Widgets Magazine

ನಾಲಿಗೆ ವ್ಯಕ್ತಿಯ ಸಂಸ್ಕ್ರತಿ ಹೇಳುತ್ತದೆ, ಬೇಗ್ ದೇಶದ ಕ್ಷಮೆಯಾಚಿಸಲಿ: ಬಿಎಸ್‌ವೈ

ಬೆಂಗಳೂರು, ಶುಕ್ರವಾರ, 13 ಅಕ್ಟೋಬರ್ 2017 (18:25 IST)

Widgets Magazine

ನಾಲಿಗೆ ವ್ಯಕ್ತಿಯ ಸಂಸ್ಕ್ರತಿ ಹೇಳುತ್ತದೆ, ಪ್ರಧಾನಿ ಮೋದಿಯವರನ್ನು ಅವಹೇಳವಾಗಿ ಟೀಕಿಸಿದ ಸಚಿವ ರೋಷನ್ ಬೇಗ್ ದೇಶದ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ರೋಷನ್ ಬೇಗ್, ಪ್ರಧಾನಿ ಮೋದಿಯವರನ್ನು ಅಸಭ್ಯ ಪದಗಳಿಂದ ಟೀಕಿಸಿರುವುದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
 
ಪ್ರಕಟಣೆಯೊಂದನ್ನು ಹೊರಡಿಸಿರುವ ಬಿಎಸ್‌ವೈ, ಪ್ರಧಾನಿ ಮೋದಿ ಬಗ್ಗೆ ಸಚಿವ ರೋಷನ್ ಬೇಗ್ ಹೇಳಿಕೆ ಖಂಡನೀಯ.ಸಿಎಂ ಸಿದ್ದರಾಮಯ್ಯ ಕೂಡಲೇ ಬೇಗ್‌ರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ. 
 
ನಕಲಿ ಛಾಪಾ ಕಾಗದ ಹಗರಣದಲ್ಲಿ ಸಚಿವ ರೋಷನ್ ಬೇಗ್ ಹೆಸರು ಕೇಳಿಬಂದಾಗ ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು. ಅವರ ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಗಿತ್ತು. ಅಂತಹ ವ್ಯಕ್ತಿ ಪ್ರಧಾನಿ ಮೋದಿಯನ್ನು ಟೀಕಿಸುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ಪಕ್ಷದಿಂದ ಶಾಸಕ ಎಸ್.ಪಾಟೀಲ್ ನಡಹಳ್ಳಿ ಉಚ್ಚಾಟನೆ

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಶಾಸಕ ಎಸ್.ಪಾಟೀಲ್ ನಡಹಳ್ಳಿ ಉಚ್ಚಾಟಿಸಿ ಕೆಪಿಸಿಸಿ ಅಧ್ಯಕ್ಷ ...

news

ದಾಖಲೆ ಇದ್ರೆ ಕೋರ್ಟ್ ಗೆ ಹೋಗಿ ಅಕ್ರಮ ಸಾಬೀತು ಪಡಿಸಿ: ಅಮಿತ್ ಷಾ ಸವಾಲು

ನವದೆಹಲಿ: ಅಕ್ರಮವೆಸಗಿರುವ ಬಗ್ಗೆ ನಿಮ್ಮ ಬಳಿ ದಾಖಲೆಯಿದ್ದರೆ ಕೋರ್ಟ್ ಗೆ ಹೋಗಿ ಆರೋಪ ಸಾಬೀತುಪಡಿಸಿ ಎಂದು ...

news

ರೋಷನ್‌ಬೇಗ್‌ ಬಳಸಿದ್ದ ಕೆಟ್ಟ ಪದಗಳನ್ನೇ ಬಳಸಿದ ಸಿ,ಟಿ.ರವಿ

ಬೆಂಗಳೂರು: ಪ್ರಧಾನಿ ಮೋದಿ ಸೂ...ಮಗ ಎಂದು ಸಚಿವ ರೋಷನ್ ಬೇಗ್ ಟೀಕೆಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ...

news

ವಿದ್ಯಾರ್ಥಿಗಳಿಗೆ ಲವ್ ಗುರು ಆದ ಸಚಿವ ಎಚ್.ಅಂಜನೇಯ

ಧಾರವಾಡ: ಓದಿನ ಕಡೆ ಗಮನಕೊಡಿ ಓದಿದ ನಂತರ ಲವ್ ಮಾಡಿ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ ಲವ್ ಪಾಠ ...

Widgets Magazine Widgets Magazine