ಸಂಕ್ರಾಂತಿಗೆ ಯಾವ ಕ್ರಾಂತಿಯೂ ಆಗಲ್ಲ ಎಂದ ಶಾಸಕ

ಚಾಮರಾಜನಗರ, ಸೋಮವಾರ, 14 ಜನವರಿ 2019 (12:15 IST)

ಸಂಕ್ರಾಂತಿಗೆ ಸೂರ್ಯ ಮಾತ್ರ ತನ್ನ ಪಥ ಬದಲಾಯಿಸುತ್ತಾನೆ. ಸರ್ಕಾರ ಮತ್ತು ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಜೆಪಿಯವರ ಸಂಕ್ರಾಂತಿಗೆ ‘ಕ್ರಾಂತಿ’ ಎಂಬ ಹೇಳಿಕೆಗೆ ಶಾಸಕ ಎನ್.ಮಹೇಶ್ ವ್ಯಂಗ್ಯವಾಡಿದ್ದಾರೆ.

ಚಾಮರಾಜನಗರದ ಕಸ್ತೂರು ಬಂಡಿ ಜಾತ್ರೆಗೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್​ನಲ್ಲಿ ಬೆಳೆದಿರುವುದರಿಂದ ಅಷ್ಟು ಸುಲಭವಾಗಿ ಪಕ್ಷ ಬಿಡಲು ಸಾಧ್ಯವಿಲ್ಲ. ನಾನು ಬಿಎಸ್​ಪಿಯ ನಿಷ್ಠಾವಂತ ಕಾರ್ಯಕರ್ತ ಎಂದರು.
 
ಪ್ರಧಾನಿ ನರೇಂದ್ರ ಮೋದಿ , ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಕ್ಲರ್ಕ್ ಎಂದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒಂದು ರಾಜ್ಯದ ಅಧಿಕೃತ ಮುಖ್ಯಮಂತ್ರಿಯನ್ನ ಕ್ಲರ್ಕ್ ಅಂತ ಒಬ್ಬ ಪ್ರಧಾನ ಮಂತ್ರಿ ಹಾಗೆಲ್ಲ  ಮಾತನಾಡಬಾರದು. ಪ್ರಧಾನ ಮಂತ್ರಿ ಸ್ಥಾನಕ್ಕೆ ಅವರ ಘನತೆಗೆ ಇದರಿಂದ ಧಕ್ಕೆಯಾಗುತ್ತದೆ. ಜನರಿಂದ ಆಯ್ಕೆಯಾಗಿರುವವರು, 117 ಜನ ಶಾಸಕರ ಬೆಂಬಲ ಪಡೆದುಕೊಂಡು ಮುಖ್ಯಮಂತ್ರಿ ಆಗಿದ್ದಾರೆ. ಕುಮಾರಸ್ವಾಮಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
 
ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣ ಕುರಿತು ನಾನೇನು ಮಾತನಾಡುವುದಿಲ್ಲ. ಆ ಕುರಿತು ತನಿಖೆ ನಡೆಯುತ್ತಿದೆ. ಆ ನಂತರ ತೀರ್ಮಾನ ಏನಾಗುತ್ತದೆ ಎಂಬುದನ್ನು ನೋಡೋಣ ಎಂದು ಪ್ರತಿಕ್ರಿಯಿಸಿದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇನ್ಮುಂದೆ 5-8ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಮುಂದಿನ ತರಗತಿಗೆ ತೇರ್ಗಡೆ-ಕೇಂದ್ರ ಸರ್ಕಾರ

ನವದೆಹಲಿ : ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಮಕ್ಕಳನ್ನು ಫೇಲ್ ಮಾಡಬಾರದು ಎಂಬ 2009ರಲ್ಲಿ ಯುಪಿಎ ...

news

ಕರ್ನಾಟಕ- ಆಂಧ್ರ ಗಡಿಯಲ್ಲಿ ಆನೆ ಹಾವಳಿಗೆ ಜನ ತತ್ತರ

ಕಾಡಾನೆಗಳ ಹಿಂಡು ದಾಳಿ ನಡೆಸಿ ಬೆಳೆ ನಾಶ ಮಾಡುತ್ತಿರುವುದರಿಂದ ಕರ್ನಾಟಕ – ಆಂಧ್ರಪ್ರದೇಶ ಗಡಿ ಭಾಗದ ಜನರು ...

news

ಕಾರು ಡಿಕ್ಕಿಯಾಗಿ ಜಿಂಕೆ ಸಾವು: ಕಳಚಿದ ಲೋಗೋದಿಂದ ಸಿಕ್ಕ ಸುಳಿವು

ರಸ್ತೆ ದಾಟುತ್ತಿದ್ದ ಜಿಂಕೆಗೆ ಬೆಂಜ್ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿರುವ ಘಟನೆ ತಡರಾತ್ರಿ ನಡೆದಿದೆ.

news

ಮೋದಿಯ ಸ್ವಚ್ಛತೆಯ ಪಾಠ ಮಾಡಿದ ಬಿ.ಎಸ್.ಪಿ ಶಾಸಕ!

ಪ್ರಧಾನಿ ನರೇಂದ್ರ ಮೋದಿಯವರ ಹಾದಿಯನ್ನು ರಾಜ್ಯದ ಏಕೈಕ ಬಿ.ಎಸ್.ಪಿ. ಶಾಸಕರು ಹಿಡಿದಿದ್ದಾರಾ? ಇಂತಹದ್ದೊಂದು ...