ಹಲ್ಲೆ ಮಾಡಿದ್ದಾರೆ.


ಈ ವೇಳೆ ಗ್ರಾಮಸ್ಥರು ಸ್ಥಳಕ್ಕೆ ಬಂದ ಕಾರಣ ಯುವಕರು ಪರಾರಿಯಾಗಿದ್ದಾರೆ. ಈ ಘಟನೆಯಿಂದಾಗಿ ಎದೆ ಹಾಗೂ ತಲೆಗೆ ಗಂಭೀರ ಗಾಯವಾಗಿದ್ದ ಚಿದಾನಂದ ಅವರನ್ನು ತಕ್ಷಣವೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹೊಸದುರ್ಗ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಕಟ್ಟಿಗೆ ತುರುಕಿ ವಿಕೃತ ಮೆರೆದ ಕಾಮುಕರು

ರಾಂಚಿ : ಮಹಿಳೆಯೊಬ್ಬಳ ಮೇಲೆ ಮಾಜಿ ಪತಿ ಮತ್ತು ಆತನ ಗೆಳೆಯರು ಸಾಮೂಹಿಕ ಅತ್ಯಾಚಾರ ನಡೆಸಿದ ಹಿನ್ನಲೆಯಲ್ಲಿ ...

news

ಫೋನಿನಲ್ಲಿ ಮಾತನಾಡಿದ್ದಕ್ಕೆ ಯುವಕನ ಮರ್ಮಾಂಗ ಕತ್ತರಿಸಿದ ಮಹಿಳೆ

ಒಡಿಶಾ : ಮಹಿಳೆಯೊಬ್ಬಳು ಯುವಕನೊಬ್ಬನಿಗೆ ಮದ್ಯಪಾನ ಮಾಡಿಸಿ ಆತ ಪ್ರಜ್ಞೆ ತಪ್ಪಿದಾಗ ಆತನ ಮರ್ಮಾಂಗವನ್ನು ...

news

ಗ್ರೀನ್ ಕಾರಿಡಾರ್ ಹೆದ್ದಾರಿ ಕಲಬುರಗಿ ನಗರದಿಂದ ಹಾದು ಹೋಗಲಿ ಎಂದ ಖರ್ಗೆ

ಉದ್ದೇಶಿತ ಮುಂಬೈ-ಚೆನ್ನೈ ಗ್ರೀನ್ ಕಾರಿಡಾರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ...

news

ಕೇಸ್ ರದ್ದುಗೊಳಿಸಿ ಎಂದು ಕೋರ್ಟ ಮೆಟ್ಟಿಲೇರಿದ ರೆಡ್ಡಿ

ತಲೆ ಮರೆಸಿಕೊಂಡಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ ತಮ್ಮ ವಿರುದ್ಧದ ಆಂಬಿ‌ಡೆಂಟ್ ಕಂಪೆನಿಯ ವಂಚನೆ ಪ್ರಕರಣ ...

Widgets Magazine