ಕಾಂಗ್ರೆಸ್, ಜೆಡಿಎಸ್‌ಗೆ ಪಾಠ ಕಲಿಸುವ ಸಮಯ ಬಂದಿದೆ: ಬಿಎಸ್‌ವೈ ವಾಗ್ದಾಳಿ

ವಿಜಯಪುರ, ಸೋಮವಾರ, 4 ಡಿಸೆಂಬರ್ 2017 (19:22 IST)

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ಗೆ ಪಾಠ ಕಲಿಸುವ ಸಮಯ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಹೇಳಿದ್ದಾರೆ.
ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ್ದೇವೆ. ಆದರೆ ಜೆಡಿಎಸ್ ದ್ರೋಹ ಬಗೆಯಿತು. ನಾನು ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳುಗಳಲ್ಲಿ ಷರತ್ತುಗಳನ್ನು ಹಾಕಿದರು. ನಾನು ಅವರ ಷರತ್ತುಗಳನ್ನು ಒಪ್ಪದೆ ರಾಜೀನಾಮೆ ನೀಡಿ ನಿಮ್ಮ ಮುಂದೆ ಬಂದೆ ಎಂದು ತಿಳಿಸಿದ್ದಾರೆ.
 
ಭಾಗ್ಯಲಕ್ಷ್ಮಿ ಯೋಜನೆಯನ್ನು ನಾನು 5 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಿದ್ದೆ. ಆದರೆ, ಕಾಂಗ್ರೆಸ್ ಸರಕಾರ ಅದನ್ನು 3 ಲಕ್ಷಕ್ಕೆ ಇಳಿಸಿತು. ಸಿಎಂ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
 
ನಮ್ಮ ರಾಜ್ಯದಲ್ಲಿಯೇ ಹಬ್ಬ ಹರಿದಿನಗಳನ್ನು ಮಾಡಲು ಸರಕಾರ ಬಿಡುತ್ತಿಲ್ಲ. ಇದನ್ನು ನೋಡಿದಲ್ಲಿ ನಾವು ಯಾವ ದೇಶದ ರಾಜ್ಯದಲ್ಲಿ ಇದ್ದೇವೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಸ್ತೆಯಲ್ಲಿ ಮುಸ್ಲಿಂ ಯುವತಿಯರ ಡ್ಯಾನ್ಸ್ ವೈರಲ್- ಆಕ್ರೋಶ

ರಸ್ತೆಯಲ್ಲಿ ಮುಸ್ಲಿಂ ಯುವತಿಯರು ಡ್ಯಾನ್ಸ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ...

news

ಪತ್ನಿ ಪೀಡಕರ ಪಟ್ಟಿ ನವದೆಹಲಿ ನಂಬರ್‍ ಒನ್‍

ದೇಶದಲ್ಲಿ ವಿವಾಹಿತರ ಮೇಲೆ ಗಂಡಂದಿರಿಂದ ನಡೆಯುವ ಕ್ರೂರ ಕೃತ್ಯಗಳಲ್ಲಿ ನವದೆಹಲಿ ನಂಬರ್‍‍ ಒನ್‍‍ ...

news

ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ವ್ಯಾನ್‍‍ನಿಂದ ಜಿಗಿದ ಗರ್ಭಿಣಿ ಸಾವು

ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಚಲಿಸುವ ವ್ಯಾನ್‍‍ನಿಂದ ಜಿಗಿದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ...

news

ಮಾಧ್ಯಮದವರ ಮೇಲೆ ಕಿಡಿಕಾರಿದ ಈಶ್ವರಪ್ಪ

ಬಿಜೆಪಿಯಲ್ಲಿ ಭಿನ್ನಮತದ ಬಗ್ಗೆ ಪ್ರಶ್ನಿಸಿದ ಮಾಧ್ಯಮದವರ ಮೇಲೆ ಕಿಡಿಕಾರಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ...

Widgets Magazine
Widgets Magazine