ವಾಮಾಚಾರ ಆರೋಪ: ವ್ಯಕ್ತಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

ಗದಗ, ಭಾನುವಾರ, 16 ಸೆಪ್ಟಂಬರ್ 2018 (15:39 IST)

ಮುಳ್ಳುಹಂದಿಯ ಮುಳ್ಳನ್ನು ಬೇರೆಯವರ ಮನೆಯಲ್ಲಿ ಇಟ್ಟು ಜಗಳವಾಡೋ ಹಾಗೆ ಮಾಡ್ತಿದ್ದ ವಾಮಾಚಾರಿಯೊಬ್ಬನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ಗದಗ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಮುಳಗುಂದದ ಸಿದ್ದೇಶ್ವರ ನಗರದಲ್ಲಿ ಈ ಘಟನೆ ನಡೆದಿದ್ದು, ವಾಮಾಚಾರಿಯನ್ನು  ಲಕ್ಷ್ಮಣ ಭಂಗಿ ಎಂದು ಗುರುತಿಸಲಾಗಿದೆ. ಗ್ರಾಮದ ಮಾಂತೇಶ್ ಎನ್ನೋರ ಮನೆಯ ಹೊರಗೆ ಮುಳ್ಳುಹಂದಿಯ ಮುಳ್ಳನ್ನು ಇಡುವಾಗ ವಾಮಾಚಾರಿ ಸಿಕ್ಕಿಬಿದ್ದಿದ್ದಾನೆ. ಮುಳ್ಳನ್ನು ಈ ರೀತಿ ಇಟ್ಟರೆ ಮನೆಯಲ್ಲಿ ಜಗಳಗಳಾಗಿ ಮನೆ ಬೇರೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಹಿಂದೆಯೂ ಸಹ ಲಕ್ಷ್ಮಣ ಇದೇ ಬಗೆಯಾಗಿ‌ ಬೇರೆ ಬೇರೆ ಮಾಡುವಾಗ ಸಿಕ್ಕಿಬಿದ್ದಿದ್ದು, ಆಗ ಗ್ರಾಮಸ್ಥರು ಈತನಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗುತ್ತಿದೆ.  

ಬೆಳಗಿನ ಜಾವ ಈ ಘಟನೆ ನಡೆದಿದ್ದು, ಲಕ್ಷ್ಮಣ ಭಂಗಿಯನ್ನು ಹಿಡಿದ ಗ್ರಾಮಸ್ಥರು ಮುಳಗುಂದ ಪೊಲೀಸರಿಗೆ ಒಪ್ಪಿಸಿದ್ದಾರೆ. ಮುಳಗುಂದ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೊರಕೆ ಹಿಡಿದ ಬಿಜೆಪಿ ಶಾಸಕ

ಸ್ವಚ್ಛತೆಯೇ ಸೇವಾ ಅಭಿಯಾನದ ಅಂಗವಾಗಿ ಬಿಸಿಲುನಗರಿಯಲ್ಲಿ ಶಾಸಕರೊಬ್ಬರು ಕೈಯಲ್ಲಿ ಪೊರಕೆ ಹಿಡಿದು ...

news

ರಾಜ್ಯ ಸರಕಾರ ಶೀಘ್ರ ಪತನವಾಗುತ್ತೆ ಎಂದ ಹುಚ್ಚ ವೆಂಕಟ್

ರಾಜ್ಯ ಸರ್ಕಾರ ಶೀಘ್ರ ಪತನವಾಗುತ್ತದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ ಎಂದು ಫೈರಿಂಗ್ ...

news

ಪೋನಿನಲ್ಲಿ ಹೆಚ್ಚುಕಾಲ ಮಾತನಾಡಿದ್ದಕ್ಕೆ ಕೋಪಗೊಂಡು ಸಹೋದರಿಯನ್ನೇ ಕೊಲೆ ಮಾಡಿದ ಸಹೋದರ

ಮುಂಬೈ : ಸಹೋದರನೊಬ್ಬ ತನ್ನ ಸಹೋದರಿ ಹೆಚ್ಚು ಹೊತ್ತು ಮೊಬೈಲ್ ನಲ್ಲಿ ಮಾತನಾಡುತ್ತಿರುವುದಕ್ಕೆ ಆಕೆಯನ್ನು ...

news

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದು ಬಾವಿಗೆ ಎಸೆದ ಪಾತಕಿಗಳು

ವಿಜಯಪುರ : ವಿಜಯಪುರದಲ್ಲಿ ಇತ್ತೀಚೆಗೆ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ...

Widgets Magazine