ಸತ್ಯ ಹೇಳುವ, ಭರವಸೆ ಈಡೇರಿಸುವ ಕಾಂಗ್ರೆಸ್ ಬೆಂಬಲಿಸಿ- ರಾಹುಲ್ ಗಾಂಧಿ

ಬಳ್ಳಾರಿ, ಶನಿವಾರ, 10 ಫೆಬ್ರವರಿ 2018 (20:55 IST)

ಸುಳ್ಳು ಹೇಳುವ ಬಿಜೆಪಿ ಅಥವಾ ಸತ್ಯ ಹೇಳುವ ಭರವಸೆಗಳನ್ನು ಈಡೇರಿಸುವ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳಲು ರಾಜ್ಯದ ಜನರಿಗೆ ಅವಕಾಶ ಬಂದಿದ್ದು, ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು  ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಹೊಸಪೇಟೆಯಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಕರ್ನಾಟಕ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ಹಿಂದಿನ ಬಿಜೆಪಿ ಸರ್ಕಾರ ಜಗತ್ತಿನ ಭ್ರಷ್ಟಾಚಾರದ ದಾಖಲೆ ಮುರಿದಿದೆ ಎಂದು ತಿರುಗೇಟು  ನೀಡಿದ್ದಾರೆ.

ರಫೆಲ್ ಯುದ್ದ ವಿಮಾನ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರ ಬಗ್ಗೆ ಮೋದಿ ಅವರು ಬಾಯಿ ಬಿಡುತ್ತಿಲ್ಲ. ಅವರ ಮಿತ್ರನಿಗೆ ಲಾಭ ಮಾಡಿಕೊಡಲು ಒಪ್ಪಂದವನ್ನೇ ಬದಲಿಸಿದ್ದಾರೆ. ಮೋದಿ ಅವರು ಕನ್ನಡಿಯನ್ನು ನೋಡಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಅವರು ಸಿದ್ದರಾಮಯ್ಯ ಅವರನ್ನು ನೋಡಿ ಪಾಠ ಕಲಿಯಬೇಕು ಎಂದು ತಿಳಿಸಿದ್ದಾರೆ.

ಗುಜರಾತ್ ರಾಜ್ಯವನ್ನು ಬದಲಾವಣೆ ಮಾಡಿದ್ದೇನೆ ಎಂದು ನರೇಂದ್ರ ಮೋದಿ ಅವರು ಹೇಳಿಕೊಂಡು ತಿರುಗಾಡುತ್ತಾರೆ. ನಾನು ನಾಲ್ಕು ತಿಂಗಳು ಕಾಲ ಗುಜರಾತ್ ರಾಜ್ಯದ ಎಲ್ಲ ಜಿಲ್ಲೆಗಳನ್ನು ಪ್ರವಾಸ ಮಾಡಿದ್ದೇನೆ. ಮೋದಿ ಅವರ ಮಿತ್ರರಾದ 10 ಜನ ಉದ್ಯಮಿಗಳಿಗೆ ರಾಜ್ಯವನ್ನೇ ಕೊಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ 371 ಜೆ ಕಾಯ್ದೆ ಜಾರಿಗೊಳಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಹಾಗೂ ಅವಕಾಶಗಳನ್ನು ಒದಗಿಸಲಾಗಿದೆ. ಈ ವರೆಗೆ ನಾಲ್ಕು ಸಾವಿರ ಕೋಟಿ ಅನುದಾನ ಹಾಗೂ ಐದು ಸಾವಿರ ಉದ್ಯೋಗಗಳು ಲಭಿಸಿವೆ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ- ಸಿದ್ದರಾಮಯ್ಯ

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕನಸು ಮಾತ್ರ ಅದು ಈಡೇರಲು ಸಾಧ್ಯವಿಲ್ಲ ಎಂದು ...

news

ಸಿದ್ದರಾಮಯ್ಯನನ್ನು ಬೆಳೆಸಿದ್ದು ಪಾಪದ ಕೆಲಸ– ದೇವೇಗೌಡ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹ ನೀಚ ಮುಖ್ಯಮಂತ್ರಿಯನ್ನು ಬೆಳೆಸಿರುವುದು ಜೀವನದಲ್ಲಿ ಮಾಡಿದ ಮಹಾ ಪಾಪದ ...

news

ಜೈಲಿಗೆ ಹೋಗಿ ಬಂದವರ ಕ್ಷೇತ್ರದಿಂದ ರಾಹುಲ್ ಗಾಂಧಿ ಯಾತ್ರೆ– ಶೋಭಾ ವ್ಯಂಗ್ಯ

ಜೈಲಿಗೆ ಹೋಗಿ ಬಂದವರ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಯಾತ್ರೆ ಆರಂಭಿಸಿದ್ದಾರೆ ಎಂದು ...

news

ಎಲ್‌.ಕೆ.ಅಡ್ವಾಣಿಯನ್ನು ಮೂಲೆಗುಂಪು ಮಾಡಲಿಲ್ಲವೇ– ಅಂಬರೇಶ್ ತಿರುಗೇಟು

ಬಿಜೆಪಿ ಪಕ್ಷದಲ್ಲಿ ಎಲ್‌.ಕೆ. ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಲಿಲ್ಲವೇ ಎಂದು ಮಾಜಿ ಸಚಿವ ಅಂಬರೇಶ್‌ ...

Widgets Magazine
Widgets Magazine