ವೆಬ್ ದುನಿಯಾ ಓದುಗರಿಗೆ ಕನ್ನಡವರಾಜ್ಯೋತ್ಸವದ ಶುಭಾಶಯಗಳು. ಕರ್ನಾಟಕ ಏಕೀಕರಣವಾಗಿ ಇಂದಿಗೆ ಬರೋಬ್ಬರಿ ಅರವತ್ತು ವರ್ಷ. ಇಷ್ಟೊಂದು ಸುದೀರ್ಘ ಅವಧಿ ಕಳೆದರೂ ಕರ್ನಾಟಕ ನೆಲ, ಜಲ, ಭಾಷೆ ವಿಷಯದಲ್ಲಿ ತೀರಾ ಹಿಂದುಳಿದಿದೆ. ಕನ್ನಡ, ಕನ್ನಡ ಎಂದು ಬೊಬ್ಬಿರಿಯುವವರಿಗೇನೂ ಇಲ್ಲಿ ಕಡಿಮೆಯಿಲ್ಲ. ಹಾಗೆ ಪರಭಾಷಾ ಹಾವಳಿಯೂ ಹೆಚ್ಚಾಗಿಯೂ ಎಲೆಮರೆಯ ಕಾಯಾಗಿ ಕನ್ನಡಕ್ಕಾಗಿ ದುಡಿಯುವವರು ಮಾತ್ರ ತೀರಾ ವಿರಳ.