ಸಚಿವರು, ಮುಖಂಡರು, ಶಾಸಕರ ಮಧ್ಯೆ ಹೊಂದಾಣಿಕೆಯಿಲ್ಲ: ದಿನೇಶ್ ಗುಂಡೂರಾವ್

ಶಿವಮೊಗ್ಗ, ಶುಕ್ರವಾರ, 5 ಮೇ 2017 (13:01 IST)

Widgets Magazine

ಸಚಿವರು, ಮುಖಂಡರು, ಶಾಸಕರ ಮಧ್ಯೆ ಹೊಂದಾಣಿಕೆಯಿಲ್ಲದಿರುವುದರಿಂದ ನಮ್ಮಲ್ಲಿರುವ ಸಮಸ್ಯೆಗಳ ಬಗ್ಗೆ ಶೀಘ್ರದಲ್ಲಿಯೇ ಚರ್ಚೆ ನಡೆಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವರು, ಮುಖಂಡರು, ಶಾಸಕರ ಸಭೆ ಮೇ 22 ರಿಂದ 26 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಸಭೆಯಲ್ಲಿ ಪರಸ್ಪರರ ಮಧ್ಯೆ ಎದುರಾಗಿರುವ ಭಿನ್ನಮತಗಳ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
 
ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿರುವುದರಿಂದ ಪಕ್ಷವನ್ನು ಇಂದಿನಿಂದಲೇ ಸಜ್ಜುಗೊಳಿಸುವುದು ಅಗತ್ಯವಾಗಿದೆ. ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು. 
 
ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಒಂದಾಗಿ ಚುನಾವಣೆ ಎದುರಿಸಿದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಜೆಪಿಯಲ್ಲಿರುವ ಭಿನ್ನಮತ ಶೀಘ್ರವೇ ಶಮನ: ಜನಾರ್ದನ ರೆಡ್ಡಿ

ಕೋಲಾರ: ರಾಜ್ಯ ಬಿಜೆಪಿಯಲ್ಲಿರುವ ಭಿನ್ನಮತ ಶೀಘ್ರವೇ ಶಮನವಾಗುವ ವಿಶ್ವಾಸವಿದೆ. ಎಂದು ಮಾಜಿ ಸಚಿವ ಗಾಲಿ ...

news

ನಕಲಿ ಅಂಕಪಟ್ಟಿ ಮಾರುತ್ತಿರುವವರ ಬಂಧನ

ಬೆಂಗಳೂರು: ನಗರದಲ್ಲಿ ನಕಲಿ ಅಂಕಪಟ್ಟಿ ಮಾರುತ್ತಿರುವವರನ್ನು ಸಿಸಿಬಿ ಮತ್ತು ಹಲಸೂರು ಪೊಲೀಸ್ ಠಾಣೆಯ ...

news

ಬಿಎಸ್‌ವೈ ತಂಗಿ, ಕುಟುಂಬಸ್ಥರನ್ನು ನಿಂದಿಸಿದ ಕಾ.ಪು.ಸಿದ್ದಲಿಂಗಸ್ವಾಮಿ

ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತಂಗಿ, ಕುಟುಂಬಸ್ಥರನ್ನು ಅವರ ಆಪ್ತ ...

news

ಭೂವಿವಾದಗಳಿಂದ ದೂರವಿರಿ: ಪೊಲೀಸರಿಗೆ ಸಿಎಂ ವಾರ್ನಿಂಗ್

ಬೆಂಗಳೂರು: ಭೂ ವಿವಾದಗಳನ್ನು ಇತ್ಯರ್ಥಗೊಳಿಸುವಲ್ಲಿ ಪೊಲೀಸರು ನೇರವಾಗಿ ಅಥವಾ ಪರೋಕ್ಷವಾಗಿ ...

Widgets Magazine Widgets Magazine