ಮಹದಾಯಿ ವಿವಾದ ಕುರಿತು ಗೋವಾದ ಮನವಿಗೆ ರಾಜ್ಯ ಸರ್ಕಾರ ವಿರೋಧ

ಬೆಂಗಳೂರು, ಶುಕ್ರವಾರ, 9 ಫೆಬ್ರವರಿ 2018 (07:16 IST)

ಬೆಂಗಳೂರು : ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ನ್ಯಾಯಮಂಡಳಿಯ ಅವಧಿಯನ್ನು ಮತ್ತೊಂದು ವರ್ಷ ವಿಸ್ತರಿಸಬೇಕೆಂದು ಗೋವಾದ ಮನವಿಗೆ ವಿರೋಧ ವ್ಯಕ್ತಪಡಿಸಲು  ತೀರ್ಮಾನಿಸಿದೆ.


ಈ ಕುರಿತು ವಿಧಾನಮಂಡಲದ ಉಭಯ ಸದನಗಳ ನಾಯಕರ ಜೊತೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿ ಚರ್ಚಿಸಿದಾಗ ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂದು  ಗೋವಾದ ಮನವಿಗೆ ವಿರೋಧ ವ್ಯಕ್ತಪಡಿಸಲು  ನಿರ್ಧರಿಸಿದ್ದಾರೆ.
ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ‘ಮಹದಾಯಿ ವಿವಾದ ಬಗೆಹರಿಸಲು 2010 ರಲ್ಲಿ ನ್ಯಾಯಮಂಡಳಿ ರಚನೆ ಮಾಡಲಾಗಿದೆ. ನ್ಯಾಯಾಮಂಡಲಿ ಮೂರು ವರ್ಷದಲ್ಲಿ ವರದಿ ನೀಡಬೇಕು. ಆದರೆ ಮಹದಾಯಿ ನ್ಯಾಯ ಮಂಡಳಿಯನ್ನು ಎರಡು ಬಾರಿ ವಿಸ್ತರಿಸಲಾಗಿದೆ. ಕಾನೂನಿನಲ್ಲಿ ಎರಡು ಬಾರಿಗಿಂತ ಹೆಚ್ಚು ನ್ಯಾಯಾಮಂಡಳಿಯನ್ನು ವಿಸ್ತರಿಸಲು ಅವಕಾಶವಿಲ್ಲ. ಹೀಗಾಗಿ ರಾಜ್ಯ ಸರ್ಕಾರವೂ ನ್ಯಾಯ ಮಂಡಳಿಯ ಅವಧಿಯನ್ನು ವಿಸ್ತರಿಸದೇ ನಿಗದಿತ ಸಮಯದಲ್ಲಿಯೇ ಆದೇಶ ನೀಡುವಂತೆ ಕೇಳಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಿಂದೂಗಳ ಮತಗಳು ಬೇಕಿಲ್ಲವೆಂದು ಸರ್ಕಾರ ಹೇಳಲಿ- ಸಂಸದ

ಮಠಗಳ ನಿಯಂತ್ರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಹೊರಡಿಸಿದ ಸುತ್ತೋಲೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸಂಸದ ...

news

ಕಾಂಗ್ರೆಸ್ಸಿನೊಳಗಿನ ಕಾಮ್ರೇಡ್ ಸಿದ್ದರಾಮಯ್ಯ- ಪ್ರತಾಪ್ ಸಿಂಹ

ಮಠಗಳ ನಿಯಂತ್ರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಹೊರಡಿಸಿದ ಸುತ್ತೋಲೆ ಬಗ್ಗೆ ಕಿಡಿಕಾರಿದ ಬಿಜೆಪಿ ಸಂಸದ ...

news

ಹಿಂದೂಗಳ ಭಾವನೆಯೊಂದಿಗೆ ಚೆಲ್ಲಾಟ- ಹೆಗಡೆ ಆಕ್ರೋಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂಗಳ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ...

news

ಸಚಿವ ಡಾ.ಶರಣಪ್ರಕಾಶ ಪಾಟೀಲ್ ಗೈರಿಗೆ ಸದನದಲ್ಲಿ ಆಕ್ಷೇಪ

ವಿಧಾನಸಭೆಯಲ್ಲಿ ನಡೆದ ಸದನಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಗೈರು ...

Widgets Magazine
Widgets Magazine