Widgets Magazine

ಬೇಸಿಗೆಗೂ ಮೊದಲೇ ಶುರುವಾಯ್ತು ನೀರಿನ ಸಂಕಷ್ಟ!

ಚಿಕ್ಕಬಳ್ಳಾಪುರ| Jagadeesh| Last Modified ಶುಕ್ರವಾರ, 22 ಫೆಬ್ರವರಿ 2019 (17:37 IST)
ಬೇಸಿಗೆಗೂ ಮೊದಲೇ ನೀರಿನ ಹಾಹಾಕಾರ ಶುರುವಾಗಿದೆ. ಆಕ್ರೋಶಗೊಂಡ ಜನರು ಕೊಡಗಳೊಂದಿಗೆ ನಗರಸಭೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಒಂದು ತಿಂಗಳಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲೂಡಿ ಗ್ರಾಮಕ್ಕೆ‌ ನೀರು ಪೂರೈಕೆಯಾಗಿಲ್ಲ. ಗೌರಿಬಿದನೂರು ತಾಲ್ಲೂಕಿನ ಕಲ್ಲೂಡಿ
ಗ್ರಾಮದ ಜನರು ನೀರಿಲ್ಲದೇ ಆಕ್ರೋಶಗೊಂಡಿದ್ದು,
ಖಾಲಿಕೊಡೆಗಳನ್ನು ಹಿಡಿದು ಜನತೆ ಪ್ರತಿಭಟನೆ ನಡೆಸಿದರು.

ನಗರಸಭೆ
ಎದುರು ಸುಮಾರು100ಹೆಚ್ಚು ಮಂದಿಯಿಂದ
ಪ್ರತಿಭಟನೆ ನಡೆಯಿತು. ನಗರಸಭೆ ಕಚೇರಿಗೆ ಮುತ್ತಿಗೆ
ಹಾಕಿ ಪ್ರತಿಭಟನೆ ನಡೆಸಲಾಯಿತು. ನೀರು ಸರಬರಾಜು ಮಾಡುವಂತೆ ಆಗ್ರಹ ಮಾಡಲಾಯಿತು.

ಇದರಲ್ಲಿ ಇನ್ನಷ್ಟು ಓದಿ :