ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ: ಆದ್ರೆ ಬಿಜೆಪಿ ಶಾಸಕನಿಂದಲೇ ಟಿಪ್ಪು ಜಯಂತಿ ಆಚರಣೆ

ಬಳ್ಳಾರಿ, ಶುಕ್ರವಾರ, 10 ನವೆಂಬರ್ 2017 (13:26 IST)

ಟಿಪ್ಪು ಸುಲ್ತಾನ್ ಕೊಲೆಗಡುಕ, ದೇಶದ್ರೋಹಿ, ಹಿಂದು ವಿರೋಧಿ ಎಂದು ಬಿಜೆಪಿ ಕಟುವಾಗಿ ವಿರೋಧಿಸುತ್ತಿರುವ ಮಧ್ಯೆಯೇ, ಬಿಜೆಪಿ ಶಾಸಕ ಆನಂದ್ ಸಿಂಗ್ ಟಿಪ್ಪು ಜಯಂತಿ ಆಚರಣೆಯಲ್ಲಿ ಭಾಗಿಯಾಗಿ ಬಿಜೆಪಿ ವರಿಷ್ಠರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
ಬಿಜೆಪಿಯ ಇತರ ಮುಖಂಡರೊಂದಿಗೆ ಸಭೆಯಲ್ಲಿ ಪಾಲ್ಗೊಂಡು ಬಿಜೆಪಿ ಕಚೇರಿಯ ಮುಂದೆಯೇ ಟಿಪ್ಪು ಜಯಂತಿ ಆಚರಿಸಿದ ಆನಂದ್ ಸಿಂಗ್, ಬಿಜೆಪಿ ವರಿಷ್ಠರ ವಿರೋಧ ಕಟ್ಟಿಕೊಂಡಂತಾಗಿದೆ.
 
ಬಳ್ಳಾರಿಯ ಹೊಸಪೇಟೆಯಲ್ಲಿ ಮುಸ್ಲಿಂ ಸಮುದಾಯ ಸಂಖ್ಯೆ ಅಧಿಕವಾಗಿರುವುದರಿಂದ ಟಿಪ್ಪು ಜಯಂತಿ ಆಚರಿಸದಿದ್ದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಿರುಗೇಟು ಬೀಳುವ ಸಾಧ್ಯತೆಗಳಿವೆ ಎನ್ನುವ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿ ಆಚರಿಸಿದ್ದಾರೆ ಎನ್ನಲಾಗುತ್ತಿದೆ.
 
ಮತ್ತೊಂದೆಡೆ ಹೊಸಪೇಟೆಯಲ್ಲಿ ಸರ್ಕಾರದಿಂದ ಆಚರಿಸುತ್ತಿರುವ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಆನಂದ ಸಿಂಗ್‌ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಇದು ಟಿಪ್ಪು ಜಯಂತಿ ವಿರೋಧಿಸುತ್ತಿರುವ ಬಿಜೆಪಿ ಮುಖಂಡರಿಗೆ ಮುಜುಗರ ಉಂಟುಮಾಡಿದೆ ಎನ್ನಲಾಗ್ತಿದೆ. 
 
ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಿ.ಟಿ,ರವಿ. ಕೆ.ಎಸ್.ಈಶ್ವರಪ್ಪ ಸೇರಿದಂತೆ ಘಟಾನುಘಟಿ ಮುಖಂಡರು ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿರುದ್ಧ ಒಂದೆಡೆ ವಾಗ್ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಬಿಜಿಪೆ ಶಾಸಕನೇ ಟಿಪ್ಪು ಜಯಂತಿ ಆಚರಿಸುತ್ತಿರುವುದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿದೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಟಿಪ್ಪು ಜಯಂತಿ ಬಿಜೆಪಿ ಆನಂದ್ ಸಿಂಗ್ ಕಾಂಗ್ರೆಸ್ Bjp Anandsingh Congress Tippu Jayanti

ಸುದ್ದಿಗಳು

news

ಯುಎಸ್- ಭಾರತ ವಹಿವಾಟು ಹೆಚ್ಚಿಸಲು ಆದ್ಯತೆ: ಸಿಜಿ ಬುರ್ಗೆಸ್

ನವದೆಹಲಿ: ಅನ್-ಲಾಕ್ ಯು.ಎಸ್.-ಇಂಡಿಯಾ ವಹಿವಾಟು ಸಂಭಾವ್ಯ ನಮ್ಮ ಎರಡು ದೇಶಗಳ ಎದುರಿಸುತ್ತಿರುವ ಅತ್ಯಂತ ...

news

8 ರಾಜ್ಯಗಳಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರು?

ನವದೆಹಲಿ: ದೇಶದ 8 ರಾಜ್ಯಗಳಲ್ಲಿ ಹಿಂದೂ ಧರ್ಮೀಯರಿಗೆ ಅಲ್ಪಸಂಖ್ಯಾತ ಪಟ್ಟ ನೀಡುವ ಬಗ್ಗೆ ಇಂದು ...

news

ಟಿಪ್ಪು ಜಯಂತಿ ಕೋಲಾಹಲ: ಬಸ್ ಜಖಂ, ಬಿಜೆಪಿ ನಾಯಕನ ಬಂಧನ

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಇಂದು ಟಿಪ್ಪು ಜಯಂತಿ ಆಚರಣೆ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ...

news

ಟಿಪ್ಪು ಜಯಂತಿ ಆಚರಣೆ ಹಿನ್ನಲೆ: ಮಡಿಕೇರಿ, ಮಂಡ್ಯದಲ್ಲಿ ಬಿಗಿ ಪೊಲೀಸ್ ಪಹರೆ

ಬೆಂಗಳೂರು: ಸರ್ಕಾರದ ವತಿಯಿಂದ ಇಂದು ಟಿಪ್ಪು ಜಯಂತಿ ಆಚರಣೆ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ...

Widgets Magazine