ಜೀವಬೆದರಿಕೆ ಕರೆಗಳಿಂದ ಬೇಸತ್ತು ಆತ್ಮಹತ್ಯೆಗೆ ಯತ್ನ: ಮೇಟಿ ಸಿಡಿ ಸಂತ್ರಸ್ಥೆ

ಬಾಗಲಕೋಟೆ, ಭಾನುವಾರ, 13 ಆಗಸ್ಟ್ 2017 (16:25 IST)

ಮಾಜಿ ಸಚಿವ ಎಚ್.ವೈ.ಮೇಟಿ ಬೆಂಬಲಿಗರಿಂದ ನಿರಂತರ ಜೀವಬೆದರಿಕೆ ಕರೆಗಳು ಬರುತ್ತಿರುವುದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಸಂತ್ರಸ್ಥ ಮಹಿಳೆ ಹೇಳಿದ್ದಾಳೆ.
15 ದಿನಗಳ ಹಿಂದೆ ನನಗೆ ಬೆದರಿಕೆ ಕರೆಗಳು ಬಂದಿದ್ದವು. ಇದರಿಂದ ಡಿಪ್ರೆಶನ್‌ಗೆ ಒಳಗಾಗಿದ್ದೆ. ಮೇಟಿ ಬೆಂಬಲಿಗರಿಂದ ಹತ್ಯೆಯಾಗುವ ಬದಲು ನಾನೇ ಸಾಯೋದು ಮೇಲು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೆ ಎಂದು ತಿಳಿಸಿದ್ದಾಳೆ.
 
ಸಾಯುವ ಉದ್ದೇಶದಿಂದಲೇ ನಿದ್ರೆಮಾತ್ರೆಗಳನ್ನು ಸೇವಿಸಿದ್ದೇನೆ. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಮತ್ತಷ್ಟು ವಿವರಣೆ ನೀಡುತ್ತೇನೆ ಎಂದು ಸಂತ್ರಸ್ಥ ಮಹಿಳೆ ಹೇಳಿದ್ದಾಳೆ.
 
ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳೆಯನ್ನು ದಾಖಲಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದ್ದು ಚೇತರಿಕೆ ಕಂಡಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
 
ವಿಜಯಲಕ್ಷ್ಮಿ ಆತ್ಮಹತ್ಯೆ ಪ್ರಯತ್ನದಿಂದಾಗಿ ಮತ್ತೆ ಮಾಜಿ ಸಚಿವ ಎಚ್.ವೈ.ಮೇಟಿ ಪ್ರಕರಣ ಮತ್ತೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಎಚ್.ವೈ.ಮೇಟಿ ಮೇಟಿ ಸಿಡಿ ಕೇಸ್ ಮಹಿಳೆ ಆತ್ಮಹತ್ಯೆ ಯತ್ನ Woman Police H.y.meti Meti Cd Case

ಸುದ್ದಿಗಳು

news

ಬಿಜೆಪಿ 50 ಸ್ಥಾನಗಳನ್ನೂ ಗೆಲ್ಲೋದಿಲ್ಲ: ಸಿಎಂ ಸಿದ್ದರಾಮಯ್ಯ

ಆಳಂದ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಮಿಷನ್ 150 ಎನ್ನುವ ಭ್ರಮೆಯಲ್ಲಿದೆ. ಮುಂಬರುವ ...

news

ಎಚ್‌.ವೈ ಮೇಟಿ ಸಿಡಿ ಪ್ರಕರಣ ಸಂತ್ರಸ್ಥೆ ಆತ್ಮಹತ್ಯೆಗೆ ಯತ್ನ

ಬಾಗಲಕೋಟೆ: ಮಾಜಿ ಸಚಿವ ಎಚ್‌.ವೈ ಮೇಟಿ ಸಿಡಿ ಪ್ರಕರಣದಲ್ಲಿ ಸಂತ್ರಸ್ಥೆಯಾಗಿದ್ದ ವಿಜಯಲಕ್ಷ್ಮಿ ...

news

ಈಗ ಚುನಾವಣೆ ನಡೆದ್ರೆ ಕೇವಲ 80 ಸೀಟು ಮಾತ್ರ ಗೆಲ್ಲೋದು: ಅಮಿತ್ ಶಾ

ಬೆಂಗಳೂರು: ವಿಧಾನಸಭೆ ಚುನಾವಣೆ ಅವಧಿಗಿಂತ ಮುಂಚೆ ನಡೆದಲ್ಲಿ ಬಿಜೆಪಿ ಪಕ್ಷಕ್ಕೆ ಕೇವಲ 80 ಸೀಟುಗಳು ಮಾತ್ರ ...

news

ಪ್ರಚೋದನೆ ಮಾಡಲು ಅಮಿತ್ ಶಾ ಕರ್ನಾಟಕಕ್ಕೆ : ದಿನೇಶ್ ಗುಂಡೂರಾವ್

ಬೆಂಗಳೂರು: ವಿಸ್ತಾರಕರಿಂದ ಮನೆ ಮನೆಗೆ ಸುಳ್ಳು ವದಂತಿಗಳನ್ನು ಮುಟ್ಟಿಸಿ, ಜನರಿಗೆ ಪ್ರಚೋದನೆ ಮಾಡಲು ...

Widgets Magazine