Widgets Magazine

ಸಿದ್ದರಾಮಯ್ಯ ಟಿಪ್ಪು ಸುಲ್ತಾನನ ಶನಿ ಸಂತಾನದ ವಾರಸುದಾರ: ಅದ್ದಂಡ ಕಾರ್ಯಪ್ಪ

ಬೆಂಗಳೂರು| Kusuma| Last Modified ಬುಧವಾರ, 8 ನವೆಂಬರ್ 2017 (12:48 IST)
ಬೆಂಗಳೂರು: ಮಗ ರಾಕೇಶ್ ಸತ್ತಾಗ ಪುತ್ರಶೋಖದಿಂದ ಕಣ್ಣೀರಿಟ್ಟ ಸಿದ್ದರಾಮಯ್ಯ ನವರೇ, ಕೊಡಗಿನ ಜನ ತಮ್ಮ ಮಕ್ಕಳನ್ನು ಕಳೆದುಕೊಂಡಾಗ ಅನುಭವಿಸಿದ ನೋವು ನಿಮಗೆ ಅರ್ಥವಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಟಿಪ್ಪು ವಿರೋಧಿ ಹೋರಾಟ ಸಮಿತಿ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅದ್ದಂಡ ಕಾರ್ಯಪ್ಪ, ಟಿಪ್ಪುವಿನಿಂದಾಗಿ ಇಡೀ ಕುಟುಂಬವೇ ಹತ್ಯೆಗೀಡಾದ ಕುಟುಂಬದಿಂದ ಬಂದವನು ನಾನು. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಸಿದ್ದರಾಮಯ್ಯ ಭಜನೆ ಮಾಡುವ ಡೋಂಗಿ ಸಾಹಿತಿಗಳೇ ತುಂಬಿದ್ದಾರೆ. ಸಿದ್ದರಾಮಯ್ಯ ಟಿಪ್ಪು ಸುಲ್ತಾನನ ಶನಿ ಸಂತಾನದ ವಾರಸುದಾರರು. ಅವರ ಡಿಎನ್ಎ ಟೆಸ್ಟ್ ಮಾಡಿಸಬೇಕು. ಬೇಕಾದ್ರೆ ಅವರೊಟ್ಟಿಗೆ ನನ್ನ ಡಿಎನ್ಎ ಟೆಸ್ಟ್ ಮಾಡಿಸಿ. ಕಾವೇರಿ ಮಾತೆಯ, ಚಾಮುಂಡೇಶ್ವರಿಯ ಆಶೀರ್ವಾದ ಮೀನು ತಿಂದು ಧರ್ಮಸ್ಥಳಕ್ಕೆ ಹೋದ ಸಿದ್ದರಾಮಯ್ಯನಿಗಿಲ್ಲ ಎಂದರು.

ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಇರುವ ಏಕೈಕ ಪ್ರದೇಶ ಕೊಡಗು. ಕೊಡಗಿನಲ್ಲಿ ನಾವು ನಾಯಿಗಳಿಗೆ ಟಿಪ್ಪುವಿನ‌ ಹೆಸರು ಇಡುತ್ತಿದ್ದೇವೆ. ಸಿದ್ದರಾಮಯ್ಯಗೆ ಕೊಡವರು, ಚಿತ್ರದುರ್ಗದ ನಾಯಕರು, ಮೇಲುಕೋಟೆ ಅಯ್ಯಂಗಾರರ ಓಟು ಬೇಡವೇ. ನ. 10 ಕೊಡವರಿಗೆ ಸೂತಕದ ಮನೆ. ಅಲ್ಲಿ ನೀವು ಸಂಭ್ರಮ ಆಚರಿಸಿ ಪಟಾಕಿ ಹೊಡೆಯುತ್ತೀರಾ. ಬನ್ನಿ ಅಲ್ಲಿ ನಿಮಗೆ ಬೇರೆ ಪಟಾಕಿ ಸಿಡಿಯುತ್ತದೆ. ಕಾಂಗ್ರೆಸ್ ಸರ್ಕಾರ ಕೊಡವರಿಗೆ ಬೇಸರ ಮಾಡುತ್ತಿದೆ. ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಗ್ವಿ ಒಬ್ಬ ಕೋತಿ. ಫೀಲ್ಡ್ ಮಾರ್ಷಲ್ ಕಾರ್ಯಪ್ಪಗೆ ಭಾರತ ರತ್ನ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಾನೆ. ಅಭಿಷೇಕ್ ಸಿಂಗ್ವಿ ದೇಶದ್ರೋಹಿ. ನೀವು ಭಾರತ ರತ್ನ ಕೊಡಿ ಬಿಡಿ ಕಾರ್ಯಪ್ಪ ನಮ್ಮೆಲ್ಲರ ಹೀರೋ ಎಂದರು.

ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಮಾತನಾಡಿ, ಟಿಪ್ಪು ಯಾವುದೋ ಒಂದು ನಿರ್ಧಿಷ್ಟ ಕೋಮಿಗೆ ಸೇರಿದವನೆಂದು ಪ್ರತಿಭಟನೆ ಮಾಡ್ತಿಲ್ಲ. ಅವನನ್ನು ಹಿಟ್ಲರ್ ಗೆ ಹೋಲಿಸಬಹುದು. ಅವನು ಅನೇಕ ದೇವಾಲಯಗಳನ್ನು ಕೆಡವಿದ್ದಲ್ಲದೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿದ್ದ ಆಂಜನೇಯ ದೇವಸ್ಥಾನ ಕೆಡವಿ ಮಸೀದಿ ನಿರ್ಮಿಸಿದ್ದಾನೆ. ಹೆಂಗಸರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಹಿಂದೂಗಳ ಮಾರಣ ಹೋಮ ಮಾಡಿದ್ದಾನೆ. ಇಂತಹ ಟಿಪ್ಪು ಜಯಂತಿ ಆಚರಿಸಬೇಕೆ. ಟಿಪ್ಪು ಜಯಂತಿ ಆಚರಣೆ ಮಾಡುವುದೂ ಒಂದೇ, ಹಿಟ್ಲರ್ ಜಯಂತಿ ಆಚರಣೆ ಮಾಡುವುದೂ ಒಂದೇ ಎಂದು ಹೇಳಿದ್ದಾರೆ.

ವಾಲ್ಮೀಕಿ ಗುರುಪೀಠದ ಬ್ರಹ್ಮಾನಂದ ವಾಲ್ಮೀಕಿ ಸ್ವಾಮೀಜಿ ಮಾತನಾಡಿ, ಟಿಪ್ಪು ಕೈಯಲ್ಲಿ ಚಿತ್ರದುರ್ಗ ಕೋಟೆಯ ಕಲ್ಲನ್ನು ಅಲ್ಲಾಡಿಸಲು ಆಗ್ಲಿಲ್ಲ. ಟಿಪ್ಪು ಯಾವುದೇ ಯುದ್ಧವನ್ನು ನೇರವಾಗಿ ಗೆದ್ದಿಲ್ಲ. ಕುತಂತ್ರ ದಿಂದ್ಲೇ ಟಿಪ್ಪು ಯುದ್ಧಗಳನ್ನ ಗೆದ್ದಿದ್ದು. ಸೈನಿಕನಾಗಿದ್ದ ಹೈದರಾಲಿ ಕುತಂತ್ರದಿಂದ್ಲೇ ಅರಸನಾದ. ಟಿಪ್ಪು‌ಮಹಾನ್ ಅಂಜುಬುರುಕ. ಸೋಲಿಗೆ ಹೆದರಿ ರಾತ್ರಿ ಮಲಗಿದ್ದವರ ಮೇಲೆ ಟಿಪ್ಪು ಆಕ್ರಮಣ ಮಾಡುತ್ತಿದ್ದ ಎಂದರು.


ಇದರಲ್ಲಿ ಇನ್ನಷ್ಟು ಓದಿ :