Widgets Magazine

ನಮ್ಮ ಬಿಜೆಪಿಯಲ್ಲಿ ಒಂದು ರೋಗವಿದೆ,ಸುದ್ದಿ ಲೀಕ್ ಮಾಡ್ತಾರೆ: ಪ್ರತಾಪ್ ಸಿಂಹ

ಬೆಂಗಳೂರು, ಭಾನುವಾರ, 20 ಆಗಸ್ಟ್ 2017 (13:58 IST)

Widgets Magazine

ಬಿಜೆಪಿ ಮುಖಂಡರಲ್ಲಿ ಒಂದು ರೋಗವಿದೆ. ಪಕ್ಷದ ಮಾಹಿತಿಗಳನ್ನು ಮಾಧ್ಯಮಗಳಿಗೆ ಲೀಕ್ ಮಾಡುತ್ತಾರೆ ಎಂದು ಬಿಜೆಪಿ ಸಂಸದ ಗುಡುಗಿದ್ದಾರೆ
ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಯುವಮೋರ್ಚಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಗರಕ್ಕೆ ಬಂದಾಗ, ಯುವಮೋರ್ಚಾ ಬಗ್ಗೆ ಪ್ರಶ್ನಿಸಿ ಹೋರಾಟದಲ್ಲಿ ಎಷ್ಟು ಬಾರಿ ಪೆಟ್ಟು ತಿಂದಿದ್ದಿರಿ, ಎಷ್ಟು ಬಾರಿ ಟಿಯರ್ ಗ್ಯಾಸ್ ಎದುರಿಸಿದ್ದೀರಿ ಎಂದು ಪ್ರಶ್ನಿಸಿದ್ದಾಗಿ ತಿಳಿಸಿದರು. 
 
ಯುವಮೋರ್ಚಾದ ಕೆಲಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎನ್ನುವಾಗಲೇ ಅರ್ಧಕ್ಕೆ ನಿಲ್ಲಿಸಿ ಎಂದು ಗುಡುಗಿದ ಅಮಿತ್ ಶಾ, ನೀವು ಉಗ್ರ ಹೋರಾಟ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾಗಿ ಮಾಹಿತಿ ನೀಡಿದರು.
 
ಅಮಿತ್ ಶಾ ನನಗೆ ಪ್ರಶ್ನಿಸಿದ್ದಾರೆ ಎಂದರೆ ಯುವಮೋರ್ಚಾಗೆ ಪ್ರಶ್ನಿಸಿದಂತೆ. ಆದ್ದರಿಂದ ಮುಂದೆ ಉಗ್ರ ಹೋರಾಟ ಮಾಡಬೇಕು. ಮತ್ತೆ ಅಮಿತ್ ಶಾ ಕೇಳುವಂತಹ ಪರಿಸ್ಥಿತಿ ತಂದುಕೊಳ್ಳಬಾರದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
 
ಬರುಬರುತಾ ರಾಯರ ಕುದುರೆ ಕತ್ತೆ ಎನ್ನುವಂತಾಯಿತು. ಬಿಜೆಪಿ ಯುವಮೋರ್ಚಾ ನಡೆಸುತ್ತಿರುವ ಹೋರಾಟ ಕುಂಠಿತವಾಗಿದೆ. ಮುಂಬರುವ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಸಿದ್ದರಾಗಿ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕರೆ ನೀಡಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಎಸಿಬಿಯಿಂದ ಸತ್ಯ ಸಂಗತಿ ಹೊರಬೀಳಲಿದೆ: ಕಾಗೋಡು ತಿಮ್ಮಪ್ಪ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾದ ದೂರಿನ ತನಿಖೆ ನಡೆಸುತ್ತಿರುವ ...

news

ಎಫ್‌ಐಆರ್ ದಾಖಲಾಗಿರುವವರ ಪರ ಬಿಜೆಪಿ ಹೋರಾಟ: ಸಿಎಂ ವ್ಯಂಗ್ಯ

ಬೆಂಗಳೂರು: ಎಫ್‌ಐಆರ್ ದಾಖಲಾಗಿರುವವರ ಪರ ಬಿಜೆಪಿ ಹೋರಾಟ ಮಾಡುತ್ತಿದೆ. ಇದು ಎಂತಹ ಹೋರಾಟವೆಂದು ಹೇಳಲಿ ...

news

ಜೆಡಿಎಸ್ 2018ರ ಚುನಾವಣೆಗೆ ಅಖಾಡಾ ಸಿದ್ದಪಡಿಸಿಕೊಳ್ತಿದೆ: ದೇವೇಗೌಡ

ವಿಜಯಪುರ: ಮುಂದಿನ ವರ್ಷ 2018ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಜೆಡಿಎಸ್ ಪಕ್ಷ ಅಖಾಡಾ ...

news

ಮಗಳ ಮೇಲೆ ಗ್ಯಾಂಗ್ ರೇಪ್: ಶಾಕ್ ನಿಂದ ತಂದೆ ಸಾವು

ಲಕ್ನೋ: ಮಗಳ ಮೇಲೆ ಪೊಲೀಸ್ ಕಾನ್ಸ್ ಟೇಬಲ್ ಮತ್ತು ಗ್ರಾಮದ ಮುಖಂಡ ಸೇರಿಕೊಂಡು ನಡೆಸಿದ ಸಾಮೂಹಿಕ ಆತ್ಮಹತ್ಯೆ ...

Widgets Magazine Widgets Magazine