ಇಂದಿರಾ ಕ್ಯಾಂಟಿನ್ ಗೆ ನಗರಸಭೆ ಆಯುಕ್ತರ ಹಠಾತ್ ಭೇಟಿ

ಬೀದರ್, ಮಂಗಳವಾರ, 4 ಸೆಪ್ಟಂಬರ್ 2018 (14:50 IST)

ಬೀದರ್ ನಗರಸಭೆ ಕಚೇರಿ ಬಳಿ ಇರುವ ಇಂದಿರಾ ಕ್ಯಾಂಟಿನ್ ಗೆ ವಿ.ಮನೋಹರ್ ದಿಢೀರನೆ ಭೇಟಿ ನೀಡಿದರು. ಇಂದಿರಾ ಕ್ಯಾಂಟಿನಿನ ಊಟ ಸವಿದು, ಕಳಪೆ ಆಹಾರ ಸರಬರಾಜಿಗೆ ಅಕ್ರೋಶ ವ್ಯಕ್ತಪಡಿಸಿದರು.
 
ಒಳ್ಳೆ ಆಹಾರ ಸರಬರಾಜು ಮಾಡಿ ಅಂತಾ ಸರಕಾರ ಕೋಟ್ಯಾಂತರ ರೂ.ಗಳನ್ನು ಇಂದಿರಾ ಕ್ಯಾಂಟಿನ್ ಗಳಿಗಾಗಿ ಖರ್ಚು ಮಾಡುತ್ತಿದೆ. ಆದರೆ ಬೀದರ್ ನಗರದಲ್ಲಿ ಮಾತ್ರ ನುಚ್ಚು ಮಿಶ್ರಿತ ಅನ್ನ ಮಾಡಿ ಬಡವರ ಹೊಟ್ಟೆಗೆ ಹಾಕಲಾಗುತ್ತಿದೆ ಅಂತಾ ನಗರಸಭೆ ಆಯುಕ್ತ ವಿ.ಮನೋಹರ್ ಅಕ್ರೋಶ ವ್ಯಕ್ತಪಡಿಸಿದ್ರು.
ಅಕ್ಕಿ ನುಚ್ಚಿನಿಂದ ತಯಾರಿಸಿದ ಅನ್ನ, ಈ ಬಗ್ಗೆ ಹತ್ತಾರು ದೂರುಗಳು, ಇದನ್ನ ಸ್ವತಃ ಪರಿಶೀಲನೆಯನ್ನು ನಗರಸಭೆ ಆಯುಕ್ತರು ಮಾಡಿದರು.  
 
ಕೋಟೆ ನಗರಿ ಬೀದರ್ ನ ಇಂದಿರಾ ಕ್ಯಾಂಟಿನ್ ನಲ್ಲಿ ಎಲ್ಲವು ಅಂದುಕೊಂಡಂತೆ ನಡೆದ್ರೆ ಉತ್ತಮ ಆಹಾರ ಪೂರೈಕೆ ತಾಣವಾಗಬೇಕಿತ್ತು. ಆದ್ರೆ ಇಲ್ಲಿ ಕಳಪೆ ನುಚ್ಚು ಅಕ್ಕಿಯಿಂದ ಅನ್ನ ತಯಾರಿಸಿ ಅದನ್ನ ಹಸಿದು ಬಂದವರಿಗೆ ಕಾಟಾಚಾರಕ್ಕೆ ನೀಡಲಾಗುತ್ತಿದೆ. ಈ ಬಗ್ಗೆ ದೂರ ಬಂದಿದ್ದೆ ತಡ ಎಚ್ಚೆತ್ತ ಬೀದರ್ ನಗರಸಭೆ ಆಯುಕ್ತ ವಿ.ಮನೋಹರ್ ಕ್ಯಾಂಟಿನಿಗೆ ಭೇಟಿ ನೀಡಿ ಸ್ವತಃ ಊಟ ಮಾಡಿ ಪರಿಶೀಲನೆ ನಡೆಸಿದ್ರು. ಊಟದಲ್ಲಿ ಅರ್ಧಕ್ಕಿಂತ ಜಾಸ್ತಿ ನುಚ್ಚು ಅಕ್ಕಿಯಿಂದ ತಯಾರಿಸಲಾದ ಅನ್ನ ಇರೋದು ಕಂಡು ಬಂತು. ಈ ಬಗ್ಗೆ ಅವರು ಇಂದಿರಾ ಕ್ಯಾಂಟಿನಿನ ಮೇಲ್ವಿಚಾರಕರನ್ನ ತರಾಟೆಗೆ ತೆಗೆದುಕೊಂಡರು.


 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಜ್ಯ ಸರಕಾರದಿಂದ ಬಡವರ ಬಂಧು ಯೋಜನೆ ಜಾರಿಗೆ ಸಿದ್ಧತೆ

ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಿಂದ ಬಡವರ ಬಂಧು ಯೋಜನೆಯನ್ನು ಜಾರಿಗೆ ತರಲು ಭರ್ಜರಿ ಸಿದ್ಧತೆ ...

news

ಫಾಲ್ಸ್ ನಲ್ಲಿ ಬೃಹತ್ ಬಂಡೆ ಕುಸಿತ; ಅಭಿವೃದ್ಧಿಗೆ ಒತ್ತಾಯ

ಉಕ್ಕಿ ಹರಿಯುತ್ತಿರುವ ಫಾಲ್ಸ್ ರಭಸಕ್ಕೆ ಬೃಹತ್ ಬಂಡೆ ಫಾಲ್ಸ್ ಮಧ್ಯ ಭಾಗಕ್ಕೆ ಕುಸಿದ ಬಿದ್ದಿರುವ ಘಟನೆ ...

news

ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಏಕಾಏಕಿಯಾಗಿ ಬಿದ್ದ ಮರ; ಮುಂದೇನಾಯ್ತು?

ಕಾಮಗಾರಿಯಲ್ಲಿ ಗುತ್ತಿಗೆ ನೀಡಿದ ಕಂಟ್ರಾಕ್ಟರ್ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಬೈಕ್ ಸವಾರರ ...

news

ಸ್ಥಳೀಯ ಸಂಸ್ಥೆ: ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುತ್ತೇವೆ ಎಂದ ಮಾಜಿ ಪ್ರಧಾನಿ

ಅತಂತ್ರವಾಗಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರ ಮೂಲಕ ...

Widgets Magazine
Widgets Magazine