ಭ್ರಷ್ಟಾಚಾರಿ, ದುರಹಂಕಾರಿ ಸಿದ್ದರಾಮಯ್ಯ ಸರ್ಕಾರವನ್ನು ಎತ್ತಿ ಬಿಸಾಡಬೇಕು; ಗುಡುಗಿದ ಅಮಿತ್ ಶಾ

ಮೈಸೂರು, ಗುರುವಾರ, 25 ಜನವರಿ 2018 (17:15 IST)

ಮೈಸೂರು: 'ಸಿಎಂ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಸಿದ್ದರಾಮಯ್ಯ. ತಾನೊಬ್ಬ  ಸಮಾಜವಾದಿ ಎನ್ನುವ ಸಿದ್ದರಾಮಯ್ಯ ರೂಪಾಯಿಯ ವಾಚ್‌ ಕಟ್ಟುತ್ತಾರೆ. ನಿಮ್ಮಲ್ಲಿ ಯಾರ ಬಳಿಯಾದರೂ 70 ಲಕ್ಷದ ವಾಚ್‌ ಇದೆಯೇ' ಎಂದು ಮೈಸೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ  ಅಮಿತ್ ಶಾ ಪ್ರಶ್ನಿಸಿದರು. 


ಸಿಎಂ ಸಿದ್ದರಾಮಯ್ಯ ನೇತ್ರತ್ವದ ಸರ್ಕಾರದ ಭ್ರಷ್ಟಾಚಾರದ ಕತೆ ಹೇಳಲು ಹೋದರೆ 7 ದಿನಗಳು ಸಾಲುವುದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಹಲವಾರು ಹಗರಣಗಳನ್ನು ಮಾಡಿದೆ. ಅನ್ನಭಾಗ್ಯ ಯೋಜನೆ, ಆರ್ಕಾವತಿ ಡಿನೋಟಿಫಿಕೇಷನ್‌ ಇವೆಲ್ಲದರಲ್ಲಿ ಕೋಟ್ಯಂತರ ರೂಪಾಯಿ ಹಣ ನುಂಗಿದ್ದಾರೆ. ಆಪ್ತ ಗೋವಿಂದ್‌ ರಾಜು ನಿವಾಸದಲ್ಲಿ ಡೈರಿ ಸಿಕ್ಕ ಬಳಿಕ ಸಿದ್ದರಾಮಯ್ಯ ನಿದ್ದೆ ಹಾಳಾಗಿದೆ' ಎಂದರು.


ಈ ಸಮಯ ಭ್ರಷ್ಟಾಚಾರಿ, ದುರಹಂಕಾರಿ ಸಿದ್ದರಾಮಯ್ಯ ಸರ್ಕಾರವನ್ನು ಎತ್ತಿ ಬಿಸಾಡಬೇಕು. ಈ ಬಂದ್ ಸಿಎಂ ಸಿದ್ದರಾಮಯ್ಯ ಅವರ ಕುತಂತ್ರದಿಂದಾಗಿ ನಡೆದಿದೆ. ಬಂದ್ ಇದ್ದರೂ ಇಲ್ಲಿ ಬಂದಿರುವ ನಿಮಗೆಲ್ಲಾ ನನ್ನ ಅಭಿನಂದನೆಗಳು' ಎಂದು ಅಮಿತ್ ಶಾ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದಕ್ಷಿಣ ಏಷ್ಯಾದ ಅತೀ ಚಿಕ್ಕ ಮಗು ಈ ಮಾನುಷಿ...!!!

ಉದಯಪುರ ಮೂಲದ ದಂಪತಿಗಳಿಗೆ ಜನಿಸಿದ ಮಗು ಇದಾಗಿದ್ದು ಮಾನುಷಿ ಎಂದು ಹೆಸರಿಡಲಾಗಿದೆ, ಈ ಮಗು ಹುಟ್ಟಿದ ...

news

ಕೆರಳಿದ ಅರವಿಂದ್ ಕೇಜ್ರಿವಾಲ್ ಟಾಂಗ್ ಕೊಟ್ಟಿದ್ದು ಯಾರಿಗೆ…?

ಹೊಸದಿಲ್ಲಿ : ಗುರುಗ್ರಾಮದಲ್ಲಿ ಶಾಲಾ ಮಕ್ಕಳ ವಾಹನದ ಮೇಲೆ ಪದ್ಮಾವತ್ ಚಿತ್ರ ಪ್ರತಿಭಟನಾಕಾರರು ದಾಳಿ ...

news

‘ಮೋದಿ ಎಂಬ ಹುಲಿ ಫೆ.4 ರಂದು ಘರ್ಜಿಸಲಿದೆ, ಸಿಎಂ ಸಿದ್ದರಾಮಯ್ಯ ಆಗ ಇಲಿಯಾಗ್ತಾರೆ’

ಮೈಸೂರು: ಮೋದಿ ಎಂಬ ಹುಲಿ ಫೆಬ್ರವರಿ 4 ರಂದು ಬೆಂಗಳೂರಿನಲ್ಲಿ ಘರ್ಜಿಸಲಿದೆ. ಆಗ ಸಿಎಂ ಸಿದ್ದರಾಮಯ್ಯ ...

news

ಕರ್ನಾಟಕ ಬಂದ್ ಕೊನೆಗೂ ಮುಗಿಯಿತು, ರಸ್ತೆಗಿಳಿದ ಬಸ್

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂದಿನ ಕರ್ನಾಟಕ ಬಂದ್ ಮುಕ್ತಾಯಗೊಳ್ಳುತ್ತಿದ್ದು, ಜನ ಜೀವನ ಸಹಜ ...

Widgets Magazine
Widgets Magazine