ಸಿಎಂ ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿತಿದೆ: ಕೆ.ಎಸ್.ಈಶ್ವರಪ್ಪ

ಬಂಟ್ವಾಳ, ಶನಿವಾರ, 11 ನವೆಂಬರ್ 2017 (14:31 IST)

ಮೈಯಲ್ಲಿ ಟಿಪ್ಪು ಸುಲ್ತಾನ್ ರಕ್ತ ಹರಿತಿದೆ. ನನ್ನ ಮೈಯಲ್ಲಿ ಕನಕದಾಸರ ರಕ್ತ ಹರಿತಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತಮ್ಮ ಹೆಸರು ಬದಲಿಸಿ ಟಿಪ್ಪು ಎಂದು ಕರೆದುಕೊಳ್ಳಲಿ. ರಾಜ್ಯದಲ್ಲಿ ರಾಷ್ಟ್ರಭಕ್ತರ ಹತ್ಯೆಗಳಾಗುತ್ತಿವೆ. ಪೊಲೀಸರನ್ನು ಇಟ್ಟುಕೊಂಡು ಆಟವಾಡ್ತೀರಾ ಸಿದ್ದರಾಮಯ್ಯನವರೇ? ಕುಲ ಕುಲಕ್ಕೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ವಾಕ್ ಪ್ರಹಾರ್ ನಡೆಸಿದರು
 
ರಾಷ್ಟ್ರಭಕ್ತರನ್ನು ಹಣಿಯಲು ಇಂದಿರಾಗಾಂಧಿಯವರಿಂದಲೇ ಸಾಧ್ಯವಾಗಲಿಲ್ಲ. ಇನ್ನು ನಿಮ್ಮಿಂದ ಸಾಧ್ಯವೇ? ಮುಸ್ಲಿಮರು ಹಿಂದುಗಳನ್ನು ಹತ್ಯೆ ಮಾಡುವಾಗ ನಿಮ್ಮ ರಕ್ತ ಕುದಿಯಲಿಲ್ಲವೇ? ನಿಮ್ಮ ಸಚಿವ ರೈ ಘಟೋದ್ಘಜ ಮುಸ್ಲಿಂವಾದಿ ಎಂದು ತಿರುಗೇಟು ನೀಡಿದರು.
 
ಸಿಎಂ ಸಿದ್ದರಾಮಯ್ಯಗೆ ಹೆಣ್ಣುಮಕ್ಕಳಿಲ್ಲ. ಆದ್ದರಿಂದ, ಹೆಣ್ಣುಮಕ್ಕಳು ಎದುರಿಸುವ ಸಂಕಷ್ಟಗಳು ಅವರಿಗೆ ಅರ್ಥವಾಗುವುದಿಲ್ಲ ಎಂದು ಕಿಡಿಕಾರಿದ್ಗಾರೆ.
 
ಸಿಎಂ ಸಂಪುಟದ ಸಚಿವರೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಅವಾಜ್ ಹಾಕಿ ಕಲ್ಲಡ್ಕ ಪ್ರಭಾಕರ್‌ರನ್ನು ಬಂಧಿಸುವಂತೆ ಒತ್ತಡ ಹೇರ್ತಾರೆ. ಅವರ ಒಂದು ರೋಮ ಮುಟ್ಟಿದರೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ ಎಂದು ಬಿಜೆಪಿ ಮುಖಂಡ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿಯವರಂತಹ ಭ್ರಷ್ಟ, ಕೊಳಕ ರಾಜಕಾರಣಿಗಳು ಬೇರೆ ಇಲ್ಲ: ಸಿಎಂ

ಬೆಂಗಳೂರು: ಬಿಜೆಪಿಯವರಂತಹ ಭ್ರಷ್ಟ, ಕೊಳಕ ರಾಜಕಾರಣಿಗಳು ಬೇರೆ ಯಾರೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ...

news

ಕಾಂಗ್ರೆಸ್ ಪಕ್ಷದ ಬಗ್ಗೆ ಅಸಮಾಧಾನವಿದೆ: ಶಾಸಕ ಮಲಕರೆಡ್ಡಿ

ಕಲಬುರಗಿ: ಕಾಂಗ್ರೆಸ್ ಪಕ್ಷದ ಬಗ್ಗೆ ಅಸಮಾಧಾನವಿದೆ. ಆದರೆ. ಪಕ್ಷ ಬಿಡುವ ವರದಿಗಳು ಉಹಾಪೋಹ ಎಂದು ಮಾಜಿ ...

news

ಸಸ್ಯಹಾರಿ ವಿದ್ಯಾರ್ಥಿಗಳಿಗೆ ಮಾತ್ರ ಚಿನ್ನದ ಪದಕ: ವಿ.ವಿ.ಆದೇಶ

ಪುಣೆ: ಕಠಿಣ ಸಸ್ಯಾಹಾರಿ ಮತ್ತು "ವ್ಯಸನ" ಅಥವಾ "ಕೆಟ್ಟ ಅಭ್ಯಾಸ" ಇಲ್ಲದ ವಿದ್ಯಾರ್ಥಿಗಳಿಗೆ ಮಾತ್ರ ಚಿನ್ನದ ...

news

ನಿಮ್ಮ ಕೈಲಾಗದಿದ್ರೆ ಒಪ್ಪಿಕೊಳ್ಳಿ ಎಂದು ಕೇಂದ್ರಕ್ಕೆ ಟಾಂಗ್ ಕೊಟ್ಟ ರಾಹುಲ್ ಗಾಂಧಿ

ನವದೆಹಲಿ: ಗುಜರಾತ್ ಗೆ ಚುನಾವಣಾ ಪ್ರಚಾರಕ್ಕಾಗಿ ಮೂರು ದಿನಗಳ ಪ್ರವಾಸ ಕೈಗೊಳ್ಳಲಿರುವ ಕಾಂಗ್ರೆಸ್ ...

Widgets Magazine
Widgets Magazine