40 ರೂ. ಬದಲು 40 ಲಕ್ಷ ರೂ. ಸ್ವೈಪ್ ಮಾಡಿದ ಟೋಲ್ ಅಧಿಕಾರಿ!

Udupi, ಮಂಗಳವಾರ, 14 ಮಾರ್ಚ್ 2017 (11:03 IST)

Widgets Magazine

ಉಡುಪಿ: ಬಿಲ್ ಪಾವತಿಸಲು ಡೆಬಿಟ್ ಕಾರ್ಡ್ ಬಳಸಿ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಡಿಜಿಟಲ್ ಇಂಡಿಯಾದ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ರೀತಿ ಮಾಡಲು ಹೋಗಿ ಇಲ್ಲೊಬ್ಬ ಟೋಲ್ ಅಧಿಕಾರಿ 40 ರೂ. ಬದಲು 40 ಲಕ್ಷ ರೂ. ಸ್ವೈಪ್ ಮಾಡಿದ್ದಾನೆ!


 
ಇದು ನಡೆದಿದ್ದು, ಮುಂಬೈ-ಕೊಚ್ಚಿ ಹೆದ್ದಾರಿಯಲ್ಲಿ ಉಡುಪಿ ಸಮೀಪದ ಟೋಲ್ ಗೇಟ್ ನಲ್ಲಿ. ವೈದ್ಯರೊಬ್ಬರು  40 ರೂ ಟೋಲ್ ಪಾವತಿಸಲು ಅಧಿಕಾರಿಗಳಿಗೆ ತಮ್ಮ ಡೆಬಿಟ್ ಕಾರ್ಡ್ ನೀಡಿದ್ದಾರೆ. ಆದರೆ ಆ ಭೂಪ 40 ರೂ. ಬದಲು 40 ಲಕ್ಷ ರೂ. ಸ್ವೈಪ್ ಮಾಡಿ ಕೊಟ್ಟಿದ್ದಾನೆ.
 
ನಂತರ ವೈದ್ಯರಿಗೆ ಟ್ರಾನ್ಸೇಕ್ಷನ್ ಮೆಸೇಜ್ ಬಂದಾಗ ಫುಲ್ ಶಾಕ್! ಟೋಲ್ ಅಧಿಕಾರಿ 40 ರೂ. ಬದಲು 40 ಲಕ್ಷ ರೂ. ಸ್ವೈಪ್ ಮಾಡಿದ್ದು ಗೊತ್ತಾಗಿದೆ. ಇದನ್ನು ಟೋಲ್ ಅಧಿಕಾರಿಗಳ ಗಮನಕ್ಕೆ ತಂದಾಗ ಅವರು ಒಪ್ಪಲಿಲ್ಲ.
 
ಕೊನೆಗೆ ಬೇರೆ ಉಪಾಯವಿಲ್ಲದೆ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಯಿತು. ಪೊಲೀಸರು ಬಾಯಿ ಬಿಡಿಸಿದಾಗ ಟೋಲ್ ಅಧಿಕಾರಿ ನಿಜ ಒಪ್ಪಿಕೊಂಡಿದ್ದಾನೆ. ನಂತರ ವೈದ್ಯರಿಗೆ ಹಣ ಮರಳಿಸಲಾಯಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಇಂದೇ ರೈತರ ಖಾತೆಗಳಿಗೆ ಬರ ಪರಿಹಾರದ ಹಣ.. ಸಿಎಂ ಟ್ವೀಟ್

ರಾಜ್ಯಾದ್ಯಂತ ಬರದಿಂದ ತತ್ತರಿಸಿರುವ ರೈತರ ಸಂಕಷ್ಟಕ್ಕೆ ಕೊನೆಗೂ ಸರ್ಕಾರ ಸ್ಪಂದಿಸಿದೆ. ಬರದಿಂದ ...

news

ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು: ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ...

news

ಇಂದಿನಿಂದ ಕರ್ನಾಟಕದಲ್ಲಿ ಚುನಾವಣಾ ಮಿಷನ್ ಜಾರಿಗೆ ಬಿಜೆಪಿ ಹೈಕಮಾಂಡ್ ಹುಕುಂ!

ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ನಂತರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಲು ರಾಜ್ಯ ...

news

ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಬರ್ಬರ ಹತ್ಯೆ

ಬೆಳ್ಳಂಬೆಳಗ್ಗೆ ಬೆಂಗಳೂರು ನಗರದ ಆನೇಕಲ್`ನಲ್ಲಿ ನೆತ್ತರು ಹರಿದಿದೆ. ಬೊಮ್ಮಸಂದ್ರದ ಪುರಸಭೆಯ ಬಿಜೆಪಿ ...

Widgets Magazine