Widgets Magazine
Widgets Magazine

ತೀವ್ರ ಕುತೂಹಲ ಕೆರಳಿಸಿದ ರಾಜ್ಯ ಬಜೆಟ್: ರೈತರ ಸಾಲ ಮನ್ನಾ ನಿರೀಕ್ಷೆ

ಬೆಂಗಳೂರು, ಮಂಗಳವಾರ, 14 ಮಾರ್ಚ್ 2017 (16:22 IST)

Widgets Magazine

ಬಹುನಿರೀಕ್ಷಿತ ರಾಜ್ಯ ಬಜೆಟ್ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ಬೆಳಿಗ್ಗೆ 11.30 ಕ್ಕೆ ಬಜೆಟ್ ಮಂಡನೆ ಮಾಡಲಿದ್ದಾರೆ. ರೈತರ ಸಾಲ ಮನ್ನಾಗೆ ಆದ್ಯತೆ ನೀಡಲಿದ್ದಾರೆಯೇ ಎನ್ನುವ ಕುತೂಹಲ ಕೆರಳಿಸಿದೆ. 
 
ರಾಜ್ಯ ಬಜೆಟ್ ಅಧಿವೇಶನ ಒಟ್ಟು 10 ದಿನಗಳ ಕಾಲ ಅಂದರೆ ಮಾರ್ಚ್ 28 ರವರೆಗೆ ನಡೆಯಲಿದ್ದು, ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪ ಸೇರಿದಂತೆ ಹಲವು ವಿಧೇಯಕಗಳಿಗೆ ತಿದ್ದುಪಡಿ ತರಲಾಗುವುದು ಎಂದು ಸ್ಪೀಕರ್ ಕೋಳಿವಾಡ್ ತಿಳಿಸಿದ್ದಾರೆ. 
 
ಬಜೆಟ್ ಅಧಿವೇಶನದಲ್ಲಿ ಶಾಸಕರ ಹಾಜರಾತಿ ಕಡ್ಡಾಯವಾಗಿದ್ದು, ಕಲಾಪ ಆರಂಭವಾದ ಒಂದು ಗಂಟೆಯ ನಂತರ ಆಗಮಿಸಿದ ಶಾಸಕರನ್ನು ಗೈರುಹಾಜರು ಎಂದು ಪರಿಗಣಿಸಲಾಗುವುದು ದಿನದಲ್ಲಿ ಎರಡು ಬಾರಿ ಶಾಸಕರ ಸಹಿಯನ್ನು ಪಡೆಯಲಾಗುತ್ತಿದ್ದು, ಶಾಸಕರ ಇರುವಿಕೆ ಅವಧಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.  
 
ಅಧಿವೇಶನ ಕಲಾಪದಲ್ಲಿ ಪಾಲ್ಗೊಂಡು ಜನತೆಯ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರದೊಂದಿಗೆ ಚರ್ಚಿಸುವುದು ಶಾಸಕರ ಕರ್ತವ್ಯ.ಜನಪ್ರತಿನಿಧಿಗಳೇ ಗೈರುಹಾಜರಾದಲ್ಲಿ ರಾಜ್ಯದ ಜನತೆಯ ಉದ್ಧಾರ ಹೇಗೆ ಸಾಧ್ಯ ಎಂದು ಸ್ಪೀಕರ್ ಕೋಳಿವಾಡ ಪ್ರಶ್ನಿಸಿದ್ದಾರೆ.

ಬಜೆಟ್‌ನಲ್ಲಿ ರೈತರ ಸಾಲ ಮನ್ನವಾಗಲಿದೆಯೇ? ಯಾವ ವಸ್ತುಗಳು ದುಬಾರಿಯಾಗಲಿವೆ, ಯಾವ ವಸ್ತುಗಳು ದರಗಳು ಇಳಿಕೆಯಾಗಲಿವೆ, ಸೇವಾ ತೆರಿಗೆ, ತಂತ್ರಜ್ಞಾನ ಕ್ಷೇತ್ರಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆಯೇ ಎನ್ನುವುದಕ್ಕೆ ನಾಳೆ ಉತ್ತರ ದೊರೆಯಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಾಜ್ಯ ಬಜೆಟ್: ಚುನಾವಣೆ ದೃಷ್ಟಿಯಿಂದ ಜನಪ್ರಿಯ ಬಜೆಟ್ ಮಂಡಿಸುತ್ತಾರಾ ಸಿದ್ದರಾಮಯ್ಯ..?

ರಾಜ್ಯಾದ್ಯಂತ ಬರದ ಛಾಯೆ, ಜನರಷ್ಟೇ ಅಲ್ಲ, ನೀರು ಆಹಾರಕ್ಕಾಗಿ ಪ್ರಾಣಿಗಳ ಪರದಾಟ. ಬೆಳೆದ ಬೆಳೆ ಹಾಳಾಗಿ ಸಾಲ ...

news

ಕಾಂಗ್ರೆಸ್ ಅಡಳಿತದಲ್ಲಿ ಕಾನೂನು ವ್ಯವಸ್ಥೆ ಸತ್ತುಹೋಗಿದೆ: ಯಡಿಯೂರಪ್ಪ ಗುಡುಗು

ಬೆಂಗಳೂರು: ಕಾಂಗ್ರೆಸ್ ಅಡಳಿತದಲ್ಲಿ ಕಾನೂನುವ್ಯವಸ್ಥೆ ಸತ್ತುಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ...

news

ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭಯವಿಲ್ಲ: ಕಾಗೋಡು

ಬೆಂಗಳೂರು: ಕರ್ನಾಟಕಕ್ಕೆ ಪ್ರದಾನಮಂತ್ರಿ ನರೇಂದ್ರ ಮೋದಿ ಭಯವಿಲ್ಲ. ಸಿಎಂ ಸಿದ್ದರಾಮಯ್ಯರ ಅನೇಕ ಜನಪರ ...

news

ಹೆಂಡತಿ ಮೇಲೇ ಅತ್ಯಾಚಾರಕ್ಕೆ ಸ್ನೇಹಿತನಿಗೆ ಸಹಕರಿಸಿದ ಪತಿ..!

ಜಗತ್ತಿನಲ್ಲಿ ಎಂಥೆಂಥಾ ಪಾಪಿಗಳಿರುತ್ತಾರೆ ನೋಡಿ.. ತನ್ನ ಹೆಂಡತಿ ಮಮೇಲೇ ಅತ್ಯಾಚಾರ ನಡೆಸಲು ವ್ಯಕ್ತಿಯೊಬ್ಬ ...

Widgets Magazine Widgets Magazine Widgets Magazine